ಡೆಂಗೆ ವಿರೋಧಿ ಮಾಸಾಚರಣೆ ಹಿನ್ನೆಲೆ ಪಾಲಕರಿಗೆ ಕಾರ್ಯಗಾರ

ರಾಯಚೂರು.03.ಆಗಸ್ಟ್.25: ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಹಯೋಗದೊಂದಿಗೆ ವಸತಿ ನಿಲಯ ಅಧಿಕಾರಿ ಸಿಬ್ಬಂದಿಗೆ ಡೆಂಗೆ ವಿರೋಧಿ ಮಾಸಾಚರಣೆ ಅಂಗವಾಗಿ ಒಂದು ದಿನದ ಕಾರ್ಯಗಾರ ನಡೆಯಿತು.

ಕಾರ್ಯಾಗಾರಕ್ಕೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಚಂದ್ರಶೇಖರಯ್ಯ ಸ್ವಾಮಿ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು.

ಈ ವೇಳೆ ಅವರು ಮಾತನಾಡಿ, ಜಗತ್ತಿನಲ್ಲಿ ಹಲವಾರು ಜಾತಿಯ ಸೊಳ್ಳೆಗಳಿವೆ. ಆದರೆ ಈಡೀಸ್ ಈಜಿಪ್ಟ್, ಅನಾಫಿಲಿಸ್, ಕ್ಯೂಲೆಕ್ಸ ಈ ಮೂರು ಸೊಳ್ಳೆಗಳು ಮನುಷ್ಯರನ್ನು ಕಾಡುವಂತಹವು. ಡೆಂಗೆ ಜ್ವರ ವೈರಸ್ ನಿಂದ ಬರುವ ಕಾಯಿಲೆ, ಸಾಂಕ್ರಾಮಿಕ ರೋಗವಾಗಿದ್ದು, ಈಡೀಸ್ ಈಜಿಪ್ಟೈ ಎಂಬ ಹೆಣ್ಣು ಸೋಂಕಿತ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆ. ಇದು ಹಗಲಲ್ಲೆ ಕಚ್ಚುತ್ತತ್ತೆ. ಈಡಿಸ್ ಈಜಿಪ್ಟೈ ಸೊಳ್ಳೆಗೆ ಟೈಗರ್ ಸೊಳ್ಳೆಯಂತಲೂ ಕರೆಯುತ್ತಾರೆ ಎಂದರು.

ಈ ಸೊಳ್ಳೆಯು ಸ್ವಚ್ಚವಾದ ನೀರಿನಲ್ಲಿ ಬೆಳೆಯುತ್ತದೆ. ನೂರರಿಂದ ಇನ್ನೂರು ತತ್ತಿಗಳನ್ನು ಇಡುತ್ತದೆ. ನೀರಿನ ಪರಿಕರಗಳಲ್ಲಿ, ಘನ ತ್ಯಾಜ್ಯ ವಸ್ತುಗಳಲ್ಲಿ, ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತವೆ. ನಿಂತ ನೀರು ಸೊಳ್ಳೆ ಉತ್ಪತ್ತಿ ತಾಣಗಳು ಎಂದು ತಿಳಿಸಿದರು.
ಡೆಂಗೆ ರಕ್ತಸ್ರಾವ ಡೆಂಗೆ ಶಾಕ್ ಸಿಂಡ್ರೋಮ್, ಡೆಂಗೆ ಜ್ವರಕ್ಕೆ ಚಿಕಿತ್ಸೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಯಂ ರಕ್ಷಣಾ ವಿಧಾನಗಳಾದ ಮೈ ತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಕೆ, ಕಿಡಿಕಿಗಳಿಗೆ ಜಾಲರಿ ಅಳವಡಿಕೆ, ಗುಡ್ ನೈಟ್ ಕ್ವಾಯಿಲ್ ಬಳಕೆ, ಸೊಳ್ಳೆ ನಾಶಕ ಬ್ಯಾಟ್‌ನಂತಹ ಸ್ವಯಂ ರಕ್ಷಣಾ ವಿಧಾನ, ರಾಸಾಯನಿಕ ವಿಧಾನ, ಜೈವಿಕ ವಿಧಾನಗಳ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ಮಾಡಿದರು.

ಈ ವೇಳೆ ತಾಲೂಕ ಆರೋಗ್ಯಾಧಿಕಾರಿ ಡಾ. ಪ್ರಜ್ವಲ್ ಕುಮಾರ ಅವರು ಮಾತನಾಡಿ, ನೀರಿನ ಪರಿಕರಗಳು ವಾರಕ್ಕೊಮ್ಮೆ ತೊಳೆದು ಒಣಗಿಸಬೇಕು. ಡ್ರೈ-ಡೇ ಮಾಡಬೇಕು. ಯಾವುದೇ ಜ್ವರ ಇರಲಿ ಹತ್ತಿರ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಡೆಂಗೆ ಜ್ವರ ನಿಯಂತ್ರಣ ನಮ್ಮೆಲ್ಲರ ಜವಬ್ದಾರಿ. ಪ್ರತಿಯೊಂದು ವಸತಿ ನಿಲಯದ ಒಳಾಂಗಣ ಹೊರಾಂಗಣ ಸುತ್ತಲು ಸ್ವಚ್ಚತೆಗೆ ಆದ್ಯತೆ ಕೊಡಬೇಕು ವಿದ್ಯಾರ್ಥಿಗಳಿಗೆ ಯಾವುದೇ ಜ್ವರ ಇರಲಿ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿ ರಕ್ತ ಪರೀಕ್ಷೆ ಮಾಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಸಂಧ್ಯಾ, ವಿವಿಧ ವಸತಿ ನಿಲಯಪಾಲಕರಾದ ಗಂಗಣ್ಣ, ನಾಗೇಂದ್ರ, ನಾಗವೇಣಿ, ಸುಕುಮಾರ್ ಸೇರಿದಂತೆ ಇತರರು ಇದ್ದರು.

prajaprabhat

Recent Posts

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

8 hours ago

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

11 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

11 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

11 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

11 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

11 hours ago