ಡಿಜಿಟಲ್ ವಂಚನೆಯಿಂದ ಜಾಗೃತಗೊಳ್ಳಬೇಕಾಗಿದೆ-ಪ್ರೊ.ಬಿ.ಎಸ್.ಬಿರಾದಾರ.!

ಬೀದರ.14ಫೆಬ್ರುವರಿ.25:-ಇಂದಿನ ಡಿಜಿಟಲ್ ಯುಗದ ವ್ಯವಹಾರದಲ್ಲಿ ಆನ್ಲೈನ್ ವಂಚನೆ ಹಾಗೂ ಮೋಸಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ವಂಚನೆಯಿಂದ ಎಲ್ಲರೂ ಎಚ್ಚರವಹಿಸಿ, ಜನಸಾಮಾನ್ಯರು ಜಾಗೃತಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ನುಡಿದರು.


      ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಡಿಜಿಟಲ್ ತಂತ್ತಜ್ಞಾನ ಹಾಗೂ ಸೈಬರ್ ಸೆಕ್ಯೂರಿಟಿ ಅರಿವು’ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
      ಪ್ರತಿದಿನ ಎಲ್ಲೋ ಒಂದು ಕಡೆ ಸೈಬರ್ ಅಪರಾಧಗಳು ಜರುಗುತ್ತಲೇ ಇವೆ. ವಂಚಕರು ವಿನೂತನ ತಂತ್ರಜ್ಞಾನದಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.


      ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಲ್ಕಿ ಉಪವಿಭಾಗದ  ಪೊಲೀಸ್ ಉಪ ಅಧೀಕ್ಷಕರಾದ  ಭಾಲ್ಕಿಯ ಶಿವಾನಂದ ಪವಾಡಶೆಟ್ಟಿ ಮಾತನಾಡಿ, ವ್ಯಕ್ತಿಗಳ ವಯಕ್ತಿಕ ಮಾಹಿತಿ ಅವರಿಗೆ ಗೊತ್ತಿಲ್ಲದಂತೆಯೇ ವಂಚಕರಿಗೆ ಸುಲಭವಾಗಿ ದೊರೆಯುತ್ತಿರುವುದು ದುರಂತವಾಗಿದೆ.

ಪ್ರತಿಯೊಬ್ಬರು ತಮ್ಮ ಡಿವೈಸ್‍ಗಳನ್ನು ಅತ್ಯಂತ ಜಾಗೃತೆವÀಹಿಸಿ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೊಬೈಲ್ ಬಳಕೆಯ ಸಂದರ್ಭದಲ್ಲೂ ಸಹ ಸದಾ ಎಚ್ಚರವಹಿಸಬೇಕಾಗಿದೆ ಎಂದರು.


       ಭಾಲ್ಕಿ ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕರಾದ  ಗುರುಪಾದ ಬಿರಾದಾರ ಮಾತನಾಡಿ, ವಾಟ್ಸಪ್, ಫೇಸ್‍ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಬಳಕೆದಾರರು ಯಾವುದೋ ಗ್ರೂಪಿಗೆ ಅಡ್ಮಿನ್ ಆಗಿದ್ದರೆ ಆಗ್ರೂಪಿಗೆ ಅಪರಾಧದ ಅಂಶಗಳು ಹರಿದಾಡಿದರೆ ಆ ಗ್ರೂಪಿನ ಅಡಮಿನ್ ಅವರನ್ನೂ ಆರೋಪಿತರನ್ನಾಗಿ ಮಾಡಬಹುದಾಗಿದೆ. ವಂಚಕರಿಂದ ಫೇಕ್‍ಕಾಲ್, ಹನಿಟ್ರ್ಯಾಪ್, ವಿಡಿಯೋಕಾಲ್, ಓಟಿಪಿ ಬಳಕೆ ಹಾಗೂ ಎಟಿಎಮ್ ಮೋಸದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಇಂದಿನ ಆಧುನಿಕ ಯುಗದಲ್ಲಿ ಇವುಗಳ ನಿಯಂತ್ರಣ ತುರ್ತಾಗಿದೆ. ಇಲ್ಲದಿದ್ದರೆ ಅಮಾಯಕರು ಮೋಸಗಾರರ ವಂಚನೆಗೆ ಒಳಗಾಗುತ್ತಾರೆ ಈ ಬಗ್ಗೆ ಮೋಸಕ್ಕೆ ಒಳಗಾದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲೆಯಲ್ಲಿನ ಸೈಬರ್ ಅಪರಾದ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾನ ಬಳಕೆ ಮಾಡುವಾಗ ಜಾಗೃತರಾಗಿರಬೇಕು. ಸುಳ್ಳು ಕರೆಗಳಿಗೆ ಮೋಸ ಹೋಗದಂತೆ ನಿಗಾವಹಿಸಬೇಕು ಎಂದು ಹೇಳಿದರು.  

 
     ಈ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನದ ಅರಿವು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಶೇಷ ಉಪನ್ಯಾಸಕರಾದ ತಾಂತ್ರಿಕ ನಿರ್ದೇಶಕರು, ಭಾರತ ಸರ್ಕಾರ ರಾಷ್ಟ್ರೀಯ ಮಾಹಿತಿ ಕೇಂದ್ರ,(ಎನ್.ಐ.ಸಿ)ಯ ಬೀದರನ ಕೆ.ಶ್ರೀನಿವಾಸ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಶಿಕ್ಷಣ ನಿಕಾಯದ ಡೀನರಾದ ಡಾ.ಮಲ್ಲಿಕಾರ್ಜುನ ಕನಕಟ್ಟೆ, ವಾಣಿಜ್ಯ ಹಾಗೂ ನಿರ್ವಹಣಾ ನಿಕಾಯದ ಡೀನರಾದ ಡಾ.ಶರಣಪ್ಪ ಮಲಗೊಂಡ, ಧನ್ನೂರಾ ಪೊಲೀಸ್ ಉಪನಿರೀಕ್ಷಕರಾದ ವಿಶ್ವರಾಧ್ಯರವರು ಹಾಗೂ ಬೀದರ ಜಿಲ್ಲಾಧಿಕಾರಿಗಳ ಕಛೇರಿಯ ಅಜಿತಕುಮಾರ ಎ.ಡಿ.ಐ.ಒ, ಭರತರಾಜ್, ಬೀದರ, ಕೇಶವ ಎನ್.ಐ.ಸಿ ಸಿಬ್ಬಂದಿಗಳು ಸೇರಿದಮತೆ ಇತರರು ಉಪಸ್ಥಿತರಿದ್ದರು.  

prajaprabhat

Recent Posts

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

5 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

8 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

8 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

8 hours ago

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

15 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

15 hours ago