ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಭೇಟಿ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಯಾವುದೇ ವಿವಾದ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇಂದು ಬೆಳಿಗ್ಗೆಯೇ ಡಿಕೆಶಿ ನಿವಾಸಕ್ಕೆ ಸಂಸದ ರಾಘವೇಂದ್ರ ಬಂದಿದ್ದಾರೆ. ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿ ಸಂಸದರು ಭೇಟಿ ನೀಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿತ್ತು. ಹೊರಬಂದ ಬಳಿಕ ಮಾಧ್ಯಮಗಳು ಭೇಟಿಯ ಉದ್ದೇಶದ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ಮಾತನಾಡಿದ ಅವರು ‘ಈ ಭೇಟಿಗೆ ಯಾವುದೇ ರಾಜಕೀಯ ಕಾರಣಗಳಿಲ್ಲ. ನನ್ನ ಮಗನ ಮದುವೆಯಿದೆ. ಅವರು ಈ ರಾಜ್ಯದ ಗೌರವಾನ್ವಿತ ಉಪಮುಖ್ಯಮಂತ್ರಿಗಳು. ಹೀಗಾಗಿ ಮದುವೆಗೆ ಕರೆಯಲು ಬಂದಿದ್ದೆ ಅಷ್ಟೇ. ಇದಕ್ಕೆ ರಾಜಕೀಯ ಉದ್ದೇಶ ಏನೂ ಇಲ್ಲ. ಈ ಬಗ್ಗೆ ವಿವಾದ ಬೇಡ’ ಎಂದಿದ್ದಾರೆ.
ಐದು ನಿಮಿಷ ಮದುವೆ ವಿಚಾರ ಮಾತನಾಡಿದ್ವಿ. ಬಳಿಕ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮಾತನಾಡಿದ್ದೇವೆ ಅಷ್ಟೇ. ಬೇರೇನೂ ಇಲ್ಲ. ಅವರೂ ಮದುವೆಗೆ ಬರ್ತೀನಿ ಎಂದಿದ್ದಾರೆ. ಇನ್ನೂ ಸಾಕಷ್ಟು ಜನ ನಾಯಕರನ್ನು ಮದುವೆಗೆ ಆಹ್ವಾನಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು, (ಏಪ್ರಿಲ್ 19):-* ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಗೊತ್ತಾಗಿದೆ. ಈ…
ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…
ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…
ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…
ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…
ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…