ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದೆ; ಯುದ್ಧನೌಕೆ, ಸೇನಾ ಸಾಮಗ್ರಿಗಳ ರವಾನೆ

ಇಸ್ಲಾಮಾಬಾದ.05.ಮೇ.25:- ಭಾರತ ಪಾಕ್‌ ಸೈನಿಕರು ಸತತ 11 ನೇ ದಿನವೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಯುದ್ಧೋನ್ಮಾದಲ್ಲಿದ್ದು,  ಈ ನಡುವೆ ಪಾಕಿಸ್ತಾನಕ್ಕೆ ಬೆಂಬಲಿತವಾಗಿ ಚೀನಾ ಹಾಗೂ ಟರ್ಕಿ ದೇಶಗಳು ನಿಂತಿವೆ.

ಈಗಾಗಲೇ ಟರ್ಕಿ ತನ್ನ ಯುದ್ಧ (Pak -Turkey) ವಿಮಾನಗಳನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಟರ್ಕಿಯ ಸಿ -130 ಮಿಲಿಟರಿ ಸಾರಿಗೆ ವಿಮಾನಗಳು ಇಸ್ಲಾಮಾಬಾದ್‌ನಲ್ಲಿ ಲ್ಯಾಂಡ್‌ ಆಗಿದ್ದವು. ಇದೀಗ ಟರ್ಕಿಯ ನೌಕಾ ಹಡಗು ಟಿಸಿಜಿ ಬುಯುಕಾಡಾ ಪಾಕಿಸ್ತಾನವನ್ನು ತಲುಪಿದೆ. ಗಮನಾರ್ಹವಾಗಿ, ಪಾಕಿಸ್ತಾನವು ಇದನ್ನು ‘ಸದ್ಭಾವನಾ ಭೇಟಿ’ ಎಂದು ಕರೆದಿದೆ.

ಟರ್ಕಿಶ್ ನೌಕಾಪಡೆಯ ಹಡಗು ಟಿಸಿಜಿ ಬುಯುಕಾಡಾ ಬಂದರಿಗೆ ಸೌಹಾರ್ದ ಭೇಟಿಗಾಗಿ ಆಗಮಿಸಿದೆ. ಹಡಗನ್ನು ಟರ್ಕಿಶ್ ಮತ್ತು ಪಾಕಿಸ್ತಾನ ನೌಕಾಪಡೆಯ ಅಧಿಕಾರಿಗಳು ಸ್ವಾಗತಿಸಿದರು. .

ಈ ಭೇಟಿಯು ಎರಡು ನೌಕಾಪಡೆಗಳ ನಡುವಿನ ತಿಳುವಳಿಕೆಯನ್ನು ಹೆಚ್ಚಿಸುವ ಮತ್ತು ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ” ಎಂದು ಪಾಕಿಸ್ತಾನಿ ನೌಕಾಪಡೆ ತಿಳಿಸಿದೆ. ಪಾಕಿಸ್ತಾನ ನೌಕಾಪಡೆ ಟರ್ಕಿಯ ನೌಕೆಯ ಚಿತ್ರವನ್ನು ಹಂಚಿಕೊಂಡಿದೆ. ಅದರಲ್ಲಿ ಜಂಟಿ ತಾಲೀಮವನ್ನು ನಡೆಸಿವೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಬೆಳವಣಿಗೆ ನಡಿದಿದೆ. ಸಿಂಧೂ ನದಿ ಒಪ್ಪಂದವನ್ನು ಕೈಬಿಟ್ಟಿರುವುದಕ್ಕೆ ಪಾಕಿಸ್ತಾನ ಭಾರತಕ್ಕೆ ಗೊಡ್ಡು ಬೆದರಿಕೆಯನ್ನು ಹಾಕಿದೆ. ಪಾಕಿಸ್ತಾನದ ರಕ್ಷಣಾ ಮಂತ್ರಿ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತವು ಸಿಂಧೂ ಒಪ್ಪಂದದಡಿಯಲ್ಲಿ ದೇಶದ ಪಾಲಿನ ನೀರನ್ನು ಬೇರೆಡೆಗೆ ತಿರುಗಿಸಲು ಬೇರೆ ಯಾವುದೇ ರೀತಿಯ ಪ್ರಯತ್ನವನ್ನು ಮಾಡಿದರೆ ಅದನ್ನು ಧ್ವಂಸಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಸಿಂಧೂ ಜಲ ಒಪ್ಪಂದ ರದ್ದಾದ ನಂತರ ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರು ಬಿಡುಗಡೆ ರದ್ದತಿ ಹಾಗೂ ಬೇರೆಡೆಗೆ ತಿರುಗಿಸಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು “ಯುದ್ಧದ ಕೃತ್ಯ” ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಹೇಳಿತ್ತು.

ಮತ್ತೊಬ್ಬ ಪಾಕ್‌ ಸಚಿವ ನಮ್ಮ ಬಳಿ 130 ಅಣ್ವಸ್ತ್ರಗಳಿವೆ. ಅದನ್ನು ಭಾರತಕ್ಕಾಗಿಯೇ ಮೀಸಲಾಗಿಡಲಾಗಿದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿ ಛೀಮಾರಿ ಹಾಕಿಸಿಕೊಂಡಿದ್ದರು. ಭಾರತದ ರಾಜತಾಂತ್ರಿಕ ನಡೆಗೆ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ನೀರಿಗಾಗಿ ಅಂಗಲಾಚುತ್ತಿದೆ. 1960 ರಲ್ಲಿ ಸಹಿ ಹಾಕಲ್ಪಟ್ಟ ಮತ್ತು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಆರು ನದಿಗಳ ವಿಭಜನೆಯನ್ನು ನಿಯಂತ್ರಿಸುತ್ತದೆ. ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲುಜ್‌ಗಳ ನೀರು ಸರಬರಾಜು ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು ಇದರಿಂದ ಪಾಕಿಸ್ತಾನದ ಲಕ್ಷಾಂತರ ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ.

prajaprabhat

Recent Posts

ಬ್ಯಾಕ್ ಲಾಗ್’ ಹುದ್ದೆಗಳ ಭರ್ತಿ : ಸರ್ಕಾರದಿಂದ ಆದೇಶ

ಬೆಂಗಳೂರು.07.ಆಗಸ್ಟ್.25:- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್…

1 hour ago

ಜಾರ ಲಂಬಾಣಿ  ಸಮಾಜಕ್ಕೆ  ಶೇ೬ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಬಸವರಾಜ ಪವಾರ ಆಗ್ರಹ

ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ  ಸಮಾಜಕ್ಕೆ  ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ…

1 hour ago

ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ- ಸಚಿವ ಈಶ್ವರ ಖಂಡ್ರೆ

ಬೀದರ.07.ಆಗಸ್ಟ್.25:- ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಮತ್ತು…

1 hour ago

ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು

ರಾಯಚೂರು.07.ಆಗಸ್ಟ್.25:- ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿಗಳ ಪ್ರವಾಸವು ಮಳೆಯಿಂದಾಗಿ ದಿಢೀರ್ ರದ್ದಾಗಿದ್ದರಿಂದ, ಬೆಂಗಳೂರಿನಲ್ಲಿ ಆಗಸ್ಟ್ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ…

3 hours ago

ಶಾಸಕರಾದ ಬಸನಗೌಡ ದದ್ದಲ್ ಗ್ರಾಮೀಣ ಪ್ರದೇಶದಲ್ಲಿ ಸಂಚಾರ; ಏತ ನೀರಾವರಿ ಕಾಮಗಾರಿ ವೀಕ್ಷಣೆ

ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್…

3 hours ago

ಸೇನಾ ನೇಮಕಾತಿ ರ‍್ಯಾಲಿ: ವಸತಿ ವ್ಯವಸ್ಥೆಗೆ<br>ಅಡುಗೆದಾರರು, ವಾರ್ಡನ್ ನಿಯೋಜನೆ

ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ…

3 hours ago