ಜ್ಞಾನಸುಧಾ ವಿದ್ಯಾಲಯದಲ್ಲಿ ಸಂಭ್ರಮದಿಂದ ವಿಶ್ವ ಸಂಗೀತ ದಿನಾಚರಣೆ


ಬೀದರ.22.ಜೂನ್.25:- ಜಿಎಸ್‍ವಿ ಸರಿಗಮಪ’ ಸ್ಪರ್ಧೆ: ಗಾನ ಸುಧೆ ಹರಿಸಿದ ವಿದ್ಯಾರ್ಥಿಗಳು
ಬೀದರ್: ನಗರದ ಮಾಮನಕೇರಿಯಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಶಾಲೆಯಾದ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಮ್ಮ ಸುಮಧುರ ಕಂಠದಲ್ಲಿ ಸಂಗೀತ ಸುಧೆಯನ್ನು ಹರಿಸಿದರು.


ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದ್ದ ‘ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಿಂದಾಗಿ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಸಂಗೀತ ಹಬ್ಬದ ವಾತಾವರಣ ನಿರ್ಮಿತಗೊಂಡಿತು. ಸ್ಪರ್ಧಾರ್ಥಿಗಳು ಸುಶ್ರಾವ್ಯವಾಗಿ ಹಾಡುವ ಮೂಲಕ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣಬಡಿಸಿದರು.
‘ಹುಟ್ಟೋದ್ಯಾಕೆ ಸಾಯೋದ್ಯಾಕೆ, ಏನಾದರು ಸಾಧಿಸಿ ಹೋಗೋಕೆ…,’ ‘ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯ ಭೂಮಿ ನಮ್ಮ ದೇವಾಲಂiÀ…’, ‘ದಿಲ್ ದಿಯಾ ಹೆ ಜಾನ್ ಭಿ ದೆಂಗೆ…’ ಈ ಮೂರು ಹಾಡುಗಳನ್ನು ಜಿಎಸ್‍ವಿ ಸರಿಗಮಪ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.


ಎರಡು ವಿಭಾಗದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಪಾಲ್ಗೊಂಡ ಒಟ್ಟು 16 ಸ್ಪರ್ಧಾಳುಗಳು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಅತ್ಯುತ್ತಮವಾಗಿ ಹಾಡುವ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ಕವಿ ಗುಲ್ಜಾರ್ ಅವರು ರಚಿಸಿದ ಹಾಡುಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಅನಂತನಾಗ ಅವರು ನಟಿಸಿದ ಚಿತ್ರಗಳ ಹಾಡುಗಳನ್ನು ಹಾಡಿದರು.


‘ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ…’ ‘ಮನೆಯೇ ಮಂತ್ರಾ¯ಯ, ಮನಸೇ ದೇವಾಲಯ,’ ‘ಕನಸಲ್ಲೂ ನೀನೆ ಮನಸಲ್ಲೂ ನೀನೆ…’, ‘ದೇವರೆ ನಿನ್ನ ಪಾದ’, ‘ನಾನೇನು ಮಾಡಿಲ್ಲ’, ‘ಅರಳಿದೆ ಅರಳಿದೆ ಮುದುಡಿದ ತಾವರೆ’, ‘ಕಂಗಳು ತುಂಬಿರಲು ಕಂಬನಿ ಧಾರೆಯಲಿ…’ , ‘ತುಜ್ಸೆ ನಾರಾಜ್ ನಹಿ ಜಿಂದಗಿ…,’ ‘ಆಜ ಸನಮ ಮಧೂರ್ ಮೆ ಹಮ್…’, ‘ಬರ್ಸೋ ರೆ ಮೇಘ ಮೇಘ…’, ‘ಮೈನೆ ತೇರೆಲಿಯೇ ಹಿ ಸಾತ್ ರಂಗ್ ಕೆ ಸಪ್ನೆ ಚುನೆ…’ ಈ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಸ್ಪರ್ಧಾಳುಗಳು ಎಲ್ಲರ ಚಪ್ಪಾಳೆಗೆ ಪಾತ್ರರಾದರು.


ಎರಡು ವಿಭಾಗದಲ್ಲಿ ನಡೆದ ಅಂತಿಮ ಸ್ಪರ್ಧೆಗೆ ಆಯ್ಕೆಯಾದ 16 ವಿದ್ಯಾರ್ಥಿಗಳಲ್ಲಿ 5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳ ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಅನನ್ಯ ರಂಜಿತ್ ಪ್ರಥಮ ಬಹುಮಾನ, ಸನ್ನಿಧಿ ಆಕಾಶ್ ಪಾಟೀಲ್ ದ್ವಿತೀಯ ಬಹುಮಾನ ಹಾಗೂ ಆಧ್ಯಾ ಡಾ. ರಿತೇಶ್ ತೃತೀಯ ಬಹುಮಾನ ಬಾಚಿಕೊಂಡರು. 6ನೇ ತರಗತಿ ವಿದ್ಯಾರ್ಥಿನಿ ಆಶ್‍ಲೀನ್ ಅಮಿತಕುಮಾರ್ ಅವರು ಸಮಧಾನಕರ ಬಹುಮಾನ ಪಡೆದರು. ಈ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಸಾಯಿ ಕಿರಣ ಉಮಾಕಾಂತ, ಬಸವಶ್ರೀ ನಾಗಪ್ಪ, ವೈಷ್ಣವಿ ರಾಮಕೃಷ್ಣ ಅವರು ಭಾಗವಹಿಸಿದ್ದರು.


ಇನ್ನ 8ನೇ ತರಗತಿಯಿಂದ 10ನೇ ತರಗತಿ ವರೆಗಿನ ಪ್ರೌಢ ಶಾಲೆ ವಿದ್ಯಾರ್ಥಿಗಳ ವಿಭಾಗದ ಸ್ಪರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಯುಕ್ತಿ ಗೌತಮ ಅರಳಿ ಪ್ರಥಮ ಬಹುಮಾನ, 9ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ಅಲ್ಲಮಪ್ರಭು ದ್ವಿತೀಯ ಬಹುಮಾನ, 8ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ಸುರೇಶ್ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು. ಹರ್ಷ ಸಂತೋಷ ಸಮಧಾನಕರ ಬಹುಮಾನ ಪಡೆದರು.


ಈ ವಿಭಾಗದ ಸ್ಪರ್ಧೆಯಲ್ಲಿ ಆನ್‍ಡ್ರಿನಾ ಯಶವಂತ್, ಯಶ್ ಕಲ್ಲಪ್ಪ ಪಾಟೀಲ್, ಲಿಸಾ ಮೋಹನ್, ಕೌಶಿಕ್ ಸಂಗಮೇಶ್ವರ ಅವರು ಪಾಲ್ಗೊಂಡಿದ್ದರು.

ಇದಕ್ಕೂ ಮುಂಚೆ ನಡೆದ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಅವರು ‘ಮಾನಸಿಕ ಒತ್ತಡ ದೂರ ಮಾಡುವಲ್ಲಿ ಯೋಗ ಮತ್ತು ಸಂಗೀತ ತುಂಬಾ ಸಹಕಾರಿಯಾಗಿವೆ. ಪ್ರತಿದಿನ ಯೋಗ ಮಾಡುವುದರಿಂದ ದೈಹಿಕವಾಗಿ ಆರೋಗ್ಯವಾಗಿರಬಹುದು. ಅದೇ ರೀತಿ ಸಂಗೀತ ಕೇಳುವ ಹವ್ಯಾಸ ಬೆಳೆಸಿಕೊಂಡರೆ ಆಲಿಸುವ ಸಾಮಥ್ರ್ಯದೊಂದಿಗೆ ಏಕಾಗ್ರತೆಯು ವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.


‘ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಂಗೀತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಹಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ಜಿಎಸ್‍ವಿ ಸರಿಗಮಪ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಸಂಗೀತ ನಮ್ಮಲ್ಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆ ವೃದ್ಧಿಸುವ ಒಂದು ಅದ್ಭುತವಾದ ಕಲೆಯಾಗಿದೆ.

ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ಸಂದೇಶಗಳು ಇರುವ ಉತ್ತಮವಾದ ಹಾಡುಗಳನ್ನು ಆಲಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ, ಮುನೇಶ್ವರ ಲಾಖಾ ಸಲಹೆ ಮಾಡಿದರು.


ಹುಬ್ಬಳ್ಳಿಯ ಗಾಯಕರಾದ ಸುಧೀಂದ್ರ ವಿ. ಪದಕಿ, ಹುಮನಾಬಾದ್‍ನ ಗಾಯಕರಾದ ಸುಗೌಂಕರ್ ಅಜಯ್ ಪಂಡಿತರಾವ್ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಪ್ರಮುಖರಾದ ಪೂಜಾ ಜಾರ್ಜ್ ಸಾಮುವೇಲ್ ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದ ಕಲ್ಪನಾ ಮೋದಿ, ಮೇಲ್ವಿಚಾರಕರಾದ ರಜನಿ ಮೈಲೂರಕರ್, ಸಾಯಿಗೀತಾ ಪಾಟೀಲ್ ಉಪಸ್ಥಿತರಿದ್ದರು.

prajaprabhat

Recent Posts

ನಾಳೆಯಿಂದ ಮುಂಗಾರು ಅಧಿವೇಶನ ಆರಂಭ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆ ಸಜ್ಜು

ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…

4 hours ago

KSRTC ಬಸ್, ಕಾರು ಡಿಕ್ಕಿ 2 ಮೃತೀವ್

ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾ‌ರ್ ನಲ್ಲಿದ್ದ ತಂದೆ ಮಗ…

4 hours ago

ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್‌.ಎನ್‌.ಅಶೋಕ್

ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…

6 hours ago

ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಶಿಕ್ಷಣ ಇಲಾಖೆಯಿಂದ ಬಿಡುಗಡೆ.

ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…

7 hours ago

ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ  ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…

12 hours ago

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ  ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…

12 hours ago