ಜೂನ್. 16 ರಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ. ಜೂನ್. 14.( ಕರ್ನಾಟಕ ವಾರ್ತೆ):- ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ್ ಅವರು ಜೂನ್. 16 ಮತ್ತು 17. ರಂದು  ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜೂನ್. 16 ರಂದು ಬೆಳಿಗ್ಗೆ 9 ಗಂಟೆಗೆ ಗದಗ ರಸ್ತೆ ಮೂಲಕ ಸಚಿವರು ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿ. ಬೆಳಿಗ್ಗೆ 10:30 ರಿಂದ 12 ಗಂಟೆಗಳವರೆಗೆ ಅಂಜನಾದ್ರಿ ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನ ವೀಕ್ಷಣೆ ಮಾಡುವರು.


ಮಧ್ಯಾಹ್ನ 12 ಗಂಟೆಯಿಂದ 12:30 ರವರೆಗೆ ಅಂಜನಾದ್ರಿ ಅಭಿವೃದ್ಧಿ ಕುರಿತು ಪಿಪಿಟಿ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡುವರು. ಮಧ್ಯಾಹ್ನ 12:30 ರಿಂದ 1 ಗಂಟೆಯವರೆಗೆ ಅಂಜನಾದ್ರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 1:30 ಕ್ಕೆ ಅಂಜನಾದ್ರಿಯಿಂದ ರಸ್ತೆ ಮೂಲಕ ಹುಚ್ಚಪ್ಪಯ್ಯನ ಮಠಕ್ಕೆ ಪ್ರಯಾಣಿಸುವರು.

ಮಧ್ಯಾಹ್ನ 1:30 ರಿಂದ 2 ಗಂಟೆಗಳವರೆಗೆ ಗಂಗಾವತಿ ತಾಲ್ಲೂಕಿನ ಹುಚ್ಚಪ್ಪಯ್ಯನ ಮಠ ಮತ್ತು ಅಂಬಿಗರ ಬಾಗಿಲು ವೀಕ್ಷಣೆ ಮಾಡುವರು. ಮಧ್ಯಾಹ್ನ 2:30 ಕ್ಕೆ ಹುಚ್ಚಪ್ಪಯ್ಯನ ಮಠದಿಂದ ರಸ್ತೆ ಮೂಲಕ ಚಿಂತಾಮಣಿ ಮಠಕ್ಕೆ ಪ್ರಯಾಣಿಸಿ ಮಧ್ಯಾಹ್ನ 3 ರಿಂದ 3:30 ರವರೆಗೆ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ಚಿಂತಾಮಣಿ ಮಠ ( ನರಸಿಂಹ ದೇವಾಲಯ) ವೀಕ್ಷಣೆ ‌ಮಾಡುವರು. ಮಧ್ಯಾಹ್ನ 3:30 ರಿಂದ 4:30 ರವರೆಗೆ ಕಾಯ್ದಿರಿಸಿದೆ.ಸಂಜೆ 4:30 ಕ್ಕೆ  ಚಿಂತಾಮಣಿ ಮಠದಿಂದ ರಸ್ತೆ ಮೂಲಕ ಗಗನ್ ಮಹಲ್‌ ಪ್ರಯಾಣ ಬೆಳೆಸಿ ಸಂಜೆ 4:40 ರಿಂದ 4:50 ರವರೆಗೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿರುವ ಗಗನ್ ಮಹಲ್ ವೀಕ್ಷಣೆ ಮಾಡುವರು. ಸಂಜೆ 4:50 ಕ್ಕೆ ಗಗನ್ ಮಹಲನಿಂದ ರಸ್ತೆ ಮೂಲಕ ಬಹದ್ದೂರ್ ಬಂಡೆ ಕೋಟೆಗೆ ಪ್ರಯಾಣಿಸುವರು. ಸಂಜೆ 5 ರಿಂದ 5:30 ರವರೆಗೆ ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡೆ ಕೋಟೆ ವೀಕ್ಷಣೆ ಮಾಡುವರು. ಸಂಜೆ 5:30 ಕ್ಕೆ ಬಹದ್ದೂರ್ ಬಂಡೆ ಕೋಟೆಯಿಂದ ರಸ್ತೆ ಮೂಲಕ ಕೊಪ್ಪಳಕ್ಕೆ ಪ್ರಯಾಣ ಬೆಳೆಸುವರು. ಸಂಜೆ 6 ಗಂಟೆಗೆ ಕೊಪ್ಪಳ. ಸಂಜೆ 7:‌ 30 ಕ್ಕೆ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಭೇಟಿ ಮಾಡುವರು. ರಾತ್ರಿ 8 ಗಂಟೆಗೆ ಶ್ರೀ ಗವಿಸಿದ್ದೇಶ್ವರ ಮಠದಿಂದ ಹೊಸಪೇಟೆಗೆ ಪ್ರಯಾಣ ಬೆಳೆಸಿ ವೈಕುಂಠ ವಸತಿ ಗೃಹದಲ್ಲಿ ವಾಸ್ತವ್ಯ ಮಾಡುವರು.


ಜೂನ್. 17 ರಂದು ಬೆಳಿಗ್ಗೆ 10 ಗಂಟೆಗೆ ‌ಕೊಪ್ಪಳ ರಸ್ತೆ ಮೂಲಕ ಗಂಗಾವತಿ ತಾಲ್ಲೂಕಿನ ಹಿರೆಬೆಣಕಲಗೆ ಆಗಮಿಸಿ ಬೆಳಿಗ್ಗೆ 11 ರಿಂದ 12 ಗಂಟೆಗಳವರೆಗೆ ಹಿರೇಬೆಣಕಲ್‌ ಪ್ರಾಗೈತಿಹಾಸಿಕ ನೆಲೆಗಳ ವೀಕ್ಷಣೆ ಮಾಡುವರು ನಂತರ ಮಧ್ಯಾಹ್ನ 12:30 ರಿಂದ 1 ಗಂಟೆಗಳವರೆಗೆ ಹಿರೆಬೆಣಕಲನಲ್ಲಿ ಪತ್ರಿಕಾಗೋಷ್ಠಿ ನಡೆಸುವರು.

ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಕಾಯ್ದಿರಿಸಿದೆ. ಸಂಜೆ 4 ಗಂಟೆಗೆ ಗಂಗಾವತಿಯಿಂದ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣ ‌ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಎಲ್ಲಾ ಷರತ್ತುಗಳನ್ನು ಇವರೇ ಒಪ್ಪಿ ಒಳ ಬಂದಿರುತ್ತಾರೆ, ಈಗ ಇವರೇ ಪ್ರತಿಭಟಿಸುತ್ತಾರೆ,

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…

2 hours ago

ಮಹಾನಗರ ಪಾಲಿಕೆ’ಗೆ 344 ಹೊಸ ಹುದ್ದೆ ಮಂಜೂರು!

ಬೀದರ.02.ಆಗಸ್ಟ್.25:- ಬೀದರ್‌ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ  ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…

8 hours ago

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ; ಶಾರುಖ್, ಮ್ಯಾಸ್ಸಿ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ

ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…

8 hours ago

ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ಸ   ಸನ್ಮಾನಿಸಿದರು

ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…

8 hours ago

ಕೇಂದ್ರ ಸಚಿವ ಗಡ್ಕರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…

9 hours ago

ಮಹಾರಾಷ್ಟ್ರ: ದಹಿ ಹಂಡಿಯ ಗೋವಿಂದರಿಗೆ ವಿಮಾ ರಕ್ಷಣೆಯನ್ನು ಸರ್ಕಾರ ಘೋಷಿಸಿದೆ.

ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…

14 hours ago