ಜಿ ವಿ ಗೌಡ  ಕಾಲೇಜಿನ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಸಂಬಂಧಿಸಿದ ಪುಸ್ತಕಗಳ ವಿತರಣೆ.

ಚಾಮರಾಜನಗರ.26.ಫೆ.25:- ಹನೂರು ಪಟ್ಟಣದ ಜಿ ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಪರ ಕೋರ್ಸ್ ಗಳಾದ ಸಿಇಟಿ, ನೀಟ್, ಜೆಇಇ ,ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪುಸ್ತಕಗಳನ್ನು  ಮಂಗಳವಾರ ವಿತರಿಸಿದರು.

ಗಣಿತ ಉಪನ್ಯಾಸಕ ನಂಜುಂಡಯ್ಯ ರವರು ಮಾತನಾಡಿ ಕರ್ನಾಟಕ ಸರಕಾರ ರಾಜ್ಯಾದ್ಯಂತ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನೀಡಿ ಅದರಲ್ಲಿ ವೃತ್ತಿ ಪರ ಕೋರ್ಸ್ ಗಳಲ್ಲಿ ಹೇಗೆ ಉತ್ತೀರ್ಣರಾಗಬೇಕೆಂದು ಆನ್ ಲೈನ್ ನಲ್ಲಿ ಕೋಚಿಂಗ್ ನೀಡಲಾಗಿತ್ತು ಇದಕ್ಕೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ.



ಇದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸರಕಾರವೇ ಉಚಿತವಾಗಿ ವಿಜ್ಞಾನ ವಿಭಾಗದ  ವಿದ್ಯಾರ್ಥಿಗಳಿಗೆ ನೀಡಿದೆ.
ಅದರಿಂದ ನಾವು ನಮ್ಮ ಕಾಲೇಜಿನ  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಲಾಗಿದೆ.

ಸರಕಾರಿ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿಗೆ ಮಾತ್ರ ಇಂತಹ ಅವಕಾಶಗಳು ಸಿಗುತ್ತದೆ. ಏಕೆಂದರೆ?  ಇಲ್ಲಿ ಕಡು ಬಡವರ ಮಕ್ಕಳು ಅಧ್ಯಾಯನಮಾಡುತ್ತಿದ್ದಾರೆ ಇವರು ಕೂಡ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗಿಂತ ಮುಂದೆ ಬರಲಿ ಹಾಗೂ ಉತ್ತಮ ಫಲಿತಾಂಶಗಳು ಬರಲಿ  ಎಂದು ಇಂತಹ ಯೋಜನೆಯನ್ನು ಸರಕಾರ ಮಾಡಿದೆ.



ಸರಕಾರಿ ಕಾಲೇಜಿನಲ್ಲಿ ಅನೇಕ ಸವಲತ್ತುಗಳಿವೆ ಗ್ರಾಮೀಣ ಪ್ರದೇಶದವರು ಮತ್ತು ನಗರವಾಸಿಗಳು ನಿಮ್ಮ ನಿಮ್ಮ ಮಕ್ಕಳನ್ನು ಸರಕಾರಿ ಕಾಲೇಜಿಗೆ ಸೇರಿಸಬೇಕಾಗಿದೆ.

ಸರಕಾರವು ಅನೇಕ ಕೋಟಿ ರೂಪಾಯಿ ಖರ್ಚು ಮಾಡಿ ಗುಣಮಟ್ಟ ಶಿಕ್ಷಣ ನೀಡುವುದರ ಜೊತೆಗೆ   ವೃತ್ತಿ ಪರ ಕೋರ್ಸ್ ಗಳಾದ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಹೇಗೆ ತಯಾರಾಬೇಕು ಎಂಬುವುದನ್ನು  ಪುಸ್ತಕಗಳ ಮೂಲಕ  ಹೊರತರಲಾಗಿದೆ.  ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡುವ  ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಫರ್ಹಾನ ಬೇಗಂ, ಕುಸುಮ, ಸವಿತ, ಹರೀಶ್, ಸಿಬ್ಬಂದಿಗಳಾದ ಪ್ರಭು, ನಾಗರಾಜು, ಕೃಷ್ಣಮೂರ್ತಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

_G Prasannakumar Kittur

prajaprabhat

Recent Posts

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

6 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

7 hours ago

ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧನಿದ್ದರೇ ಮಾತ್ರ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ

ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ…

7 hours ago

ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವ

ರಾಯಚೂರು.13.ಆಗಸ್ಟ್.25: ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ರಾಯಚೂರ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ವಿವಿಧೆಡೆ ನಡೆದವು. ಜಿಲ್ಲಾಡಳಿತ,…

7 hours ago

ಸ್ಟಡಿ ಅಬ್ರಾಡ್ -2025 ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಗಸ್ಟ್ 17ರಂದು ಮಾಹಿತಿ ಕಾರ್ಯಗಾರ.

ರಾಯಚೂರು.13.ಆಗಸ್ಟ.25: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶವನ್ನು ಪರಿಚಯಿಸುವ ಉದ್ದೇಶದಿಂದ ಸ್ಟಡಿ ಅಬ್ರಾಡ್…

7 hours ago

ಅಗ್ನಿವೀರ್ ಸೇನಾ ಭರ್ತಿ: 6ನೇ ದಿನಕ್ಕೆ 779 ಅಭ್ಯರ್ಥಿಗಳು ಭಾಗಿ

ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…

8 hours ago