ಜಿಲ್ಲಾ ಕ್ರೀಡಾ ಶಾಲೆಗಳಿಗೆ ತರಬೇತಿದಾರರ ಆಯ್ಕೆಗೆ ಜ.16ರಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭ.!


      ಬೀದರ:09.ಜನವರಿ.25:-  ಬೀದರ ಜಿಲ್ಲೆಯ 2025-26 ನೇ ಸಾಲಿಗಾಗಿ ರಾಜ್ಯದ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಅಥ್ಲೇಟಿಕ್ಸ್, ಹಾಕಿ, ಬಾಸ್ಕೇಟ್ ಬಾಲ್, ಜಿಮ್ನಾಸ್ಟಿಕ್, ವಾಲಿಬಾಲ್, ಫುಟ್‌ಬಾಲ್, ಜುಡೋ, ಕುಸ್ತಿ ಮತ್ತು ಸೈಕ್ಲಿಂಗ್‌ನಲ್ಲಿ ಕ್ರೀಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಹಾಗೂ ಜಿಲ್ಲಾ ಕ್ರೀಡಾನಿಲಯಕ್ಕೆ ಹಾಗೂ ಅಥ್ಲೇಟಿಕ್ಸ್,ಬಾಸ್ಕೇಟ್‌ಬಾಲ್ ಮತ್ತು ವಾಲಿಬಾಲ್‌ಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಲು ತಿರ್ಮಾನಿಸಲಾಗಿದೆ.

        ಈ ಪ್ರಕ್ರಿಯೆಯನ್ನು ಈ ಕೆಳಕಂಡ ದಿನಗಳಂದು ಬೆಳಿಗ್ಗೆ 10 ಗಂಟೆಯಿAದ ಆಯಾ ತಾಲೂಕಿನಲ್ಲಿ ಇಲಾಖಾ ತರಬೇತುದಾರರು ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೇ ದಿನಾಂಕ, ಸ್ಥಳ ಮತ್ತು ತರಬೇತಿದಾರರ ವಿವರ:-

ಜನವರಿ.16 ರಂದು ಬಸವಕಲ್ಯಾಣ ತಾಲ್ಲೂಕಾ ಕ್ರೀಡಾಂಗಣದಲ್ಲಿ,

ಜನವರಿ.17 ರಂದು ಹುಮನಾಬಾದ ತಾಲ್ಲೂಕಾ ಕ್ರೀಡಾಂಗಣದಲ್ಲಿ,

ಜನವರಿ.18 ರಂದು ಭಾಲ್ಕಿ ತಾಲ್ಲೂಕ ಕ್ರೀಡಾಂಗಣದಲ್ಲಿ,

ಜನವರಿ.20 ರಂದು ಔರಾದ ತಾಲ್ಲೂಕಾ ಕ್ರೀಡಾಂಗಣದಲ್ಲಿ ಹಾಗೂ

ಜನವರಿ.21 ರಂದು ನೆಹರು ಜಿಲ್ಲಾ ಕ್ರೀಡಾಂಗಣ ಬೀದರದಲ್ಲಿ ತರಬೇತಿ ನಡೆಯಲಿವೆ.

ಅಭ್ಯರ್ಥಿಗಳ ಆಯ್ಕೆ ಮಾಡುವ ತರಬೇತಿದಾರರಾದ ನೂರ್ ಅಲೀಂ ಎ.ಎಸ್. ಅಥ್ಲೇಟಿಕ್ ತರಬೇತಿದಾರರು               (ಮೊ. 9538116814),

ರಾಘವೇಂದ್ರ ಬಾಸ್ಯೇಟ್‌ಬಾಲ್ ತರಬೇತುದಾರರು (ಮೊ:8310585580) ಹಾಗೂ

ಜೈಪ್ರಕಾಶ ವಾಲಿಬಾಲ್ ತರಬೇತುದಾರರು.                      (ಮೊ: 9591609691)

ಹೆಚ್ಚಿನ ಮಾಹಿತಿ ಮತ್ತು ನಿಗದಿತ ಅರ್ಜಿ ನಮೂನೆಗಾಗಿ ಸಹಾಯಕ ನಿರ್ದೇಶಕರ ಕಛೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೀದರ ಅಥವಾ ದೂರವಾಣಿ ಸಂ: 9538116814, 8310585580 ಮತ್ತು 9591609691 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

2 hours ago

ಅತಿಥಿ ಉಪನ್ಯಾಸಕರಿಲ್ಲದೆ ಮಂಗಳೂರು ವಿಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳಿಗೆ ಸಂಕಷ್ಟ: ಮುಖಂಡರ ಆಕ್ರೋಶ

ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…

3 hours ago

Scholarship ಕೋಟಕ್ ಕನ್ಯಾ ಸ್ಕಾಲರ್‌ಷಿಪ್,

ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…

3 hours ago

ಹಿಮಾಚಲ ಪ್ರದೇಶದಾದ್ಯಂತ ಮಾನ್ಸೂನ್ ಮಳೆ ನಿರಂತರವಾಗಿ ಸುರಿಯುತ್ತಿದೆ.

ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…

3 hours ago

ಬಾಗಲಕೋಟೆಯಲ್ಲಿ ಭಾರತೀಯ ರೆಡ್ಡಿ ಸಮಾಜದವರ ಸಮಾವೇಶ ಶೀಘ್ರ – ಪ್ರಭಾಕರರೆಡ್ಡಿ

ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…

5 hours ago

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

14 hours ago