ಜಾತಿಗಣತಿ ವರದಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ

ಬೆಂಗಳೂರು.09.ಏಪ್ರಿಲ್.25:- ಇಂದು  ಸಿಎಂ ಸಿದ್ದರಾಮಯ್ಯ ಅವರು ಹಲವು ವೇದಿಕೆಗಳಲ್ಲಿ ಜಾತಿ ಗಣತಿ ವರದಿ ಜಾರಿ ಮಾಡುವ ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಈ ಜಾತಿವಾರು ಜನ ಗಣತಿಯ ವರದಿ ಜಾರಿಗೆ ಮುಹೂರ್ತ ಫಿಕ್ಸ್‌ ಆಗಿದ್ದುಕೇಳೆದ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾತಿಗಣತಿ ವರದಿ ಜಾರಿ ಬಗ್ಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ.

ಜಾತಿ ಗಣತಿ ವರದಿ ಬಗ್ಗೆ ಈ ಇತ್ತೀಚೆಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಈ ಗಣತಿ ವೈಜ್ಞಾನಿಕವಾಗಿ ನಡೆದಿದೆ. ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದರು. ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ಸಿದ್ಧವಾಗಿದ್ದು, ಸಮಾಜದ ಎಲ್ಲ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲಕರವಾಗಿದೆ. ಅದರಂತೆಯೇ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದಿದ್ದರು.

ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿದೆ. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಶೇಕಡಾ 50ರಷ್ಟು ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ಮೀಸಲಾತಿ ಕಲ್ಪಿಸಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧ. ಸಂವಿಧಾನದ ಆರ್ಟಿಕಲ್ (15) ಮತ್ತು (16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಲೆಮಾರಿ ಜನಾಂಗಕ್ಕೆ ಉಚಿತ ಶಿಕ್ಷಣದ ಹಕ್ಕೊತ್ತಾಯ ಸರಿಯಾಗಿದೆ. ಸರ್ಕಾರವು ಸರ್ವರಿಗೂ ಶಿಕ್ಷಣದ ಹಕ್ಕನ್ನು ನೀಡಿದ್ದು, ಅದರ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಅವಕಾಶ ಸಿಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಈ ಬಜೆಟ್‌ನಲ್ಲೂ ಅಲೆಮಾರಿ ಜನಾಂಗಕ್ಕೆ ವಿಶೇಷ ಗಮನ ಹರಿಸಲಾಗಿದೆ. ಅತಿ ಹಿಂದುಳಿದ ವರ್ಗದವರಿಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದಿದ್ದರು.

ಈ ಜಾರಿ ಗಣತಿ ವರದಿ ಜಾರಿಗೆ ಪರ ವಿರೋಧದ ನಿಲುವುಗಳು ವ್ಯಕ್ತವಾಗಿವೆ. ಪ್ರಮುಖವಾಗಿ ಹಿಂದುಳಿದ ವರ್ಗಗಳ ಸಮಾಜದವರು ಈ ಜಾತಿ ಗಣತಿ ವರದಿ ಸ್ವೀಕರಿಸಿ, ಜಾರಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ.

ಮತ್ತೊಂದೆಡೆ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಈ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ವರದಿ ಸ್ವೀಕರಿಸಬಾರದು ಎಂದು ವಿರೋಧಿಸುತ್ತಿವೆ. ಇದೇ ಕಾರಣದಿಂದಲೇ ಜಾತಿ ಗಣತಿ ವರದಿ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಲೇ ಇತ್ತು. ಆದರೆ ಸಿದ್ದರಾಮಯ್ಯ ಅವರು ಭರವಸೆ ನೀಡಿರುವುದರಿಂದ ಈ ವರದಿ ಜಾರಿಯಾಗುವ ದಿನಗಳು ಹತ್ತಿರದಲ್ಲಿವೆ ಎಂದು ಹೇಳಲಾಗುತ್ತಿದೆ.

ಈ ವರದಿ ಜಾರಿಗೆ ಪರ ವಿರೋಧ ಇರುವುದರಿಂದ ಇದು ಜಾರಿಯಾದರೆ, ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಯೂ ಇದೆ.

prajaprabhat

Recent Posts

ಸರ್ಕಾರಿ ಕಾಲೇಜುಗಳಲ್ಲಿ ನೇಮಕಾತಿಗಾಗಿ ಯುಜಿಸಿ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನು ಪೂರೈಸಬೇಕು ಎಂದು ತೀರ್ಪು ನೀಡಿದೆ.

ಬೆಂಗಳೂರು.ಯುಜಿಸಿ ಅತಿಥಿ ಅಧ್ಯಾಪಕರ ಕುರಿತಾದ ಇತ್ತೀಚಿನ ಸುತ್ತೋಲೆಗಳು ಸಾಮಾನ್ಯವಾಗಿ ಅವರ ನೇಮಕಾತಿ, ಅರ್ಹತೆಗಳು ಮತ್ತು ಗೌರವ ಧನಕ್ಕೆ ಸಂಬಂಧಿಸಿದ ವಿಷಯಗಳನ್ನು…

1 hour ago

ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಿದೆ; ಯುಜಿಸಿ ಅರ್ಹರಿಗೆ ದಿನಕ್ಕೆ 2,200 ವೇತನ ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ.

ಅತಿಥಿ ಉಪನ್ಯಾಸಕರ ವೇತನವನ್ನು UGC Eligibility ಯುಜಿಸಿ ಅರ್ಹತೆ ಹೊಂದಿರುವವರಿಗೆ ದಿನಕ್ಕೆ ರೂ. 1750/- ದರದಲ್ಲಿ ತಿಂಗಳಿಗೆ ಗರಿಷ್ಠ ರೂ.…

1 hour ago

UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ – 2025

ಹೊಸ UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ - 2025 ಶೈಕ್ಷಣಿಕ ವರ್ಷಕ್ಕೆ ಪೂರ್ಣ ಮಾರ್ಗಸೂಚಿಗಳು…

2 hours ago

ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತ* <br>ಮಾಡುವುದೇ ಮುಖ್ಯ ಗುರಿ-ಸಚಿವ ಈಶ್ವರ ಖಂಡ್ರೆ

ಬೀದರ.12.ಜೂನ್.25:- ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ…

3 hours ago

ರೋಹಿಣಿ ಸಿಂಧೂರಿ ಸಹಿತ ಮೂವರು IAS ಅಧಿಕಾರಿಗಳು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು.12.ಜೂನ್.25:- ರಜ್ಯದಲ್ಲಿ IAS ಮತ್ತು IPS ಮೂರು ಅಧಿಕಾರಿಗಳ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಹಿತ…

3 hours ago

ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಎನ್‌ಸಿಸಿ ಕೆಡೆಟ್‌ಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು.

ಹೊಸ ದೆಹಲಿ.12.ಜೂನ್.25:- ಇತ್ತೀಚೆಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಕೆಡೆಟ್‌ಗಳನ್ನು ನವದೆಹಲಿಯಲ್ಲಿ ರಕ್ಷಣಾ ಸಚಿವ…

3 hours ago