ಬೀದರ.07.ಆಗಸ್ಟ್.25:- ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಹೇಳಿದರು.
ಅವರಿಂದು ನಗರದ ಮೈಲೂರು ರಸ್ತೆಯಲ್ಲಿರುವ ಜಿ.ಎನ್.ಡಿ ಕಾಲೇಜು ಕ್ಯಾಂಪಸ್‌ನ ಗುರುನಾನಕ ಭವನ ಅವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದರ ಜೊತೆಗೆ ಈ ಅಂಗಗಳ ನ್ಯೂನ್ಯತೆಯನ್ನು ಎತ್ತಿ ಹಿಡಿಯುವ, ಪ್ರಗತಿದಾಯಕ ಕಾರ್ಯ ಮಾಡಿದರೆ ಅವನ್ನು ಪ್ರಶಂಸಿಸುವ ಕಾರ್ಯ ಮಾಧ್ಯಮಗಳು ಮಾಡುತ್ತವೆ ಎಂದರು.
ಜಾಗತಿಕ ಆರೋಗ್ಯ ಸುಧಾರಣೆ, ಮಳೆ ಬೀಳಲು, ಪ್ರಕೃತಿ ವಿಕೋಪ ತಪ್ಪಿಸುವ ಕೀರ್ತಿ ಗಿಡ, ಮರಗಳಿಗೆ ಸಲ್ಲುತ್ತದೆ. ಪ್ರಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬ ಪ್ರಜೆಗಳದ್ದು. ಆಮ್ಲಜನಿಕ ನಮ್ಮ ಪಾಲಿನ ಸಂಜಿವಿನಿ. ಕೋವಿಡ ಸಂದರ್ಭದಲ್ಲಿ ಆಮ್ಲಜನಿಕ ಕೊರತೆಯಿಂದ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಮುಂದಿನ ಪಿಳಿಗೆಗೆ ಆಮ್ಲಜನಿಕದ ಕೊರತೆ ಆಗದಂತೆ ತಡೆಯಲು ರಾಜ್ಯದಲ್ಲಿ15 ಕೋಟಿ ಸಸಿಗಳನ್ನು ನೆಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 35 ಲಕ್ಷ ಸಸಿಗಳನ್ನು ನೆಡಲಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಹೊರತುಪಡಿಸಿ ಕಲ್ಯಾಣ ಕರ್ನಾಟಕ ಭಾಗದ ಉಳಿದ ಐದು ಜಿಲ್ಲೆಗಳಲ್ಲಿ ಹಸಿರು ಹೊದಿಕೆ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ. ಪ್ಲಾಸ್ಡಿಕ್ ಮುಕ್ತ ರಾಜ್ಯವನ್ನಾಗಿಸಲು ಎಲ್ಲರು ಕೈಜೋಡಿಸಬೇಕೆಂದು ಕರೆ ನೀಡಿದರು.
ಶರಣರು, ಸಂತರ ನಾಡು ಈ ಬೀದರ್‌ನಲ್ಲಿ ಅಕಾಡೆಮಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂತಸದ ಸಂಗತಿ.
ಮಧ್ಯಮ ಆಡಳಿತದ ನಾಲ್ಕನೇ ಅಂಗ, ಅದನ್ನು ತಿದ್ದುವ ಕೆಲಸ ಮಾದ್ಯಮ ರಂಗ ಮಾಡುತ್ತದೆ. ಜನಾಭಿಪ್ರಾಯ ಮೂಡಿಸುವ ಕಾರ್ಯ ಮಾಧ್ಯಮ ರಂಗ ಮಾಡುತ್ತಾ ಬಂದಿದೆ. ಇದು ಶ್ರೇಷ್ಠ ಸೇವಾ ಕಾರ್ಯ. ಅನೇಕರು ಮಾಧ್ಯಮ ರಂಗದಲ್ಲಿ ಸೇವೆ ಮಾಡಿದ್ದಾರೆ. ಮಾಧ್ಯಮದಲ್ಲಿ ನಾವು ಎಂದಿಗೂ ಮುಂದೆ ಲೇಖನಿ ಖಡ್ಗಗಿಂತ ಹರಿತವಾದದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ನಾವು ಇವತ್ತು ನೋಡುತ್ತೇವೆ.ಸತ್ಯ ಮರೆಮಾಚದೆ ಉತ್ತಮ ಕಾರ್ಯ ಮಾಡಬೇಕು ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಜಗತ್ತಿನಲ್ಲಿ ಯಾರೂ ಪರಿಪೂರ್ಣ ಅಲ್ಲ ಅದಕ್ಕಾಗಿ ನೀವು ನಿತ್ಯ ಅಧ್ಯಯನ ಮಾಡುವ ಅವಶ್ಯಕತೆ ಇದೆ ಕೃತಕ ಬುದ್ಧಿ ಮತ್ತೆಯಿಂದ ಅನೇಕ ಆತಂಕಗಳು ಇವೆ ನಿರುದ್ಯೋಗ ಸಮಸ್ಯೆ ಆಗುವುದೇ ಎಂದು ಭಯ ಇದೆ ಆದರೆ ಅದು ಆಗುವುದಿಲ್ಲ. ನಮ್ಮ ದೇಶದ ಬುದ್ಧಿಮತ್ತಿಗೆ ಬಹಳ ಬೆಲೆ ಇದೆ.
ಸುದ್ದಿಯಲ್ಲಿ ನಿಖರತೆ ಇರುವುದು ಮುಖ್ಯವಾಗಿದೆ, ಬರೆಯುವ ಮುಂಚೆ ಸತ್ಯ ಸತ್ಯತೆ ತಿಳಿದುಕೊಂಡು ಬರೆದರೆ ವಿಶ್ವಾಸಾರ್ಹತೆ ಬೆಳೆಯುತ್ತದೆ. ನಮ್ಮ ಸಂಹವನ ಉತ್ತಮವಾಗಿ ಮಾಡಿದರೆ ಸುದ್ದಿ ಹೆಕ್ಕಿ ತೆಗೆಯಲು ಸಾಧ್ಯ ಆಗುತ್ತದೆ ಎಂದರು.
ಜಿಲ್ಲೆಯಲ್ಲಿ ಮಾಧ್ಯಮ ತರಬೇತಿ ಕೇಂದ್ರ ಸ್ಥಾಪನೆಗೆ ಒತ್ತು ನೀಡಿದಲ್ಲಿ ನಿವೇಶನ ನೀಡಿ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಅನುಕೂಲವಾಗಿ ಇಲ್ಲಿನ ಪತ್ರಕರ್ತರ ಕೌಶಲ್ಯ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು. ಪರಿಸರ ಸಂರಕ್ಷಣೆ, ಸೇರಿದಂತೆ ಹತ್ತು ಹಲವು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಧ್ಯಮ ರಂಗ ಮಾಡುತ್ತಾ ಬರುತ್ತಿದೆ.
ಇವತ್ತು ನಾವು ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ಅನಾಹುತಗಳ ಬಗ್ಗೆ ಜನರ ಗಮನಕ್ಕೆ ತರಬೇಕು. ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆ, ರಾಜ್ಯ ಮಾಡಬೇಕಾಗಿದೆ. ಗಣೇಶ ಚತುರ್ಥಿಗೆ ಪಿಓಪಿ ಗಣೇಶ ಬಳಸದೆ ಮಣ್ಣಿನ ಪರಿಸರ ಸ್ನೇಹಿ ಗಣೇಶ ಕೂರಿಸುವ ಕೆಲಸ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ಉಳ್ಳವರು ಸಹ ಅನೇಕ ಜನ ಮಣ್ಣಿನ ಗಣಪತಿ ಬಳಸುತ್ತಾರೆ, ಜನರಿಗೆ ಮಾರಕ ಆಗಿರುವ ಪಿಒಪಿ ಗಣಪತಿ ಬಳಸದೆ ಮಣ್ಣಿನ ಗಣಪತಿ ಕೂರಿಸಿ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಕಿರೀಟ ಹತ್ತಾರು ಸಾಂಪ್ರದಾಯಿಕ ಸಾಂಸ್ಕೃತಿಕ ಮಿಲನ ಈ ಬೀದರ್, ಇಲ್ಲಿನ ನಾಯಕತ್ವ ವಿಶಿಷ್ಟವಾಗಿದೆ, ಇಲ್ಲಿನ ನಾಯಕರು ಸಹ ಈ ಭಾಗದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಈ ಕಾರ್ಯಕ್ರಮದ ಉದ್ದೇಶ ಪತ್ರಕರ್ತರ ಮಾಧ್ಯಮ ಮಿತ್ರರಿಗೆ ಪ್ರೇರಣೆ ನೀಡುವ ಕೆಲಸ ಮಾಡುವುದು, ಹೊಸ ತಾಂತ್ರಿಕ ಯುಗದಲ್ಲಿ ಗ್ರಾಮೀಣ ಪತ್ರಕರ್ತರು ನಿಜವಾದ ಸುದ್ದಿಗಳನ್ನು ಬಿಡುತ್ತಾರೆ.
ಧ್ವನಿ ಇಲ್ಲದವರಿಗೆ ಧ್ವನಿ ಕೊಡುತ್ತಾರೆ ಅಂತಹವರಿಗೆ ತರಬೇತಿ ನೀಡುವ ಕಾರ್ಯ ಅಕಾಡೆಮಿ ಮಾಡುತ್ತಿದೆ.ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾಧ್ಯಮದ ಪಾತ್ರ ಏನು ಎನ್ನುವುದು ತಿಳಿಯುವುದು ಅತ್ಯವಶ್ಯಕವಾಗಿದೆ, ಆ ಸಂಬAಧ ಕಾರ್ಯಕ್ರಮ ಆಯೋಜಿಸಲಾಗಿದೆ. ಫ್ಯಾಕ್ಟ್ ಸರ್ಚ್ ಆಗಬೇಕು ಫೇಕ್ ನ್ಯೂಸ್ ಗಳು ಮಾಧ್ಯಮಕ್ಕೆ ವಿಷಯವಾಗಿ ಕಾರ್ಯ ಮಾಡುತ್ತದೆ. ಆದ್ದರಿಂದ ಮಾಧ್ಯಮ ಮಿತ್ರರು ಜವಾಬ್ದಾರಿ ಹೊತ್ತು ಸುದ್ದಿ ಬಿತ್ತರಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಎಐ ಮಾರಕ ಅಲ್ಲ ಅದು ಪೂರಕವಾಗಿ ಕೆಲಸಮಾಡುತ್ತದೆ. ಪತ್ರಕರ್ತರು ಗುಂಪುಗಳಾಗಿ ಒಡೆದು ಹೋಗಿದ್ದೇವೆ ನಾವುಗಳು ಒಗ್ಗೂಡುವ ಕಾರ್ಯವಾಗಬೇಕಾಗಿದೆ, ವೃತ್ತಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸ ಆಗಬೇಕು. ತರಬೇತಿ ನೀಡುವ ಮೂಲಕ ಮಾಧ್ಯಮ ಅಕಾಡೆಮಿ ತರಬೇತಿ ಯೋಜನೆಗಳನ್ನು ರೂಪಿಸಿ ಕೌಶಲ್ಯ ಅಭಿವೃದ್ಧಿ ಮಾಡಲು ಪಣ ತೊಟ್ಟಿದೆ. ಜರ್ನಲಿಸಂ ಅಂದ್ರೆ ಕೇವಲ ಅಂಕಣ ಬರೆಯುವುದು ಅಲ್ಲ ಅದು ಒಂದು ರೀತಿಯ ನಾಯಕತ್ವ, ಯುವ ಪತ್ರಕರ್ತರು ತರಬೇತಿ ಹೊಂದಿ ಕೌಶಲ್ಯ ಬೆಳೆಸಿಕೊಳ್ಳಬೇಕು, ಮಾಧ್ಯಮ ವೃತ್ತಿ ಶ್ರೇಷ್ಠ ವೃತ್ತಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಯಾವ ಸಿದ್ಧಾಂತಗಳ ಮೇಲೆ ಮಾಧ್ಯಮ ನಡೆಯಬೇಕು ಎನ್ನುವುದು ನಾವು ತಿಳಿದುಕೊಳ್ಳಬೇಕಾಗಿದೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಅದರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ ಅದನ್ನು ನಾವು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಿಷ್ಪಕ್ಷಪಾತವಾಗಿ, ಆಬ್ಜೆಕ್ಟವಿಟಿ ಉತ್ತಮ ಉದ್ದೇಶ ಸಾಮಾಜಿಕ ಕಳಕಳಿ ಇರಬೇಕು ಆಗುತ್ತದೆ, ವಿಷಯಾಧಾರಿತ ಎಲ್ಲ ರೀತಿಯ ವಿಷಯಗಳನ್ನು ಒಳಗೊಂಡ ಮಾಹಿತಿ ನೀಡಬೇಕು. ಈಗಿನ ಕಾಲದಲ್ಲಿ ನೆಗೆಟಿವ್ ಕ್ಯಾಪ್ಚರ್ ಮಾಡುತ್ತಾ ಬರುತ್ತಿದ್ದಾರೆ ಅದನ್ನು ನಾನು ಸತ್ಯ ತಿಳಿದು ಕೊಳ್ಳಬೇಕು. ಉತ್ತಮ ಕಾರ್ಯ ಮಾಡುತ್ತಿರುವ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಗುರುದ್ವಾರಾ ಪ್ರಬಂಧಕ ಸಮಿತಿ ಅಧ್ಯಕ್ಷ ಡಾ.ಸರ್ದಾರ ಬಲಬೀರಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಸದಸ್ಯರಾದ ರಶ್ಮಿ, ಅಬ್ಬಾಸ್ ಮುಲ್ಲಾ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಜಡಿಯಪ್ಪ, ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ,ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 200 ಕ್ಕೂ ಅಧಿಕ ಪತ್ರಕರ್ತರು ತರಬೇತಿಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು.07.ಆಗಸ್ಟ್.25:- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್…
ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ ಸಮಾಜಕ್ಕೆ ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ…
ರಾಯಚೂರು.07.ಆಗಸ್ಟ್.25:- ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿಗಳ ಪ್ರವಾಸವು ಮಳೆಯಿಂದಾಗಿ ದಿಢೀರ್ ರದ್ದಾಗಿದ್ದರಿಂದ, ಬೆಂಗಳೂರಿನಲ್ಲಿ ಆಗಸ್ಟ್ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ…
ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್…
ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ…
ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ್ ಸೇನಾ ರ‍್ಯಾಲಿಗೆ ಸ್ಥಾನಿಕ…