ಜನಮೆಚ್ಚಿದ ವೈದ್ಯರಾದ ಡಾ ಬಸವರಾಜ್ ರವರಿಗೆ  ಕಾಯಕ ರತ್ನ ಪ್ರಶಸ್ತಿ.

ಚಾಮರಾಜನಗರ.30.ಏಪ್ರಿಲ್.25:- ಯಳಂದೂರು: ವೈದ್ಯರು ಅಂದರೆ ದೇವರಿಗಿಂತ ಮಿಗಿಲು ಎಂಬುವುದಕ್ಕೆ ಇಂದಿನ ಸಮಾಜವೇ ಒಂದು ಉದಾಹರಣೆ.


ನರಳಾಡುತ್ತಿರುವ ರೋಗಿಯನ್ನು ವೈದ್ಯರು ಪ್ರೀತಿಯಂದ ಮಾತನಾಡಿಸಿ ನಿಮಗೆ ಏನೂ ಆಗಿಲ್ಲ ಧೈರ್ಯವಾಗಿರಿ ಎಂದು ಮನೋ ಸ್ಥೈರ್ಯ ತುಂಬಿದರೆ ರೋಗಿಗೆ ಅರ್ಧ ರೋಗ ನಿರ್ಮೂಲನೆಯಾದಗೆ ಎಂದರೆ ತಪ್ಪಾಗಲಾರದು.


ಇಂತಹ ಗುಣವಿರುವಂತಹ ಶಸ್ತ್ರ ಚಿಕಿತ್ಸಕ ಡಾ ಬಸವರಾಜ್ ರವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತು 2025 ನೇ ಸಾಲಿನ ಕಾಯಕ ರತ್ನ ಪ್ರಶಸ್ತಿಯಗೆ ಆಯ್ಕೆಮಾಡಿದ್ದಾರೆ
ಮೇ 2 ರಂದು ಬಾಗಲಕೋಟೆ ಜಿಲ್ಲೆ ರಬಕವಿ ಪಟ್ಟಣದಲ್ಲಿ ರಾಜ್ಯಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.

ವೈದ್ಯಕೀಯ ಸೇವೆಯ ಮುಂದೆ ಇನ್ಯಾವುದೇ ಸೇವೆ ಏನೇನೂ ಅಲ್ಲ ಅನ್ನಿಸುತ್ತದೆ.
ವೈದ್ಯರಲ್ಲಿ ಸಹನೆ, ಕರುಣೆ, ಮಮತೆ ಎಂಬ ಗುಣಗಳು ಅಡಕವಾಗಿದ್ದರೆ ಜನರು ಇಂತಹ ವೈದ್ಯರನ್ನು ದೇವರಿಗಿಂತ ಪೂಜಿಸುತ್ತಾರೆ.


ಇಂತಹ ಗುಣವಿರುವಂತ ಜನಪ್ರಿಯ ವೈದ್ಯರು ಹಾಗೂ ಸಹನ ಮೂರ್ತಿ, ಯಾರಿಗೂ ನೋವನ್ನು ಉಂಟುಮಾಡದೇ ದೇವರಿಗಿಂತಲೂ ಮಿಗಿಲಾಗಿರುವ ಡಾ ಬಸವರಾಜ್ ರವರನ್ನು ಕೊಳ್ಳೇಗಾಲ ಮತ್ತು ಯಳಂದೂರು ಭಾಗದ ಜನರು ಪೂಜಿಸುತ್ತಾರೆ.

ಡಾ ಬಸವರಾಜ್ ರವರು ಕೊಳ್ಳೇಗಾಲದ ಭೀಮನಗರವಾಸಿ ಕಡುಬಡತನದಲ್ಲಿ ಬೆಳೆದು ಉತ್ತಮ ವಿದ್ಯಾಭ್ಯಾಸ ಮಾಡಿ ಇಂದು ವೈದ್ಯರಾಗಿದ್ದಾರೆ ಬಡವರ ನೋವನ್ನು ಸಂಪೂರ್ಣ ಅರ್ಥಮಾಡಿಕೊಂಡಿದ್ದಾರೆ ಇವರನ್ನು ಆದರ್ಶ ವೈದ್ಯರೆಂದು ಕರೆಯಲಾಗುತ್ತದೆ ಹಾಗೂ ದಲಿತ ರಾಜಕಾರಣಿ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ಸಂಬಂಧಿಯಾಗಿದ್ದಾರೆ. ಇವರು ವೈದ್ಯಕೀಯ ಸೇವೆಯಿಂದಲೇ ಅಪಾರವಾದ ಜನರನ್ನು ಸಂಪಾದಿಸಿಕೊಂಡಿದ್ದಾರೆ.


ಯಳಂದೂರಿನ ತಾಲ್ಲೂಕು ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿ ಯಳಂದೂರು ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಗುರುತಿಸುವಂತೆ ಮಾಡಿದ್ದಾರೆ. ಹಾಗೂ ಪ್ರಸ್ತುತ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಸರ್ಜನ್ ಡಾಕ್ಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಇವರನ್ನು ಜನಮೆಚ್ಚಿದ ವೈದ್ಯರೆಂದು ಗುರುತಿಸಲಾಗುತ್ತದೆ.
ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ಜನರು ಸಂತಸಪಡುತ್ತಿದ್ದಾರೆ. ರಾಜ್ಯ ಸರಕಾರ ಅಥವಾ ಕೇಂದ್ರಸರಕಾರಗಳು ಇಂತಹ ವೈದ್ಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಬೇಕಾಗುತ್ತದೆ.


ಇವರಿಗೆ ಕೆಸ್ತೂರು ಗ್ರಾಪಂ ಸದಸ್ಯ ಹಾಗೂ ಯುವ ಮುಖಂಡ ಗುರುಲಿಂಗಯ್ಯ, ನಾಗಣ್ಣ, ರಾಮಕೃಷ್ಣ, ಸಿದ್ದರಾಜು, ನಾಗರಾಜು ಬಿ,  ಪತ್ರಕರ್ತ ಜೆ.ಪ್ರಸನ್ನಕುಮಾರ್, ಯುವ ಮುಖಂಡ ಕಿರಣ್, ಸಚಿನ್,  ಸಂಜಯರಾಜ್, ಚಿಕ್ಕನಿಂಗಯ್ಯ, ರಂಗಸ್ವಾಮಿ, ನಾಗೇಶ್, ಬಾಲುಪ್ರಸಾದ್ ಶುಭಾಶಯ ಕೋರಿದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

6 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

11 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

16 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

22 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

22 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

22 hours ago