ಚುನಾವಣೆ ಪ್ರಜಾಪ್ರಭುತ್ವದ ರಾಷ್ಟ್ರೀಯ ಹಬ್ಬ:ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು-ಕುಲಪತಿ ಡಾ.ವಿ.ಎಸ್.ಬಿರಾದಾರ


ಬೀದರ.25ಜನವರಿ.25:- ಭಾರತವು ಬಲಿಷ್ಠವಾದ ಪ್ರಜಾಪ್ರಭುತ್ವ ದೇಶ. ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿ.ಎಸ್.ಬಿರಾದಾರ ಹೇಳಿದರು.


ರಂಗಮoದಿರದಲ್ಲಿoದು ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಯ ಮತದಾರರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಮತದಾನದ ದಿನದಂದು ಮತ ಹಾಕದಿರಲು ಯಾವುದೇ ನೆಪ ಹೇಳದೆ ತಪ್ಪದೇ ಮತದಾನ ಮಾಡಬೇಕು. ಮತಕ್ಕಿಂತ ಮಹತ್ವ ಇನ್ನೊಂದಿಲ್ಲ. ನಾನು ಖಚಿತವಾಗಿ, ಕಡ್ಡಾಯವಾಗಿ ಮತದಾನ ಮಾಡುತ್ತೇನೆಂದು ಪ್ರತಿಜ್ಞೆಗೈದು, ಯಾವುದೇ ಆಶೆ, ಆಕ್ಷಾಂಕ್ಷೆಗಳಿಗೆ ಒಳಗಾಗದೇ ಮತ ಚಲಾಯಿಸಬೇಕೆಂದು ಯುವ ವಿದ್ಯಾರ್ಥಿಗಳಿಗೆ ತಿಳಿಸಿದರು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದರು.


ಸರಕಾರದ ವಿವಿಧ ಸಹಾಯ ಸೌಲಭ್ಯ ಪಡೆಯಲು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವುದಲ್ಲದೇ ತಮ್ಮ ಸುತ್ತಮುತ್ತಲಿನವರೆಲ್ಲರನ್ನು ಮತ ಚಲಾಯಿಸುವಂತೆ ಪ್ರೇರೆಪಿಸಬೇಕೆಂದರು.


ಮತದಾನ ದಿನದಂದು ಕುಂಟು ನೆಪ ಹೇಳಿ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕು. ಚುನಾವಣೆ ಪ್ರಜಾಪ್ರಭುತ್ವದ ರಾಷ್ಟಿçÃಯ ಹಬ್ಬ. ಈ ಹಬ್ಬದಲ್ಲಿ ಎಲ್ಲರು ಸಂತಸದಿAದ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಭಾರತದ ಸದೃಢ ಅಭಿವೃದ್ಧಿಗಾಗಿ ಹಾಗೂ ಸುಸ್ಥಿರ ಸರ್ಕಾರದ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಬೇಕೆಂದರು.


ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಯುವ ಮತದಾರರು 18 ರಿಂದ 21 ವಯಸ್ಸಿನ ಯುವಕರ ಪಾತ್ರ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯಾವುದೇ ಆಶೆ, ಆಮೀಶಗಳಿಗೆ ಒಳಗಾಗಿ ಜವಾಬ್ದಾರಿಯಿಂದ ತಮ್ಮಿಷ್ಟದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದರು. ಮತದಾನದಿಂದ ಪ್ರಜಾಪ್ರಭುತ್ವ ಸದೃಢಗೊಳ್ಳುತ್ತದೆ. ಸ್ಥಿರ ಸರ್ಕಾರ ರಚನೆಗೊಳ್ಳುತ್ತದೆ.

ಇದರಿಂದ ಮೂಲಭೂತ ಸೌಕರ್ಯಗಳ ಅಬಿವೃದ್ಧಿ ಕಾಣಬಹುದು. ಪ್ರತಿ ಐದು ವರ್ಷಕ್ಕೊಮ್ಮೆ ನಮಗೆ ಮತದಾನದ ಅವಕಾಶ ದೊರೆಯುತ್ತದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಢಿಸಲು ಜಿಲ್ಲಾಡಳಿತದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಯುವಕರು ತಮ್ಮ ಮೊಬೈಲ್‌ನಲ್ಲಿ ವೋರ‍್ಸ್ ಹೆಲ್ಪಲೈನ್ ಆö್ಯಪ್ ಡೌನಲೋಡ ಮಾಡಿ ಫಾರ್ಮ ನಂ. 6 ಭರ್ತಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ಹಿರಿಯರ ಸ್ವಾತಂತ್ರ ಹೋರಾಟದಿಂದಾಗಿ ದೇಶಕ್ಕೆ ಸ್ವಾತಂತ್ರö್ಯ ದೊರೆಕಿದ್ದು, ಪ್ರತಿಯೊಬ್ಬರು ಸ್ವತಂತ್ರತೆಯನ್ನು ಸ್ವಚ್ಚವಾಗಿ ಜೀವಿಸಲು ಭದ್ರ ಪ್ರಜಾಪ್ರಭುತ್ವದ ಸರಕಾರ ಅಗತ್ಯ. ಜಗತ್ತಿನಲ್ಲಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವದೇಶ. ಚುನಾವಣೆ ಹಾಗೂ ಮತದಾನ ಮಹತ್ವವಾಗಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.


ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮತದಾನ ಜಾಗೃತಿ ಕುರಿತು ರಿಲ್ಸ್ ಹಾಗೂ ಮತದಾರರ ಜಾಗೃತಿ ಲೋಗೋ ತಯ್ಯಾರಿಸಿದವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಯುವ ಮತದಾರರ ಸಾಂಕೇತಿಕವಾಗಿ ಎಪಿಕ್ ಕಾರ್ಡ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ಹಿರಿಯರ ಸ್ವಾತಂತ್ರ ಹೋರಾಟದಿಂದಾಗಿ ದೇಶಕ್ಕೆ ಸ್ವಾತಂತ್ರö್ಯ ದೊರೆಕಿದ್ದು, ಪ್ರತಿಯೊಬ್ಬರು ಸ್ವತಂತ್ರತೆಯನ್ನು ಸ್ವಚ್ಚವಾಗಿ ಜೀವಿಸಲು ಭದ್ರ ಪ್ರಜಾಪ್ರಭುತ್ವದ ಸರಕಾರ ಅಗತ್ಯ. ಜಗತ್ತಿನಲ್ಲಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವದೇಶ. ಚುನಾವಣೆ ಹಾಗೂ ಮತದಾನ ಮಹತ್ವವಾಗಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.


ಈ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮುತ್ತಣ್ಣ ಕಲಿಗಾರ, ಬೀದರ ವಿಶ್ವವಿದ್ಯಾಲಯದ ಕುಲಸಚಿವರು, ಸುರೇಖಾ, ರಾಜ್ಯ ಮಾಸ್ಟರ ಟ್ರೇನರ ಗೌತಮ ಅರಳಿ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

3 hours ago

ಅತಿಥಿ ಉಪನ್ಯಾಸಕರಿಲ್ಲದೆ ಮಂಗಳೂರು ವಿಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳಿಗೆ ಸಂಕಷ್ಟ: ಮುಖಂಡರ ಆಕ್ರೋಶ

ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…

3 hours ago

Scholarship ಕೋಟಕ್ ಕನ್ಯಾ ಸ್ಕಾಲರ್‌ಷಿಪ್,

ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…

4 hours ago

ಹಿಮಾಚಲ ಪ್ರದೇಶದಾದ್ಯಂತ ಮಾನ್ಸೂನ್ ಮಳೆ ನಿರಂತರವಾಗಿ ಸುರಿಯುತ್ತಿದೆ.

ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…

4 hours ago

ಬಾಗಲಕೋಟೆಯಲ್ಲಿ ಭಾರತೀಯ ರೆಡ್ಡಿ ಸಮಾಜದವರ ಸಮಾವೇಶ ಶೀಘ್ರ – ಪ್ರಭಾಕರರೆಡ್ಡಿ

ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…

6 hours ago

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

15 hours ago