ಚಿಟಗುಪ್ಪಾ: ಮಹಿಳಾ ಸ್ವ ಸಹಾಯ ಗುಂಪುಗಳನ್ನು ತೆರಿಗೆ ವಸೂಲಾತಿಗಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನ.!

ಬೀದರ.03.ಫೆಬ್ರುವರಿ.25: ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಆಸ್ತಿ ಹಾಗೂ ನೀರಿನ ತೆರಿಗೆಯನ್ನು ಸಂಗ್ರಹಿಸಲು ಪುರಸಭೆÉ ವ್ಯಾಪ್ತಿಯ ಡೇ ನಲ್ಮ್ ಅಭಿಯಾನದಡಿ ನೊಂದಾಯಿಸಲ್ಪಟ್ಟ ಅರ್ಹ ಹಾಗೂ ಆಸಕ್ತ ಮಹಿಳಾ ಸ್ವ ಸಹಾಯ ಗುಂಪುಗಳನ್ನು ತೆರಿಗೆ ವಸೂಲಾತಿಗಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಟಗುಪ್ಪಾ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಿಟಗುಪ್ಪಾ ಪುರಸಭೆ ವ್ಯಾಪ್ತಿಯಲ್ಲಿನ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ಪ್ರಸಕ್ತ ವಾರ್ಷಿಕ ಸಹಿತ ವಸೂಲಿ ಮಾಡುವುದು ಹಾಗು ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಾರ್ಷಿಕ ಬೇಡಿಕೆಗೆ ಅನುಗುಣವಾಗಿ ಸಮರ್ಪಕವಾಗಿ ವಸೂಲಿ ಮಾಡುವ ಸ್ಥಳೀಯ ಸ್ವ ಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ಮತ್ತು ಸ್ವಸಹಾಯ ಗುಂಪುಗಳ ವಸೂಲಾತಿ ಮೊತ್ತದಲ್ಲಿ ಶೇ 5% ರಷ್ಟನ್ನು ಪ್ರೂತ್ಸಾಹ ಧನದ ರೂಪದಲ್ಲಿ ನೀಡಲು ಸರ್ಕಾರವು ಆದೇಶಿಸಿದೆ.


ಅರ್ಹತೆಗಳ ವಿವರ: ಮಹಿಳಾ ಸ್ವ ಸಹಾಯ ಸಂಘವು ಡೇ ನಲ್ಮ್ ಅಭಿಯಾನದಡಿ ನೊಂದಾಯಿಸಿರಬೇಕು. ಸಂಘಗಳು ಸದಸ್ಯರು ಕನಿಷ್ಟ 7ನೇ ತರಗತಿವರೆಗೆ ಶಿಕ್ಷಣವನ್ನು ಬಳಸುವ ಸಾಮಥ್ರ್ಯ ಹೊಂದಿರಬೇಕು. ಬ್ಯಾಂಕಿನ ಮೂಲಕ ಅಥವಾ ಆಂತರಿಕ ಸಾಲ ಪಡೆದು ನಿಯಮಿತ ಸಾಲ ಮರುಪಾವತಿ ಮಾಡಿರಬೇಕು.

ಸ್ವ-ಸಹಾಯ ಗುಂಪು ಸಂಬಂದಪಟ್ಟ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿನಲ್ಲಿ ಡೇ-ನಲ್ಮ ಅಭಿಯಾನದಡಿ ನೊಂದಾಯಿಸಿಕೊಂಡು ಮಾನ್ಯತೆ ಇರುವ ಎಂ, ಐ ಎಸ್ ಕೋಡ ಹೊಂದಿರಬೇಕು. ಸ್ವ ಸಹಾಯ ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ ಖಾತೆಯನ್ನು ಹೊಂದಿರಬೇಕು.

ಸ್ವ ಸಹಾಯ ಸಂಘ ರಚನೆಯಾಗಿ ಕನಿಷ್ಟ 3 ವರ್ಷ ಹೊಂದಿರಬೇಕು. ಸ್ವ ಸಹಾಯ ಗುಂಪು ಮತ್ತು ಗುಂಪಿನ ಸದಸ್ಯರು ಯಾವುದೇ ಅಪರಾದ ಅಥವಾ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಿನ್ನೆಲೆ ಹೊಂದಿರಬಾರದು.

ನಗರ ಸ್ಥಳಿಯ ಸಂಸ್ಥೆಯಿಂದ ನಿಗದಿಪಡಿಸಿದ ಆಸ್ಥಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಯನ್ನು ಗುರಿಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಆಸಕ್ತಿ ಮತ್ತು ಬದ್ದತೆಯನ್ನು ಹೊಂದಿರಬೇಕು.


ಅರ್ಹ ಇಚ್ಛೆಯುಳ್ಳ ಸ್ವ-ಸಹಾಯ ಸಂಘಗಳು ಈ ಮೇಲಿನ ಅರ್ಹತೆ ಹೊಂದಿದ್ದಲ್ಲಿ ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ: 20-02-2025 ರ ಸಂಜೆ 5 ಗಂಟೆಯೊಳಗಾಗಿ ಮುಖ್ಯಾಧಿಕಾರಿಗಳು, ಚಿಟಗುಪ್ಪಾ ಪುರಸಭೆ  ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 

prajaprabhat

Recent Posts

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

28 minutes ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

31 minutes ago

ಸಾರಿಗೆ ನೌಕರರ ರಜೆ ರದ್ದು : ಸಾರಿಗೆ ಇಲಾಖೆ ಆದೇಶ

ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…

37 minutes ago

5 ಆಗಸ್ಟ್’ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ.

ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…

1 hour ago

ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದ ಆದೇಶ

ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…

1 hour ago

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

7 hours ago