ಚಾಮರಾಜನಗರ.31.ಮಾರ್ಚ್.25:-ಎಸ್ ನಂಜುಂಡಸ್ವಾಮಿರವರು ನಗರದ ಕುದುರೆ ಸಿದ್ದಯ್ಯ ಶ್ರೀಮತಿ ದೇವಮ್ಮರವರ ಮಗನಾಗಿ 14-4-1945 ರಂದು ಜನಿಸಿದರು.
ಚಾಮರಾಜನಗರ, ನಗರ ಸಭೆಗೆ ಹೆಚ್ಚು ಬಾರಿ ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷರಾಗಿ ಅನೇಕ ಜನಪರ ಕಾರ್ಯನಿರ್ವಹಿಸುವುದರ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ರಾಜಕಾರಣಿಯಾಗಿದ್ದರು.
ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಸಂಘದ ಅಧ್ಯಕ್ಷರು ಕೂಡ ಆಗಿದ್ದರು
ರಾಜ್ಯದ ರಾಜಕೀಯ ನಾಯಕರಾದ ಸಿದ್ದರಾಮಯ್ಯ, ಎಚ್ ಸಿ ಮಹದೇವಪ್ಪ,ಬೆಂಕಿ ಮಹದೇವಪ್ಪ, ಯಡಿಯೂರಪ್ಪ , ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ಜೊತೆಗೆ ಹಾಗೂ ಕೇಂದ್ರದ ರಾಜಕೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರವರ ಜೊತೆಗೆ ರಾಜಕೀಯ ಒಡನಾಟ ಹೊಂದಿ ರಾಜಕೀಯ ಧುರೀಣರಾಗಿದ್ದರು. ದಿವಂಗತ ರಾದ ಬಿ ರಾಚಯ್ಯ, ರಾಜುಗೌಡ, ನಾಗಪ್ಪ
ಶ್ರೀನಿವಾಸ್ ಪ್ರಸಾದ್, ಆರ್ ಧ್ರುವನಾರಾಯಣ್, ಎಸ್ ಜಯಣ್ಣ ರವರ ಜೊತೆಗೂ ಕೂಡ ಉತ್ತಮ
ಕುದುರೆ ಸಿದ್ದಯ್ಯನವರ ಕುಟುಂಬವೆಂದರೆ ಜಿಲ್ಲೆಯ ದಲಿತರಿರಲ್ಲಿ ಒಳ್ಳೆಯ ಭಾವನೆವಿದೆ ದಾನ ಧರ್ಮ, ಅನ್ನದಾನ, ದಲಿತ ಸಮುದಾಯದಲ್ಲಿ ಏನೇ ಸಮಸ್ಯೆವಿದ್ದರು ಶಾಂತಿಯುತವಾಗಿ ನ್ಯಾಯ ದೊರಕಿಸುವ ಕಾರ್ಯದಲ್ಲಿ ಮುಂದಾಗಿದ್ದರು. ಅದಲ್ಲದೇ ದಲಿತರು ಮತ್ತು ಬೇರೆ ಸಮುದಾಯ ನಡುವೆ ಮನಸ್ತಾಪಗಳಿದ್ದರೆ ಈ ಕುಟುಂಬದ ಮರಣ್ಣ ಮತ್ತು ಎಸ್ ನಂಜುಂಡಯ್ಯನವರು ಬಗೆಹರಿಸುತ್ತಿದ್ದರು.ಇದು ಈ ಮನೆತನದ ಪರಂಪರೆಯಾಗಿದೆ.
ಎಸ್ ನಂಜುಂಡಸ್ವಾಮಿ ಅಂದರೆ ಚಾಮರಾಜನಗರ ಜಿಲ್ಲೆಯ ದಲಿತ ಜನಾಂಗದ ದೊಡ್ಡ ನಾಯಕರು ಅಪ್ಪಟ ಅಂಬೇಡ್ಕರ್ ವಾದಿಗಳು, ಬುದ್ದ ಬಸವ ಅಂಬೇಡ್ಕರ್ ತತ್ವವನ್ನು ಅಳವಡಿಸಿಕೊಂಡು ಮುಂದೆ ಬಂದರು.
ಶೋಷಿತರ ಪರ ಸದಾ ಹೋರಾಟದಲ್ಲಿ ತೊಡಗಿದರು.
ಇವರ ಕಾಲದಲ್ಲಿಯೇ ಚಾಮರಾಜನಗರ ದಲ್ಲಿ ಬುದ್ದ ಧ್ಯಾನ ಮಂದಿರ ಸ್ಥಾಪನೆಯಾಯಿತು ಹಾಗೂ ಇವರ ಮನೆಯ ಮುಂದೆಯೇ ಬೃಹತ್ ಆಕಾರದಲ್ಲಿ ಬುದ್ದನ ಪ್ರತಿಮೆಯನ್ನು ಸ್ಥಾಪಿಸಿಕೊಂಡಿದ್ದಾರೆ.
ಇಡೀ ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಅಪಾರ ಅಭಿಮಾನವಿದೆ.
ಇವರಿಗೆ ತಿರುಗಿ ಮಾತನಾಡುವವರು ಯಾರು? ಇರಲಿಲ್ಲ.
ಚಾಮರಾಜನಗರದ ಸಂತೇ ಮರಳ್ಳಿ ಸರ್ಕಲ್ , ಪಚ್ಚಪ್ಪ ಸರ್ಕಲ್, ಬಿ ರಾಚಯ್ಯ ಜೋಡಿ ರಸ್ತೆಯ ಅಗಲಿಕರಣದಲ್ಲಿ ಕಟ್ಟಡ ಮಾಲೀಕರು ಅಗಲೀಕರಣಮಾಡುವುದಕ್ಕೆ ಅಡ್ಡಿ ಪಡಿಸುತ್ತಿದ್ದಾಗ ಸರಕಾರಿ ಅಧಿಕಾರಿಗಳ ಜೊತೆಗೆ ನಿಂತು ಸಮಸ್ಯೆ ಬಗೆಹರಿಸಿದರು.
ರಸ್ತೆ ಬದಿಯಲ್ಲಿದ್ದ ತಮ್ಮ ಸ್ವಂತ ವಾಣಿಜ್ಯ ಕಟ್ಟಡವನ್ನು ತಾವೇ ನಿಂತು ಹೊಡಿಸಿ ರಸ್ತೆ ಅಗಲೀಕರಣಕ್ಕೆ ಸಹಕಾರ ಮಾಡಿದರು.
ಕೊನೆಯ ದಿನಗಳಲ್ಲಿ ಕೆಲ ರಾಜಕಾರಣಿಗಳಿಂದ ಮನನೊಂದರು.
ಶೈಕ್ಷಣಿಕ ಸಾಧನೆ:
2002 ರಲ್ಲಿ ನಂಜುಂಡಸ್ವಾಮಿ ರವರು ಜಿಲ್ಲಾ ಕೋರ್ಟ್ ಹಿಂಭಾಗ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು.
ಅಪಾರ ಜನ ಬಳಗವನ್ನು ಹೊಂದಿರುವ ಎಸ್ ನಂಜುಂಡಸ್ವಾಮಿರವರು ದಿನಾಂಕ 31 -03-2025 ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು.
ಒಬ್ಬ ಅಪ್ಪಟ ಅಂಬೇಡ್ಕರ್ ವಾದಿ ಹಾಗೂ ದಲಿತರ ಸಮಸ್ಯೆಗಳನ್ನು ಹುಲಿಯಂತೆ ಘರ್ಜಿಸಿ ಬಗೆಹರಿಸುತ್ತಿದ್ದರು.
ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು…..
ಹಾವೇರಿ.19.ಏಪ್ರಿಲ್.25:- ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ.ಇಲ್ಲಿನ ದಲಿತ ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಇದೀಗ…
ಮುಂಬೈ.19.ಏಪ್ರಿಲ್.25:- ರಾಷ್ಟ್ರೀಯ ಶಿಕ್ಷಣ ನೀತಿ, NEP 2020 ರ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ…
ಬೆಂಗಳೂರು,19.ಏಪ್ರಿಲ್.25:- ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ…
ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…
ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…
ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…