ಜಯಪುರ.12.ಫೆ.25:- ವಿಜಯಪುರ ಭೀಮಾತೀರದಲ್ಲಿ ಮತ್ತೆ ರಕ್ತದ ಓಕುಳಿ ಹರಿದಿದೆ. ಕೆಲ ದಿನಗಳಿಂದ ತಣ್ಣಗಿದ್ದ ಭೀಮೆಯ ಒಡಲಿಗೆ ಮತ್ತೆ ರುಧಿರದ ಅರ್ಪಣೆ ಆಗಿದೆ. ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಖಾಸಾ ಖಾಸಾ ಶಿಷ್ಯ, ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ ಹತ್ಯೆಯಾಗಿದ್ದಾನೆ.
ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಘಟನೆ ನಡೆದಿದೆ. ಬಾಗಪ್ಪನನ್ನು ಹಂತಕರು ಭೀಕರವಾಗಿ ಹತ್ಯೆಗೈದಿದ್ದಾರೆ. ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಇದೀಗ ಹಂತಕರು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ
ಭೀಮಾತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಇಂದು ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆತನ ಎದೆ ಭಾಗಕ್ಕೆ ಗುಂಡು ಹೊಕ್ಕಿದೆ. ಪರಿಣಾಮ ಬಾಗಪ್ಪ ಹರಿಜನ್ ಸಾವನ್ನಪ್ಪಿದ್ದಾನೆ.
ಯಾರು ಈ ಬಾಗಪ್ಪ ಹರಿಜನ್?
ಇಂದು ಹತ್ಯೆಯಾದ ಬಾಗಪ್ಪ ಹರಿಜನ್ ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್‌ನ ಶಿಷ್ಯನಾಗಿದ್ದ. ಜೊತೆಗೆ ಆತನ ಸಂಬಂಧಿಕನೂ ಆಗಿದ್ದ. ಭೀಮಾತೀರದ ಅತ್ಯಂತ ಶಾರ್ಪ್ ಶೂಟರ್ ಹಂತಕನಾಗಿದ್ದ. 2000 ವರ್ಷದ ಮೇ ತಿಂಗಳಲ್ಲಿ ಚಂದಪ್ಪ ಹರಿಜನ್ ಹತ್ಯೆ ನಂತರ ಭೀಮಾತೀರದಲ್ಲಿ ಬಾಗಪ್ಪ ಹರಿಜನ್ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದ.
ಚಂದಪ್ಪ ಹರಿಜನ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ
ಚಂದಪ್ಪ ಹರಿಜನನಿಗೆ ಸಂಬಂಧಿಸಿದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಂದಪ್ಪನ ಕುಟುಂಬಕ್ಕೂ, ಬಾಗಪ್ಪನಿಗೂ ದ್ವೇಷವಿತ್ತು ಎನ್ನಲಾಗದೆ. ಅಲ್ಲದೇ ಚಂದಪ್ಪ ಹರಿಜನನ ಸಂಬಂಧಿ ಬಸವರಾಜ್ ಹರಿಜನನ ಹತ್ಯೆ ಪ್ರಕರಣದಲ್ಲೂ ಬಾಗಪ್ಪನ ಹೆಸರು ಸದ್ದು ಮಾಡಿತ್ತು.
ಕೋರ್ಟ್ ಆವರಣದಲ್ಲೇ ನಡೆದಿತ್ತು ಗುಂಡಿನ ದಾಳಿ
2017ರಲ್ಲಿ ವಿಜಯಪುರ ಕೋರ್ಟ್ ಆವರಣದಲ್ಲಿ ಭಾಗಪ್ಪನ ಮೇಲೇ ಎದುರಾಗಿಗಳು ಶೂಟೌಟ್ ಮಾಡಿದ್ದರು. ಆದಾಗಲೇ ಹವಾ ಕ್ರಿಯೆಟ್ ಮಾಡಿದ್ದವನ ಹುಟ್ಟಡಗಿಸಲು ಗುಂಡು ಹಾರಿಸಿದ್ದರು. ಆಗ ಬಾಗಪ್ಪನ ಎಡ ಭುಜ, ಹೊಟ್ಟೆ ಸೇರಿದಂತೆ 4 ಗುಂಡುಗಳನ್ನು ಹಾರಿಸಿದ್ದರು.
ಕೂಡಲೇ ಆತನ ಆಪ್ತರು ಆತನನ್ನು ಬಿಎಲ್‌ಡಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಕೊಡಿಸಿದ ನಂತರ ಬಾಗಪ್ಪ ಬದುಕುಳಿದಿದ್ದ.
ಯಾರ ತಂಟೆಗೆ ಹೋಗಲ್ಲ ಅಂತ ಭೀಮೆ ಮೇಲೆ ಆಣೆ ಇಟ್ಟಿದ್ದ
ಆತನ ಭಂಡ ಧೈರ್ಯವೋ, ಗಟ್ಟಿ ಪಿಂಡವೋ, ಅದೃಷ್ಟವೋ, ದೇವರ ವರವೋ ಗೊತ್ತಿಲ್ಲ, ಗುಂಡು ತಿಂದು ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದ ಬಾಗಪ್ಪ, ಎದ್ದು ಕುಳಿತಿದ್ದ. ಸತತ ಚಿಕಿತ್ಸೆ ಬಳಿಕ ಸಾವಿನ ದವಡೆಯಿಂದ ಪಾರಾಗಿದ್ದ. ಇನ್ನು ಮುಂದೆ ನಾನು ಯಾರ ತಂಟೆಗೂ ಹೋಗಲ್ಲ.
ನನ್ನ ತಂಟೆಗೆ ಬಂದ್ರೆ ಬಿಡೋದಿಲ್ಲ ಅಂತ ಭೀಮೆ ಮೇಲೆ ಆಣೆ ಮಾಡಿದ್ದ. ಕೊಟ್ಟ ಮಾತಿನಂತೆ ಯಾರ ತಂಟೆಗೂ ಹೋಗದಂತೆ ಸೈಲೆಂಟಾಗೇ ಇದ್ದ. ಸೈಲೆಂಟಾಗೇ ತನ್ನ ಹವಾ ಬಳಸಿ ದುಡ್ಡು ಮಾಡ್ತಿದ್ದ ಎನ್ನಲಾಗಿದೆ.
ಬಾಗಪ್ಪನನ್ನು ಹತ್ಯೆ ಮಾಡಿದವರು ಯಾರು?
ಆಗಷ್ಟ 8 2018ರಲ್ಲಿ ಇದೇ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ಪೀರಪ್ಪ ಹಡಪದ್ ಎಂಬಾತ ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ. ಆಗ ಸುಪಾರಿ ನೀಡಿದ್ದು ಬೇರೆ ಯಾರೂ ಅಲ್ಲ, ಚಂದಪ್ಪ ಹರಿಜನ್ ಅಣ್ಣ ಯಲ್ಲಪ್ಪ ಹರಿಜನ್‌ನ ಮಕ್ಕಳು! ಆದರೆ ಆಗ ಬಚಾವಾಗಿದ್ದ ಬಾಗಪ್ಪ, ಇಂದು ಗುಂಡು ತಿಂದು ಉಸಿರು ನಿಲ್ಲಿಸಿದ್ದಾರೆ.
ಆದರೆ ಈ ಹತ್ಯೆ ಮಾಡಿದವರು ಯಾರು? ಕೊಂಚ ಶಾಂತವಾಗಿದ್ದ ಭೀಮೆಗೆ ಮತ್ತೆ ರಕ್ತದೋಕುಳಿ ಹರಿಸಿದವರು ಯಾರು? ಈ ಪ್ರಶ್ನೆಗೆ ವಿಜಯಪುರ ಪೊಲೀಸರು ಉತ್ತರ ಹುಡುಕಬೇಕಿದೆ.
ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…
ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…
ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…
ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…
ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…
ಕಲಬುರಗಿ .19.ಏಪ್ರಿಲ್.25:- ಕಲಬುರಗಿಯಲ್ಲಿ ಬಿಜೆಪಿ/ ಕಾಂಗ್ರೆಸ್ ಜಟಾಪಟಿ ಮುಂದು ವರೆದಿದ್ದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತೊಮ್ಮೆ ಪ್ರಿಯಾಂಕ್ ಖರ್ಗೆ…