ಬೀದರ, ನವೆಂಬರ್.30:- ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ ಹಾಗೂ ಅಕ್ಷರ ಫೌಂಡೇಶನ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರೀಯವಾಗಿ ತೊಡಗಿಸಿಕೊಂಡಿರುವುದು 2024-25ನೇ ವರ್ಷಕ್ಕೆ 25 ವರ್ಷಗಳು ಪೂರೈಸಲಿದೆ ಎಂದು ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕರಾದ ರಂಗನಾಥÀ ಪಲ್ಲೇದ್À ಹೇಳಿದರು.
ಅವರು ಗುರುವಾರ ಡಯಟ್ ಸಭಾಂಗಣ ನೌಬಾದ ಬೀದರದಲ್ಲಿ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕೀರಣ 2024-25 ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಶಾಲಾ ಸಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕೀರಣದ ಗ್ರಾಮ ಪಂಚಾಯತ ಗಣಿತ ಸ್ಪರ್ಧೆಗಳ ಜಿಲ್ಲಾ ವರದಿ ಬಿಡುಗಡೆ ಹಾಗೂ ಶಾಲಾ ಮತ್ತು ಗ್ರಾಮ ಪಂಚಾಯತಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಗೆ ಹಾಗೂ ಗ್ರಾಮ ಪಂಚಾಯತ್ ಇಲಾಖೆಗೆ ಅಭಿನಂದಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್ ಮಟ್ಟದ ಗಣಿತ ಸ್ಪರ್ಧೆಗಳ ಮಕ್ಕಳ ಫಲಿತಾಂಶದ ಆಧಾರದ ಮೇಲೆ ಜಿಲ್ಲೆಯ 25 ಶಾಲೆಗಳನ್ನು ಹಾಗೂ 25 ಪಂಚಾಯತಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಅವರ ಉಪಸ್ಥಿತಿಯಲ್ಲಿ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಯರವರಿಗೆ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು, ಪಿಡಿಓ ಅವರಿಗೆ ಸನ್ಮಾನಿಸಲಾಗುವುದು ಹಾಗೂ ಗ್ರಾಮ ಪಂಚಾಯತ ಮಟ್ಟದ ಗಣಿತ ಸ್ಪರ್ಧೆಗಳ ಜಿಲ್ಲಾ ವರದಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ಗಣಿತ ಕಲಿಕಾ ಆಂದೋಲನ ಯೋಜನೆಯು ಸುಮಾರು ವರ್ಷಗಳಿಂದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಮಕ್ಕಳು ಗಣಿತ ವಿಷಯವನ್ನು ಸರಳವಾಗಿ, ಅನುಭವಾತ್ಮಕವಾಗಿ ಕಲಿಯಲು ಜಿಲ್ಲೆಯ ಪ್ರತಿ ಶಾಲೆಗಳಿಗೆ ಗಣಿತ ಕಿಟ್ ನೀಡುವುದರ ಮೂಲಕ ಅನುಷ್ಠಾನಗೊಂಡಿರುತ್ತದೆ. ಈ ಯೋಜನೆಯಡಿ ಬೀದರ ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ ಮಟ್ಟದ ಶೈಕ್ಷಣಿಕ ತಂಡದ ನಾಯಕರು ಹಾಗೂ ಅಕ್ಷರ ಫೌಂಡೇಶನ್ ಸಹಭಾಗೀತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳನ್ನು 4ನೇ ತರಗತಿಯಿಂದ 6ನೇ ತರಗತಿಯ ಮಕ್ಕಳಿಗೆ ಒಟ್ಟು 185 ಗ್ರಾಮ ಪಂಚಾಯತಿಗಳಲ್ಲಿ ಮಾಡಲಾಯಿತು. ಸುಮಾರು 16000 ಮಕ್ಕಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೀದರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಆರ್.ಡೊಡ್ಡೆ ಅವರು ಜಿಲ್ಲಾ ಮಟ್ಟದ ಗಣಿತ ವರದಿಯನ್ನು ಬಿಡುಗಡೆಗೊಳಿಸಿದರು. ಹಾಗೂ 25 ಶಾಲೆಗಳ ಮುಖ್ಯ ಶಿಕ್ಷಕರು ಮತ್ತು 25 ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿಡಿಓಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೀದರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (ಅಭಿವೃದ್ಧಿ) ಎಸ್.ಎಲ್.ಪ್ರಸನ್ನ ಕುಮಾರ, ಬೀದರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ರವೀಂದ್ರ ರೆಡ್ಡಿ, ಅಜೀಂ ಪ್ರೇಮ್ ಜೀ ಫೌಂಡೇಶನ್‌ದ ಶಿವಕುಮಾರ, ಅಗಸ್ತö್ಯ ಫೌಂಡೇಶನ್‌ದ ಜಿಲ್ಲಾ ಮುಖ್ಯಸ್ಥರಾದ ಬಾಬುರಾವ್ ಎಸ್., ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರಾದ ರಂಗನಾಥ್ ಪಲ್ಲೇದ್, ವಿಭಾಗೀಯ ಸಂಯೋಜಕರಾದ ಪ್ರದೀಪರೆಡ್ಡಿ, ಉಪನ್ಯಾಸಕರಾದ ಗೋವಿಂದರೆಡ್ಡಿ, ಧನರಾಜ ಗುಡುಮೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…