ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿ  ನಮೂನೆ-9, 11-A’ ವಿತರಣೆಗೆ ಸರ್ಕಾರದಿಂದ ಆದೇಶ.!

ಬೆಂಗಳೂರು.14.ಮೇ.25:- ರಾಜ್ಯಾದ್ಯಂತ ಗ್ರಾಮ ಪಂಚಯತಿ ವ್ಯಾಪ್ತಿಯಲ್ಲಿ ಬರುವ ಅಸ್ತಿ ಮಾಲೀಕರಿಗೆ ನಮೂನೆ-9, 11-A’ ವಿತರಣೆಗೆ ಸರ್ಕಾರದಿಂದ ಆದೇಶ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಉಲ್ಲೇಖ (1) ರಲ್ಲಿ ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ.

ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಡಿ ರಡಿಯಲ್ಲಿ ಕಂದಾಯ ಇಲಾಖೆಯಿಂದ ವಿತರಣೆ ಮಾಡಲಾದ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉಂಟಾದ ಗೊಂದಲಗಳಿಗೆ ಉಲ್ಲೇಖ (2) ರಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದರಿ ಸಭೆಯ ನಡವಳಿಯಂತೆ ಈ ಕೆಳಕಂಡಂತೆ ಕ್ರಮ ವಹಿಸಲು ತಿಳಿಸಿದೆ.

ಕಂದಾಯ ಇಲಾಖೆಯ ತಂತ್ರಾಂಶದ ಮೂಲಕ ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಲ್ಲಿ ತಪ್ಪಾದ/ಅಪೂರ್ಣ (ವಿಸ್ತೀರ್ಣ, ಚಕ್ಕುಬಂಧಿ ಇತ್ಯಾದಿ) ಮಾಹಿತಿಯಿದ್ದಲ್ಲಿ, ಅಂತಹ ಹಕ್ಕು ಪತ್ರಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ PID ತಯಾರಿಸಿದ ಇ-ಸ್ವತ್ತು ತಂತ್ರಾಂಶದಲ್ಲಿ ತಿರಸ್ಕರಿಸುವುದು.

ತಪ್ಪಾದ/ಅಪೂರ್ಣ ಮಾಹಿತಿಯುಳ್ಳ ಹಕ್ಕುಪತ್ರಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ PID ಗಳನ್ನು ಸೃಜಿಸಿರುವ ಸಂದರ್ಭಗಳಿದ್ದಲ್ಲಿ XML ಫೈಲ್‌ಗಳನ್ನು ರಿಜೆಕ್ಟ್ ಮಾಡುವುದು, ಈಗಾಗಲೇ, ಒಂದು ವೇಳೆ ನೋಟೀಸ್ ಸೃಜಿಸಿ 15 ದಿನಗಳ ಮ್ಯುಟೇಷನ್ ಅವಧಿಯಲ್ಲಿದ್ದಲ್ಲಿ ಅಂತಹ PID ಗಳನ್ನು ಅನುಮೋದಿಸದೆ ಫಲಾನುಭವಿಗಳ ಮಾಹಿತಿಯನ್ನು ತಹಶೀಲ್ದಾರರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸುವುದು.

ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳ ವಿವರಗಳನ್ವಯ ಈಗಾಗಲೇ ಗ್ರಾಮ ಪಂಚಾಯಿತಿಯ ಪಂಚತಂತ್ರ ತಂತ್ರಾಂಶದಲ್ಲಿ ಫಲಾನುಭವಿಯ ವಿವರಗಳು ಇದ್ದಲ್ಲಿ ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸದೆ, ಪಂಚತಂತ್ರ ತಂತ್ರಾಂಶದಲ್ಲಿನ ಆಸ್ತಿಯ PID ಗೆ ಹಕ್ಕು ಪತ್ರವನ್ನು ಜೋಡಣೆ ಮಾಡುವುದು. ಈ ಪ್ರಕರಣದಲ್ಲಿ ನೊಂದಣಿಯ ಅಗತ್ಯ ಇರುವುದಿಲ್ಲ.

ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸಲಾಗಿದ್ದರೆ, ಪಂಚತಂತ್ರದಲ್ಲಿನ ಹಳೆಯ PIDಯನ್ನು ನಿಷ್ಕ್ರಿಯಗೊಳಿಸುವುದು (Disable).

ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸಲಾಗಿದ್ದು ಮತ್ತು ಪಂಚತಂತ್ರ ತಂತ್ರಾಂಶದಲ್ಲಿನ PID ಯನ್ನು ಇ-ಸ್ವತ್ತು ತಂತ್ರಾಂಶದಲ್ಲಿಒಂದಕ್ಕಿಂತ ಹೆಚ್ಚು ಬಾರಿ ವರ್ಗಾವಣೆಗೆ ಒಳಪಡಿಸಿದ್ದರೆ, ಅಂತಹ ಸಂದರ್ಭದಲ್ಲಿ ಹಕ್ಕು ಪತ್ರಗಳನ್ವಯ ಸೃಜಿಸಲಾಗಿರುವ PID ಯ XML File ಗೆ ಗ್ರಾಮ ಪಂಚಾಯಿತಿಯಿಂದ ನೋಟೀಸ್ ಸೃಜಿಸದೆ, XML File ಅನ್ನು ರಿಜೆಕ್ಟ್ ಮಾಡುವುದು. ಒಂದು ವೇಳೆ ನೋಟೀಸ್ ಸೃಜಿಸಿ, 15 ದಿನಗಳ ಮ್ಯುಟೇಷನ್ ಅವಧಿಯಲ್ಲಿದ್ದರೇ, ಅಂತಹ PID ಗಳನ್ನು ಅನುಮೋದಿಸದೆ ಫಲಾನುಭವಿಗಳ ಮಾಹಿತಿಯನ್ನು ತಹಶೀಲ್ದಾರರಿಗೆ ಮುಂದಿನ ಸೂಕ್ತ ತಿದ್ದುಪಡಿಗೆ ವರ್ಗಾಯಿಸುವುದು.

ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಡಿ ರಡಿಯಲ್ಲಿ ವಾಸದ ಮನೆಗಳಿಗೆ ಹಾಗೂ ಹೊಂದಿಕೊಂಡಿರುವ ಜಾಗಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿರುತ್ತದೆ. ಪ್ರಸ್ತುತ, ವಿತರಣೆ ಮಾಡಲಾಗಿರುವ ಹಕ್ಕು ಪತ್ರಗಳಲ್ಲಿ ನಿವೇಶನದ ಮಾಹಿತಿ ಮಾತ್ರ ಲಭ್ಯವಿರುವುದರಿಂದ ಕಾವೇರಿ ತಂತ್ರಾಂಶದಿಂದ ಗ್ರಾಮ ಪಂಚಾಯಿತಿಗಳು ಫಲಾನುಭವಿ ಹೆಸರಿಗೆ ಸ್ವೀಕರಿಸುವ XML File ಗಳನ್ನು ಮ್ಯುಟೇಷನ್ ಪ್ರಕ್ರಿಯೆಗೆ ಒಳಪಡಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು, 15 ದಿನಗಳ ನೋಟೀಸ್ ಅವಧಿಯಲ್ಲಿ ಹಕ್ಕು ಪತ್ರಗಳಲ್ಲಿನ ವಿವರಗಳಿಗೆ ಅನುಗುಣವಾಗಿ ಮನೆಗಳ ಸ್ಥಳ ಪರಿಶೀಲನೆ ಮಾಡಿ ಕಟ್ಟಡಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಹಜರಿನೊಂದಿಗೆ ಲಿಖಿತವಾಗಿ ಫಲಾನುಭವಿಯಿಂದ ಪಡೆದು ಫಲಾನುಭವಿಯ ಹೆಸರನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅನುಮೋದನೆ ಮಾಡಿದ ನಂತರ, ಪುನಃ ಮ್ಯಾನ್ಯುಯಲ್ ಮ್ಯುಟೇಷನ್ ಮಾಡುವ ಮೂಲಕ (ಸ್ವತ್ತಿನ ಪ್ರಕಾರ) ನಿವೇಶನದ ವಿವರದೊಂದಿಗೆ ಕಟ್ಟಡದ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂಧೀಕರಿಸುವ ಮೂಲಕ ಫಲಾನುಭವಿಯ ಹೆಸರಿಗೆ ನಮೂನೆಗಳ ವಿತರಣೆಗೆ ಕ್ರಮ ವಹಿಸುವುದು.

ಹಕ್ಕು ಪತ್ರಗಳ ಷರತ್ತುಗಳನ್ವಯ ಫಲಾನುಭವಿಗಳು ಪಡೆದ ಆಸ್ತಿಯನ್ನು 15 ವರ್ಷಗಳ ಅವಧಿಯವರಗೆ ಪರಭಾರೆ ಮಾಡದ ಅಂಶವನ್ನು ಇ-ಸ್ವತ್ತು ತಂತ್ರಾಂಶದ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಸ್ವಯಂ ಚಾಲಿತವಾಗಿ (Automatic) ದಾಖಲಾಗಿರುವುದನ್ನು ಹಾಗೂ ಇ-ಸ್ವತ್ತು ನಮೂನೆಗಳಲ್ಲಿ ದಾಖಲಾಗಿರುವುದರ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ದೃಢೀಕರಿಸಿಕೊಳ್ಳುವುದು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಟ್ಟಡ/ನಿವೇಶನ PTCL ವ್ಯಾಪ್ತಿಗೆ ಒಳಪಡುವುದರಿಂದ PTCL ಕಾಯ್ದೆಯಂತೆ ಕ್ರಮ ವಹಿಸುವುದು.

ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿಯ ಇತರೆ ಎಲ್ಲಾ ಅಧಿಕಾರಿಗಳು, ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರುಗಳು, ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಸೂಚಿಸಿದೆ.

prajaprabhat

Recent Posts

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

2 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

5 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

5 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

5 hours ago

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

12 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

12 hours ago