ಬೆಂಗಳೂರು.24.ಮಾರ್ಚ್.25:-ರಾಜ್ಯದಲ್ಲಿ ಬಹುದಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡುವ ಕುರಿತು ಆದೇಶ.
ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಉಲ್ಲೇಖ(1) ರ ಆದೇಶದಲ್ಲಿ ವಾಟರ್ ಅಪರೇಟರ್, ಅಟೆಂಡರ್ ಹಾಗೂ ಸ್ವಚ್ಛತಾಗಾರರಿಗೆ ದಿನಾಂಕ:31.10.2017 ಕ್ಕಿಂತ ಹಿಂದೆ ನೇಮಕಗೊಂಡು, ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಗಾಗಿ ಬಾಕಿ ಇರುವ ಸಿಬ್ಬಂದಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊರತುಪಡಿಸಿ (ಕೈಬಿಟ್ಟು) ಸಭಾ ನಡವಳಿ ವೇತನ ಪಾವತಿ ಹಾಜರಾತಿ ಆಧಾರದ ಮೇಲೆ ಒಂದು ಬಾರಿಗೆ ಜಿಲ್ಲಾ ಪಂಚಾಯತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಆದೇಶಿಸಲಾಗಿರುತ್ತದೆ.
ಉಲ್ಲೇಖ(2)ರಲ್ಲಿ ದಿನಾಂಕ:31.10.2017 ಕ್ಕಿಂತ ಹಿಂದೆ ನೇಮಕಗೊಂಡು, ಎಲ್ಲಾ ದಾಖಲೆಗಳು ಸರಿಯಾಗಿದ್ದು, ಜಿಲ್ಲಾ ಪಂಚಾಯತಿಯಿಂದ ಅನುಮೋದನೆಗೆ ಬಾಕಿ ಇರುವ ಸಿಬ್ಬಂದಿಗಳಿಗೆ ಅನುಮೋದನೆ ನೀಡುವ ಕುರಿತು ಆದೇಶಿಸಲಾಗಿರುತ್ತದೆ. ಉಲ್ಲೇಖ(3) ರಲ್ಲಿ ಮೇಲ್ಕಂಡ ಆದೇಶಗಳನ್ವಯ ವಹಿಸಿರುವ ಕ್ರಮದ ಕುರಿತು ಮಾಹಿತಿಯನ್ನು ನೀಡಲು ಎಲ್ಲಾ ಜಿಲ್ಲಾ ಪಂಚಾಯತಿಗಳಿಗೆ ಕೋರಲಾಗಿದ್ದು, ಸ್ವೀಕೃತ ಮಾಹಿತಿಯನ್ನು ಪರಿಶೀಲಿಸಲಾಗಿ ಜಿಲ್ಲೆಗಳ ಹಂತದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಅನುಮೋದನೆ ಬಾಕಿ ಉಳಿದಿರುವುದು ಕಂಡು ಬಂದ ಕಾರಣ ಉಲ್ಲೇಖ(4) ರಂತೆ ಅರೆ ಸರ್ಕಾರಿ ಪತ್ರದಲ್ಲಿಯೂ ಸಹ ಈ ವಿಷಯವನ್ನು ಆದ್ಯತೆ ಮೇಲೆ ಪರಿಗಣಿಸಿ ಅನುಮೋದನೆ ನೀಡಲು ತಿಳಿಸಲಾಗಿರುತ್ತದೆ.
ಸದರಿ ವಿಷಯದ ಕುರಿತು, ರಾಜ್ಯ ಮಟ್ಟದಲ್ಲಿ ನಡೆದ ಹಲವಾರು ಸಭೆಗಳಲ್ಲಿ ಸಹ ಚರ್ಚೆಯಾಗಿರುತ್ತದೆ. ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಮೋದನೆ ನೀಡಲು ಸರ್ಕಾರದಿಂದ ಆದೇಶ ನೀಡಿದ್ದರೂ ಈವರೆಗೆ ಸಿಬ್ಬಂದಿಗಳಿಗೆ ಅನುಮೋದನೆ ನೀಡಲು ವಿಳಂಭವಾಗಿದ್ದು ಸದರಿ ವಿಷಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಮತ್ತಷ್ಟು ವಿಳಂಬಕ್ಕೆ ಆಸ್ಪದ ನೀಡದೇ ವೈಯಕ್ತಿಕ ಗಮನ ಹರಿಸಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳಿಗೆ ಉಲ್ಲೇಖಿತ ಆದೇಶಗಳಂತೆ ಅನುಮೋದನೆಯನ್ನು ನೀಡಲು ಕ್ರಮವಹಿಸುವಂತೆ ತಿಳಿಸಿದೆ.
ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…
ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…
ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…
ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…
ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…
ಬಂಧುಗಳೇ, ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…