ಬೀದರ.28.ಏಪ್ರಿಲ್.25:- ಮಹಾತ್ಮಾ ಗಾಂಧಿ ನರೆಗಾ ಯೋಜನೆಯಡಿ ಹೆಚ್ಚು ಕೂಲಿ ಕಾರರಿಗೆ ಕೆಲಸ ನೀಡುವ ಉದ್ದೇಶದಿಂದ ಏಪ್ರಿಲ್. 30 ರಿಂದ ಮೇ. 31 ರವರೆಗೆ “ಕಾಯಕ ಮಾಸಾಚಾರಣೆ ಹಮ್ಮಿಕೊಳ್ಳಲಾಗಿರುವುದರಿಂದ ಏಪ್ರಿಲ್.28 ಮತ್ತು 29 ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ವಿಶೇಷ ಅಭಿಯಾನ ಕೈಗೊಂಡು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕಾಯಕ ಮಾಸಾಚರಣೆಯ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬರುವಂತೆ ಪ್ರೇರೆಪಿಸಬೇಕೆಂದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ತಿಳಿಸಿದ್ದಾರೆ.
ಏಪ್ರೀಲ 30 ರಂದು ಕಾಯಕ ತತ್ವದ ಪ್ರತಿಪಾದಕರಾದ ವಿಶ್ವಗುರು ಬಸವಣ್ಣನವರ ಜಯಂತಿ ದಿನದಂದು ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವ ಮೂಲಕ ಕಾಯಕ ಮಾಸಾಚರಣೆಯನ್ನು ಪ್ರಾರಂಭಿಸುವುದು, ಮತ್ತು ಕೂಲಿಕಾರರೊಂದಿಗೆ ಕಾಮಗಾರಿಗಳ ಸ್ಥಳಗಳಲ್ಲಿ ಬಸವ ಜಯಂಯನ್ನು ಆಚರಿಸಬೇಕೆಂದರು.
ಮಹಾತ್ಮಾ ಗಾಂಧಿ ನರೆಗಾ ಯೋಜನೆಯು ಗ್ರಾಮೀಣ ಪ್ರದೇಶದ ಪ.ಜಾತಿ/ಪ.ಪಂ/ಅತಿ ಸಣ್ಣ ರೈತರು/ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶದ ದುಡಿಯುವ ವರ್ಗ ಹಾಗೂ ದುರ್ಬಲ ವರ್ಗಗಳಿಗೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ಕೆಲಸ ನೀಡುವ ಮೂಲಕ ಗ್ರಾಮೀಣ ಬಡ ಕೂಲಿಕಾರರ ಬದುಕುಗಳಿಗೆ ಆಸರೆಯಾಗುವ ಮಹತ್ವದ ಸರ್ಕಾರಿ ಯೋಜನೆಯಾಗಿದ್ದು, ಬೀದರ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಬಡಕೂಲಿಕಾರರು ಇದ್ದು, ಜಿಲ್ಲೆಯ ಕೂಲಿಕಾರರು ಬೇರೆ ರಾಜ್ಯಗಳಿಗೆ ಕೂಲಿ ಆರಸಿ ವಲಸೆ ಹೋಗುವುದನ್ನು ತಡೆಗಟ್ಟಿ ಅವರವರ ಗ್ರಾಮಗಳಲ್ಲಿಯೇ ಮಹಾತ್ಮಾಗಾಂಧಿ ನರೆಗಾ ಯೋಜನೆಯಡಿ ಕೂಲಿ ಕೆಲಸ ನೀಡುವ ಮೂಲಕ ಅವರನ್ನು ಅವರ ಬದುಕುಗಳಿಗೆ ಆಸರೆ ಆಗಬಹುದು ಈಗ ಬೇಸಿಗೆ ಕಾಲವು ಆರಂಭವಾಗಿದ್ದು, ಬಡವರು, ರೈತರು ಮತ್ತು ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಖಾಲಿಯಿರುವುದರಿಂದ ಅವರುಗಳಿಗೆ ಕೂಲಿ ಕೆಲಸ ನೀಡಬೇಕಾಗಿರುತ್ತದೆಂದರು..
ತಾಲ್ಲೂಕುಗಳ ಇಅ ಸಮಾಲೋಚಕರು ಮತ್ತು ಗ್ರಾಮ ಪಂಚಾಯತಿಗಳ ಡಿ.ಇ.ಒ.ಗಳು ಮತ್ತು ಗ್ರಾಮ ಕಾಯಕ ಮಿತ್ರರು ಪಂಚಾಯತ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬರುವಂತೆ ಪ್ರೆರೇಪಿಸುವುದು. ಹಾಗೂ ತಾಲೂಕಾ ಇಅ ಗಳು ಪ್ರತಿ ಗುರುವಾರ ಕಡ್ಡಾಯವಾಗಿ ರೋಜಗಾರ ದಿನಾಚಾರಣೆಯನ್ನು ಚಟುವಟಿಕೆಗಳನ್ನು ಕೈಗೊಳ್ಳಬೇಕು ಹಾಗೂ ಕೊಲಿಕಾರರಿಗೆ ಹೊಸ ಉದ್ಯೋಗ ಚೀಟಿಗಳನ್ನು ನೀಡಬೇಕು.
ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಖಿಂಇ ಗಳು ಮತ್ತು ಟಿಸಿ ಖಿಅ ಗಳು ಪ್ರತಿ ಗ್ರಾಮ ಪಂಚಾಯತಗಳಲ್ಲಿ ಕನಿಷ್ಠ 500 ಜನ ಕೂಲಿಕಾರರಿಗೆ ಕೆಲಸ ನೀಡುವಂತಹ ಕೆರೆ ಹೂಳೆತ್ತುವ, ನಾಲಾ ಹೂಳೆತ್ತುವ ಹಾಗು ಅಅಖಿ ಕಾಮಗಾರಿಗಳಂತಹ ಕಾಮಗಾರಿಗಳ ಹೆಚ್ಚು ಸಂಖ್ಯೆ ಓಒಖ ಗಳನ್ನು ಸೃಜಿಸುವುದು. ಹಾಗು ಒಂದು ಓಒಖ ಮುಕ್ತಾಯಗೊಂಡ ಕೂಡಲೇ ಮತ್ತೊಂದು ಓಒಖ ಕಾಮಗಾರಿ ಪ್ರಾರಂಭವಾಗುವoತೆ ನೋಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಓಒಖ ಮುಕ್ತಾಯಗೊಂಡಿದೆ. ಮತ್ತೊಂದು ಓಒಖ ತೆಗೆಯತ್ತೇವೆ ಎಂದು ಹೇಳುತ್ತಾ ಕೂಲಿಕಾರರ ಕೆಲಸವನ್ನು ನಿರಾಕರಿಸಬಾರದೆಂದರು.
ಸಹಾಯಕ ನಿರ್ದೇಶಕರು (ಗ್ರಾ.ಉ) ಇವರುಗಳು ನಿಯತವಾಗಿ ಮೇಲ್ವಿಚಾರಣೆ ಮಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಕೆಲಸ ನೀಡಲಾಗುತ್ತಿದೆ ಎನ್ನುವುದನ್ನು ಖಚಿತ ಪಡಿಸಕೊಳ್ಳಬೇಕು. ಕಾರ್ಯನಿರ್ವಾಹಕ ಅಧಿಕಾರಿಗಳು ಮೇಲಿಂದ ಮೇಲೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು. ಕಾಮಗಾರಿಗಳ ಸ್ಥಳಗಳಲ್ಲಿ ಕೂಲಿಕಾರರಿಗೆ ನೆರಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸೇರಿದಂತೆ ಕೂಲಿಕಾರರ ಆರೋಗ್ಯ ತಪಾಶಣಾ ಶಿಬಿರಗಳನ್ನು ಏಪರ್ಡಿಸಬೇಕು.
ಯಾವುದೇ ಗ್ರಾಮ ಪಂಚಾಯತಯಲ್ಲಿ ಕೂಲಿಕಾರರಿಗೆ ಕೆಲಸ ನೀಡದೆ ಇದ್ದರೆ ಅಂತಹ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು.12.ಆಗಸ್ಟ್.25:- ರಾಜ್ಯ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಚಿವ ರಾಮಲಿಂಗ…
ರಾಜ್ಯದ ಸರ್ಕಾರಿ ಕಾಲೇಜು'ಗಳಲ್ಲಿ ಅರ್ಹ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.…
ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ವಸತಿ ಶಾಲೆಯನ್ನು ಪದವಿಪೂರ್ವ…
ಕೊಪ್ಪಳ.11.ಆಗಸ್ಟ್.25: ಕೊಪ್ಪಳ ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ…
ಕೊಪ್ಪಳ.11.ಆಗಸ್ಟ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಮಾಲಿಪಾಟೀಲ ಅವರು ಆಗಸ್ಟ್ 12ರಂದು ಕೊಪ್ಪಳ ಜಿಲ್ಲೆಯ…
ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…