ಗ್ಯಾರಂಟಿ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ:ನಿರುದ್ಯೋಗ ಮುಕ್ತ ಕರ್ನಾಟಕ.

ಬೆಂಗಳೂರು.20.ಮೇ.25:- ಇದು ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಗ್ಯಾರಂಟೀ ಸರ್ಕಾರ ದೇಶದ ಯುವಕರ ಜೋತೆ “ಯುವಕರ ಭವಿಷ್ಯ ರೂಪಿಸಲು ಗ್ಯಾರಂಟೀ ಸರ್ಕಾರ ಅನೇಕ ಯೋಜನೆಗಳ ರೋಪಿಸಲ್ಲೂ ಸಿದ್ಧ.

ದೇಶದ  ಭವಿಷ್ಯ ಯುವಕರ ಕೈಯಲ್ಲಿದೆ. ಇಂತಹ ಯುವ ಸಮೂಹಕ್ಕೆ ಅಗತ್ಯ ಕೌಶಲ್ಯ ನೀಡಿ ಉದ್ಯೋಗ ದೊರಕಿಸಬೇಕೆಂಬುವುದು ಕರ್ನಾಟಕ ಸರ್ಕಾರದ ಸದಾಶಯವಾಗಿದೆ. ಹೆತ್ತ ಪಾಲಕರಿಗೆ ವಿದ್ಯಾವಂತ ಮಕ್ಕಳು ಹೊರೆಯಾಗಬಾರದು ಎನ್ನುವ ದೃಷ್ಠಿಯಿಂದ ನಿರುದ್ಯೋಗ ಯುವಕ-ಯುವತಿಯರಿಗೆ ಬೆಳಕಾಗಿ ರಾಜ್ಯ ಸರ್ಕಾರ “ಯುವ ನಿಧಿ” ಯೋಜನೆ ಜಾರಿಗೊಳಿಸಿದ್ದು, ಇದು ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಮೆಟ್ಟಿಲಾಗಿ ಪರಿಣಮಿಸಿದಲ್ಲದೆ ಅವರ ಬದುಕಿನಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ.

ಪಂಚ ಗ್ಯಾರಂಟಿಯಲ್ಲಿ ಒಂದಾಗಿರುವ ಯುವ ನಿಧಿ ಯೋಜನೆ ಯುವ ಸಮೂಹವನ್ನೇ ಕೇಂದ್ರಿಕರಿಸಿ ರೂಪಿಸಲಾಗಿದೆ. ಪದವಿ ಪಾಸಾದವರಿಗೆ ಮಾಸಿಕ ₹ 3,000 ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ಮಾಸಿಕ ₹ 1,500 ನೀಡಲಾಗುತ್ತಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳ ಕಾಲ ಉದ್ಯೋಗವಿಲ್ಲದವರಿಗೆ ಗರಿಷ್ಟ 2 ವರ್ಷಗಳ ಕಾಲ ಅಥವಾ ಉದ್ಯೋಗ ಸಿಗುವವರೆಗೂ ಯಾವುದು ಮೊದಲೋ ಅಲ್ಲಿಯವರೆಗೆ ಮಾಸಿಕ ದೃಢೀಕರಣ ಆಧಾರದ ಮೇರೆಗೆ ನಿರುದ್ಯೋಗ ಭತ್ಯೆ ಡಿ.ಬಿ.ಟಿ ಮೂಲಕ ಪಾವತಿಸಲಾಗುತ್ತಿದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಬಗೆಹರಿಸಿ ನಿರುದ್ಯೋಗ ಮುಕ್ತ ಕರ್ನಾಟಕ ಮಾಡುವ ಅಭಿಲಾಷೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ “ಯುವ ನಿಧಿ” ಯೋಜನೆ ಜಾರಿಗೆ ತಂದಿದ್ದು, ಯೋಜನೆ ಸದ್ಬಳಕೆ ಮಾಡಿಕೊಂಡ ಅನೇಕ ಯುವಕ- ಯುವತಿಯರು ಉದ್ಯೋಗಕ್ಕೆ ಅರ್ಜಿ ಹಾಕಲು, ಸಂದರ್ಶನದಲ್ಲಿ ಭಾಗವಹಿಸಲು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪುಸ್ತಕ ಖರೀದಿಸಲು ಯುವನಿಧಿ ಹಣ ಬಳಸುತ್ತಿದ್ದಾರೆ.

ಇದು ಅವರಲ್ಲಿ ಅತ್ಮಸ್ಥೆಂĒರ್ಯ ಇಮ್ಮಡಿಗೊಳಿಸಿದೆ. ಇನ್ನು ಕೆಲವರು ಹಳ್ಳಿಯಿಂದ ಪಟ್ಟಣಕ್ಕೆ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಹೋಗಿ ಪರೀಕ್ಷಾ ಪೂರ್ವ ತರಬೇತಿ ಪಡೆಯುತ್ತಿದ್ದಾರೆ.ನಗರದಲ್ಲಿಯೇ ವಸತಿ ಮಾಡಿಕೊಂಡು ಕೆಲಸ ಗಿಟ್ಟಿಸಬೇಕೆಂಬ ಛಲದಿಂದ ಅಭ್ಯಾಸ ಮಾಡುತ್ತಿರುವರು ಹಲವರು. ಓಡಾಟ, ಪುಸ್ತಕ ಖರೀದಿ, ಪರೀಕ್ಷಾ ತರಬೇತಿ, ವೈಯಕ್ತಿಕ ಖರ್ಚು, ವಸತಿ ವೆಚ್ಚ ಹೀಗೆ ಪ್ರತಿಯೊಂದಕ್ಕೂ ಯುವ ನಿಧಿ ಹಣ ಅವರಿಗೆ ಅಸರೆಯಾಗಿದಲ್ಲದೆ ಜೀವನದಲ್ಲಿ ಹೊಸ ಉತ್ಸಾಹ ಮೂಡಿಸಿದೆ. 28.19 ಕೋಟಿ ರೂ. ಖರ್ಚು: ಕಲಬುರಗಿ ಜಿಲ್ಲೆಯಲ್ಲಿ ಯುವ ನಿಧಿ ಯೋಜನೆ ಕಳೆದ ಎರಡು ವರ್ಷದಲ್ಲಿ ಪದವಿ ಮತ್ತು ಡಿಪ್ಲೋಮಾ ತೇರ್ಗೆಯಾದ 18,754 ನಿರುದ್ಯೋಗ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಇದರಲ್ಲಿ ಅಫಜಲಪೂರ-1,943, ಆಳಂದ-2,101, ಚಿಂಚೋಳಿ-1,104, ಚಿತ್ತಾಪುರ-1,398, ಜೇವರ್ಗಿ-1,948, ಕಲಬುರಗಿ-6,609, ಕಾಳಗಿ-527, ಕಮಲಾಪೂರ-778, ಸೇಡಂ-1,244, ಶಹಾಬಾದ-508 ಹಾಗೂ ಯಡ್ರಾಮಿ-594 ಜನ ನೋಂದಾಯಿಸಿಕೊoಡಿದ್ದಾರೆ. ಇವರಲ್ಲಿ ಅರ್ಹರಾದವರಿಗೆ ಡಿಸೆಂಬರ್-2023 ರಿಂದ ಫೆಬ್ರವರಿ-2025 ಅಂತ್ಯದ ವರೆಗೆ 28.19 ಕೋಟಿ ರೂ. ಹಣ ಡಿ.ಬಿ.ಟಿ ಮೂಲಕ ಪಾವತಿಸಿದೆ. ಯೋಜನೆ ಹಲವರ ಬದುಕಿಗೆ ದಾರಿ ದೀಪವಾಗಿದೆ. ಬಹುತೇಕರು ಜಿಲ್ಲೆಯಿಂದ ಹೊರಗಡೆ ಹೋಗಿ ನಾಗರಿಕ ಸೇವೆ ಪರೀಕ್ಷೆ ಎದುರಿಸಲು ತರಬೇತಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಉದ್ಯೋಗ ವಿನಿಮಿಯ ಕೇಂದ್ರದ ಸಹಾಯಕ ನಿರ್ದೇಶಕಿ ಭಾರತಿ ಅವರು. ಕೌಶಲ್ಯ ತರಬೇತಿ: ಯುವ ನಿಧಿ ಯೋಜನೆ ಕೇವಲ ನಿರುದ್ಯೋಗ ಭತ್ಯೆ ನೀಡುವುದಕ್ಕೆ ಸೀಮಿತವಲ್ಲ.

ನಿರುದ್ಯೋಗ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾರುಕಟ್ಟೆ ಬೇಡಿಕೆ ಅನುಗುಣವಾಗಿ ನಿರುದ್ಯೋಗಿ ಅಭ್ಯರ್ಥಿಗಳಿಗೆ ಕಲಿಕಾ ಕೌಶಲ್ಯ, ಸಂವಹನ ಕೌಶಲ್ಯ, ಸಂದರ್ಶನ ಎದುರಿಸುವ ಸಾಮರ್ಥ್ಯ ವೃದ್ಧಿಸಲು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಇಂಡಸ್ಟ್ರೀ: ಲಿಂಕೇಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ನಿಧಿ ನೊಂದಣಿಯಿAದ ನಿರುದ್ಯೋಗಿಗಳ ದತ್ತಾಂಶ ಲಭ್ಯವಾಗಿದ್ದರಿಂದ ಮುಂದಿನ ದಿನದಲ್ಲಿ ಇವರಿಗೆ ಉದ್ಯೋಗ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಸರ್ಕಾರದಿಂದ ನಡೆದಿದೆ.

ಧಾರವಾಡದಲ್ಲಿ ತರಬೇತಿ ಪಡೆಯುತ್ತಿರುವ ಯುವಕ: ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಮಹಾದಾಸೆಯೊಂದಿಗೆ ಜಿಲ್ಲೆಯ ಅಫಜಲಪೂರ ತಾಲೂಕಿನ ದುದ್ದಣಗಿ ಗ್ರಾಮದ ಫಲಾನುಭವಿ ಸಿದ್ದಲಿಂಗ ಶೌರಪ್ಪ ಪೂಜಾರಿ, ಯುವ ನಿಧಿ ಯೋಜನೆಯಡಿ ಮಾಸಿಕ ಸಿಗುವ ರೂ.3,000 ಹಣವನ್ನು ಸದ್ಬಳಕೆ ಮಾಡಿಕೊಂಡು ಧಾರವಾಡದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಪರೀಕ್ಷಾ ಪೂರ್ವ ತರಬೇತಿ ಪಡೆಯುತ್ತಿದ್ದಾರೆ.

ಆನ್‌ಲೈನ್ ಕ್ಲಾಸ್ ತರಬೇತಿ ಪಡೆಯಲು, ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಲು, ವಸತಿ ಖರ್ಚು ವೆಚ್ಚ ನೋಡಿಕೊಳ್ಳಲು, ಸ್ಪರ್ಧಾತ್ಮಕ ಪುಸ್ತಕ ಖರೀದಿಗೆ ಈ ಹಣ ಅನುಕೂಲವಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಮಹಿಳಾ ಪೇದೆ ಆಗುವ ಆಸೆ: ಬಡತನ ಕುಟುಂಬದಿಂದ ಬಂದಿರುವ ತಾವು ಹಿಂದೆಲ್ಲ ಓದಿಗೆ, ಪರೀಕ್ಷೆ ಬರೆಯಲು ತಂದೆ ಹತ್ತಿರವೇ ಹಣ ಕೇಳಬೇಕಿತ್ತು. ಇದೀಗ ಯುವ ನಿಧಿ ಹಣವನ್ನೇ ಉಪಯೋಗಿಸಿಕೊಂಡು ಕಲಬುರಗಿಯ ಮಾರ್ಗದರ್ಶಿ ಕೋಚಿಂಗ್ ಸೆಂಟರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವೆ.

ಮಹಿಳಾ ಪೊಲೀಸ್ ಕಾನ್ಸಟೇಬಲ್ ಆಗುವ ಆಸೆ ಇದೆ ಎನ್ನುತ್ತಾರೆ ಜಿಲ್ಲೆಯ ಸೇಡಂ ತಾಲೂಕಿನ ಬಡಗೇರಾ(ಬಿ) ಗ್ರಾಮದ ಕು. ಮಂಜುಳಾ ನರಸಪ್ಪ ಸಕ್ಸಾಲ್ ಅವರು.

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

3 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

3 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

3 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

3 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

3 hours ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

3 hours ago