ಗುಲಬರ್ಗಾ ವಿಶ್ವವಿದ್ಯಾಲಯ ಉತ್ತರ ಪತ್ರಿಕೆಗಳ ಬಂಡಲ್‌ ತಿಪ್ಪೆಗುಂಡಿಯಲ್ಲಿ!

ಗುಲಬರ್ಗಾ.18.ಮೇ.25:- ಗುಲಬರ್ಗಾ ವಿಶ್ವವಿದ್ಯಾಲಯದ ಆಫ್ಘಾನಗಳು ಒಂದೆರಡಲ್ಪ ಈ ಹಿಂದೆ ಉತ್ತರ ಪತ್ರಿಕೆಗಳು ಕಾಣೆಯಾಗಿ ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವೇ ವಿಳಂಬವಾಗಿದ್ದ ಘಟನೆಯಿಂದಲೂ ಎಚ್ಚೆತ್ತುಕೊಳ್ಳದ ವಿಶ್ವವಿದ್ಯಾಲಯ ಮತ್ತದೇ ಎಡವಟ್ಟು ಮಾಡಿದೆ.

ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳ ಬಂಡಲ್ ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದು ವಿಶ್ವವಿದ್ಯಾಲಯದ ನಿರ್ಲಕ್ಷ್ಯಗಳಿಗೆ ಮತ್ತೊಮ್ಮೆ ಕನ್ನಡಿ ಹಿಡಿದಂತಾಗಿದೆ.

ಕಲಬುರಗಿ ನಗರದ ಗುಡ್‌ಲಕ್ ಹೋಟೆಲ್ ಬಳಿಯ ತಿಪ್ಪೆಗುಂಡಿಯಲ್ಲಿ ಬಂಡಲ್‌ವೊಂದನ್ನು ಕಂಡ ಸ್ಥಳೀಯರೊಬ್ಬರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಉದಯ್ ಪಾಟೀಲ್ ಅವರ ಗಮನಕ್ಕೆ ತರುತ್ತಾರೆ. ಆ ನಂತರ ವಿವಿಗೆ ಉತ್ತರ ಪತ್ರಿಕೆಗಳ ಬಂಡಲ್ ವರ್ಗಾವಣೆಯಾಗಿದೆ.

ಆ ಬಂಡಲ್ ಮೇಲೆ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದ ವಿವರಗಳಿದ್ದವು. ಪರೀಕ್ಷಾ ಕೇಂದ್ರವಾಗಿದ್ದ ಗುರೂಜಿ ಪ್ರಥಮದರ್ಜೆ ಕಾಲೇಜಿನವರು ವಿಶ್ವವಿದ್ಯಾಲಯದ ನೋಡಲ್ ಕೇಂದ್ರವಾಗಿದ್ದ ಎನ್.ವಿ. ಪ್ರಥಮದಜೆ ಕಾಲೇಜಿಗೆ ಈ ‘ನಾವು ನೋಡಲ್‌ ಕೇಂದ್ರಕ್ಕೆ ಹಸ್ತಾಂತರಿಸಿರುವ ದಾಖಲೆಗಳು ನಮ್ಮ ಬಳಿ ಇದೆ. ನಮ್ಮಿಂದ ಪ್ರಮಾದವಾಗಿಲ್ಲ ಕೇಂದ್ರಕ್ಕೆ ತಲುಪಿದ ಮೇಲೆ ಏನಾಯಿತೆಂದು ಗೊತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇವಾಗಿದ್ದವು ಫೆಬ್ರವರಿ 6, 2025ರಂದು ಗುರೂಜಿ ಕಾಲೇಜಿನವರು ನೋಡಲ್ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ಬಂಡಲ್ ಮೇಲಿನ ವಿವರಗಳಿಂದ ತಿಳಿದು ಬರುತ್ತದೆ. ಏಪ್ರಿಲ್ 21ರಂದು ತಿಪ್ಪೆಗುಂಡಿಯಲ್ಲಿ ಸದರಿ ಬಂಡಲ್ ಸಿಕ್ಕಿದ್ದು ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ ಅವರಿಗೆ ಅದನ್ನು ಹಸ್ತಾಂತರಿಸಲಾಗಿದೆ.

ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ ಅವರಿಗೆ ಉತ್ತರ ಪತ್ರಿಕೆಗಳನ್ನು ಹಿಂದಯ ಪಾಟೀಲ್ ಬಲಭಾಗದಲ್ಲಿ ಇರುವವರು) ಹಸ್ತಾಂತರ ಮಾಡುತ್ತಿರುವುದು ಏಪ್ರಿಲ್ 21ರಂದು ಏನಾಯಿತೆಂದು ಸಿಂಡಿಕೇಟ್ ಸದಸ್ಯ ಉದಯ ಪಾಟೀಲ್ ಅವರು ವಿವರವಾಗಿ ‘ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದರು.

‘ಗುರೂಜಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರೀಕ್ಷಾ ನೊಡಲ್ ಕೇಂದ್ರವಾಗಿದ್ದ ಎನ್.ವಿ.ಕಾಲೇಜಿಗೆ ವರ್ಗಾಯಿಸಲಾಗಿತ್ತು. ನೋಡಲ್ ಕೇಂದ್ರಗಳಲ್ಲಿ ಇರುವ ಉತ್ತರಪತ್ರಿಕೆಗಳನ್ನು ಕಲೆಕ್ಟ್ ಮಾಡಿಕೊಳ್ಳುವ ಕೆಲಸ ವಿಶ್ವವಿದ್ಯಾಲಯದ್ದು ಗುರೂಜಿ ಕಾಲೇಜಿನವರು ಎನ್.ವಿ. ಕಾಲೇಜಿಗೆ ಉತ್ತರಪತ್ರಿಕೆಗಳನ್ನು ಕೊಟ್ಟಿರುವುದಕ್ಕೆ ಅವರ ಬಳಿ ದಾಖಲೆ ಹೊಂದಿದ್ದಾರೆ.

ಉದ್ದೇಶಪೂರ್ವಕವಾಗಿ ಬಂಡಲ್ ಎಸೆದಿದ್ದಾರೋ ಅಥವಾ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆಯೋ ಗೊತ್ತಿಲ್ಲ, ತಿಪ್ಪೆಗುಂಡೆಯಲ್ಲಿ ಬಂಡಲ್ ಬಿದ್ದಿರುವುದಾಗಿ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ತಿಳಿಸಿದರು.

110 ವಿದ್ಯಾರ್ಥಿಗಳ ಭವಿಷ್ಯ ಆ ಬಂಡಲ್‌ನಲ್ಲಿ ಇತ್ತು. ಗುಡ್‌ಲಕ್ ಹೋಟೆಲ್ ಸಮೀಪ ತಿಪ್ಪೆ ಇದ್ದು ಅಲ್ಲಿ ಬಂಡಲ್ ಪತ್ತೆಯಾಗಿತ್ತು. ಆ ವ್ಯಕ್ತಿಯು ಕರೆ ಮಾಡಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲೇ ಇದ್ದೆ ಜೊತೆಗೆ ಮೌಲ್ಯಮಾಪನ ರಿಜಿಸ್ಟರ್ ಬಳಿ ಮಾತನಾಡುತ್ತಿದ್ದ ಘಟನೆ ಕೇಳಿ ಎಲ್ಲರಿಗೂ ಆಘಾತವಾಯಿತು.

ಎಷ್ಟೊಂದು ನಿರ್ಲಕ್ಷ್ಯ ಹೇಗೆ ? ಎಡವಟ್ಟುಗಳನ್ನು ಮಾಡಿ ಕೊನೆಗೆ ವಿದ್ಯಾರ್ಥಿಗಳ ಮೇಲೆ, ಕಾಲೇಜುಗಳ ಮೇಲೆ ಆರೋಪ ಹೊರಿಸುತ್ತೀರಿ ಎಂದು ಅಧಿಕಾರಿಗಳ ಮೇಲೆ ರೇಗಾಡಿದೆ. ಬಂಡಲ್‌ಗಳನ್ನು ಪರೀಕ್ಷಾಂಗ ಕುಲಸಚಿವರಿಗೆ ಉತ್ತರ ಪತ್ರಿಕೆಗಳನ್ನು ಹಸ್ತಾಂತರಿಸಿ ಫೋಟೋ ತೆಗೆದುಕೊಂಡೆ.

ಸಿಂಡಿಕೇಟ್ ಗಮನಕ್ಕೆ ತೆಗೆದುಕೊಂಡು ಬರುವೆ. ನಿರ್ಲಕ್ಷ್ಯ ತಾಳಿದವರ ಮೇಲೆ ಕ್ರಮ ಆಗಬೇಕು ಎಂದು ತಿಳಿಸಿದೆ. ಏಪ್ರಿಲ್ 21, ಸಾಯಂಕಾಲ ನಾಲ್ಕು ಗಂಟೆಯ ಸಮಯದಲ್ಲಿ ಆಗಿರುವ ಘಟನೆ ಇದು.

ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಇದ್ದ ಪರೀಕ್ಷಾಂಗ ಕುಲಸಚಿವರಾದ ಮೇದಾವಿನಿ ಎಸ್. ಕಟ್ಟಿ ಅವರ ಅವಧಿಯಲ್ಲಿ ಈ ಸಮಸ್ಯೆ ಆಗಿದೆ ಎಂದು ಕುಲಸಚಿವರು ಹೇಳುತ್ತಿದ್ದರು. ತನಿಖೆಯಾದರೆ ಸತ್ಯ ಹೊರಬರುತ್ತದೆ ಎಂದು ಅವರಿಗೆ ಪ್ರತಿಕ್ರಿಯಿಸಿದೆ” ಇದಿಷ್ಟು ಉದಯ ಪಾಟೀಲರ ವಿವರಣೆ,

ಗುಲಬರ್ಗಾ ವಿಶ್ವವಿದ್ಯಾಯದ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು ಹಾಲಿ ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರ ಅವರು ಪ್ರತಿಕ್ರಿಯಿಸಲು ಸಂಪರ್ಕಿಸಿದಾಗ ನಾನು ಅಧಿಕಾರ ವಹಿಸಿಕೊಂಡ ನಂತರ ಆಗಿರುವ ಘಟನೆ ಇದಲ್ಲ ಎಂದಿಷ್ಟೇ ಹೇಳಿ, ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಪರೀಕ್ಷಾ ಪ್ರಕ್ರಿಯೆ ಹೇಗಿರುತ್ತದೆ ? ಪರೀಕ್ಷೆ ನಡೆದ ದಿನವೇ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪ್ಯಾಕ್ ಆಗಿ, ಸೀಲ್ ಆಗಬೇಕಾಗುತ್ತದೆ. ಪ್ರಾಂಶುಪಾಲರು ಮತ್ತು ಸೀನಿಯರ್ ಸೂಪ‌ರ್ ವೈಸರ್‌ಗಳ ಸಮ್ಮುಖದಲ್ಲಿ ಈ ಕೆಲಸವಾಗುತ್ತದೆ.

ಅಂದು ಸಾಯಂಕಾಲವೇ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು. ಒಂದು ವೇಳೆ ಪರೀಕ್ಷಾ ಕೇಂದ್ರವು ವಿಶ್ವವಿದ್ಯಾಲಯ ಮುಖ್ಯಕೇಂದ್ರಕ್ಕೆ ದೂರವಿದ್ದರೆ, ಪ್ರಾಂಶುಪಾಲರ ಕಸ್ಟಡಿಯಲ್ಲಿ ಲಾಕ್ ಮಾಡಿ ಇಟ್ಟು ಮುಂದಿನ ದಿನವೇ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು.

ಪರೀಕ್ಷಾ ಕೈಪಿಡಿಯ ಪ್ರಕಾರ ಮಹಾವಿದ್ಯಾಲಯಗಳನ್ನು ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗುತ್ತದೆ. ಸದರಿ ಎನ್‌ವಿ ಕಾಲೇಜು ಪರೀಕ್ಷಾ ಕೇಂದ್ರ ಮತ್ತು ನೋಡಲ್ ಕೇಂದ್ರವೂ ಹೌದು. ಉತ್ತರ ಪತ್ರಿಕೆಗಳು ಬರುತ್ತವೆಯಾದರೆ ಸಂಜೆ ಆರು ಗಂಟೆಯಾದರೂ ಸಿಬ್ಬಂದಿಗಳು ಕಾಯಬೇಕು.

prajaprabhat

Recent Posts

ಶ್ರೀ ನುಲಿಯ ಚಂದಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

3 minutes ago

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ದೊಡ್ಡ ಬದಲಾವಣೆಯನ್ನ ಮಾಡಲು ನಿರ್ಧರಿಸಿದೆ.

ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…

1 hour ago

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…

9 hours ago

ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ

ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…

10 hours ago

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…

10 hours ago

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…

12 hours ago