ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ, ಸಂಸದ ಶ್ರೀ ಸಾಗರ ಖಂದ್ರೆ

. ಬೀದರ್.01.ಜೂನ್.25:- ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ ತಿಳುವಳಿಕೆ ಪತ್ರ ವಿತರಣೆ – ಸಂಸದ ಶ್ರೀ ಸಾಗರ ಖಂಡ್ರೆ

ಬೀದರ ಲೋಕಸಭಾ ಕ್ಷೇತ್ರದ ಗುಡಿಸಲು ಮುಕ್ತಗೊಳಿಸುವ ಸಂಕಲ್ಪದ ಭಾಗವಾಗಿ, ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಭಾಲ್ಕಿ ತಾಲೂಕಿನ 34 ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಒಟ್ಟು 2,202 ಮನೆಗಳ ಮಂಜೂರಾತಿ ಪತ್ರಗಳು ಫಲಾನುಭವಿಗಳಿಗೆ ಹಸ್ತಾಂತರಿಸಲ್ಪಟ್ಟವು:

✅(ಪಿಎಂಎವೈ – ಗ್ರಾಮೀಣ) ಅಡಿಯಲ್ಲಿ: 1,424 ಮನೆಗಳು
✅ ಬಸವ ವಸತಿ ಯೋಜನೆ ಅಡಿಯಲ್ಲಿ: 593 ಮನೆಗಳು
✅ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ: 185 ಮನೆಗಳು

ಸಂಸದ ಶ್ರೀ ಸಾಗರ ಖಂಡ್ರೆ ಅವರು ಮಾತನಾಡಿ ಹೇಳಿದರು:
“ಸಾಮಾನ್ಯ ಜನರ ಕನಸುಗಳೇ ನಮ್ಮ ಪ್ರೇರಣೆಯಾಗಿದೆ. ಮನೆ ಎಂಬುದು ಕೇವಲ ಕಟ್ಟಡವಲ್ಲ, ಅದು ಆತ್ಮೀಯತೆಯ ಸಂಕೇತ. ಎಲ್ಲರಿಗೂ ವಸತಿ ಹಕ್ಕು ಸಿಗಬೇಕು ಎಂಬ ದೃಷ್ಟಿಯಿಂದ ನಾವು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತಾ, ಬೀದರ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳನ್ನು ಮಂಜೂರಿ ಮಾಡಿಸಿಕೊಂಡು ಫಲಾನುಭವಿಗಳಿಗೆ ನೀಡುತ್ತಿದ್ದೇವೆ.”

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಪಾಲ್ಗೊಂಡು ಮಾತನಾಡುತ್ತಾ ಹೇಳಿದರು:
“ಭಾಲ್ಕಿ ಕ್ಷೇತ್ರದಲ್ಲಿ ಈ ಹಿಂದೆ ನಮ್ಮ ಸರ್ಕಾರದಲ್ಲಿಯೇ ನಾನು ಸುಮಾರು 25,000 ಮನೆಗಳನ್ನು ವಿತರಿಸಿ, ಗುಡಿಸಲು ಮುಕ್ತ ಭಾಲ್ಕಿ ನಿರ್ಮಾಣದ ನಿಟ್ಟಿನಲ್ಲಿ ಕಾರ್ಯ ಮಾಡಿದ್ದೇನೆ. ಸಂಸದ ಸಾಗರ ಖಂಡ್ರೆ ಅವರು ಕೂಡಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬೀದರ ಲೋಕಸಭಾ ಕ್ಷೇತ್ರಕ್ಕೆ ಸುಮಾರು 50,000 ಮನೆಗಳ ಮಂಜೂರಾತಿ ಮಾಡಿಸಿದ್ದಾರೆ. ಅವರು ಜನರ ಹಿತದೃಷ್ಟಿಯಿಂದ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.”

prajaprabhat

Recent Posts

ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ…

55 minutes ago

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ಸಂದರ್ಶನ

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 16 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ…

1 hour ago

ನಾಳೆಯಿಂದ ಮುಂಗಾರು ಅಧಿವೇಶನ ಆರಂಭ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆ ಸಜ್ಜು

ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…

8 hours ago

KSRTC ಬಸ್, ಕಾರು ಡಿಕ್ಕಿ 2 ಮೃತೀವ್

ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾ‌ರ್ ನಲ್ಲಿದ್ದ ತಂದೆ ಮಗ…

8 hours ago

ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್‌.ಎನ್‌.ಅಶೋಕ್

ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…

10 hours ago

ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಶಿಕ್ಷಣ ಇಲಾಖೆಯಿಂದ ಬಿಡುಗಡೆ.

ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…

10 hours ago