ಕಮಲನಗರ.08.ಏಪ್ರಿಲ್.25:- ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಸೋಮವಾರ ಸಂಜೆ ಆಯೋಜಿಸಿದ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು ನಿವೇಶನ ಕಲ್ಪಿಸಿಕೊಟ್ಟರೆ ಆದಷ್ಟು ಬೇಗ ಎರಡು ಗಡಿ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಜವಾಬ್ದಾರಿ ನನ್ನದು’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.
‘ಈಗಾಗಲೇ ಕಮಲನಗರ ತಾಲ್ಲೂಕಿನಲ್ಲಿ ಕನ್ನಡ ಭವನಕ್ಕೆ ಅನುದಾನ ನೀಡಲು ಘೋಷಣೆ ಮಾಡಿದ್ದೇನೆ. ಇನ್ನು ಔರಾದ್‌ನಲ್ಲಿ ಈಗಾಗಲೇ ಕನ್ನಡ ಭವನ ಇದೆ. ಆದರೆ ಅದು ಚಿಕ್ಕದಾಗಿದೆ. ತಹಶೀಲ್ದಾರರರು ನಿವೇಶನ ಕೊಟ್ಟರೆ ಸಕಲ ಸೌಲಭ್ಯವುಳ್ಳ ದೊಡ್ಡ ಭವನ ಕಟ್ಟಲು ಅನುಕೂಲವಾಗಲಿದೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಈ ಗಡಿ ಭಾಗದಲ್ಲಿ ಎಲ್ಲರೂ ಸೇರಿ ಕನ್ನಡ ಕಟ್ಟುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ‘ಜಿಲ್ಲೆಯಲ್ಲಿ ಕನ್ನಡ ಕೆಲಸಕ್ಕೆ ಶಾಸಕ ಪ್ರಭು ಚವಾಣ್ ಅವರ ಸಹಕಾರ ಬಹಳಷ್ಟಿದೆ’ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಬಾಲಾಜಿ ಅಮರವಾಡಿ, ನಿಕಟಪೂರ್ವ ಅಧ್ಯಕ್ಷ ಶಾಲಿವಾನ ಉದಗಿರೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘುಳೆ, ತಹಶೀಲ್ದಾರ್ ಮಹೇಶ ಪಾಟೀಲ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್, ವೈಜಿನಾಥ ಬುಟ್ಟೆ, ಪ್ರಶಾಂತ ಮಠಪತಿ ಮತ್ತಿತರರು ಇದ್ದರು. ಮಹಾನಂದಾ ಯಂಡೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು.
ನನ್ನ ಕನ್ನಡ ಕೆಲಸ ಕೆಲವರು ಸಹಿಸುತ್ತಿಲ್ಲ: ಚವಾಣ್
‘ನಮ್ಮದು ಗಡಿ ಭಾಗ ಅಂದು ಈ ಭಾಗದಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಅನಿವಾರ್ಯವಾಗಿ ಮರಾಠಿ ಓದಬೇಕಾಯಿತು. ಆದರೆ ನಾನೊಬ್ಬ ಕನ್ನಡಿಗ ಶಾಸಕ. ಕನ್ನಡ ಅಂದರೆ ನನಗೆ ಅಭಿಮಾನ ಕನ್ನಡ ಕೆಲಸಗಳಿಗೆ ಸದಾ ಪ್ರೋತ್ಸಾಹಿಸುವುದು ಎಲ್ಲರಿಗೂ ಗೊತ್ತಿದೆ. ಆದರೆ ಕೆಲವರು ಇದನ್ನು ಸಹಿಸಿಕೊಳ್ಳದೆ ನನಗೆ ಕಿರುಕುಳ ನೀಡುವುದು ನನ್ನ ವಿರುದ್ಧ ಅಪಪ್ರಚಾರ ಮಾಡುವುದು ನಡೆಯುತ್ತಿದೆ’ ಎಂದು ಶಾಸಕ ಪ್ರಭು ಚವಾಣ್ ಬೇಸರ ವ್ಯಕ್ತಪಡಿದರು.
ಇದು ಗಡಿ ಭಾಗ ಇರುವುದರಿಂದ ತಾಲ್ಲೂಕಿನ ಜನ ಶಿಕ್ಷಣ ಉದ್ಯೋಗಕ್ಕಾಗಿ ಪಕ್ಕದ ಮಹಾರಾಷ್ಟ್ರಕ್ಕೆ ಹೋಗುವುದು ಸಹಜ. ಹೀಗೆ ಹೋದವರೆಲ್ಲ ನೀವು ಮಹಾರಾಷ್ಟ್ರದವರು ಎನ್ನಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು ನಾನು ಕನ್ನಡಿಗ ಕನ್ನಡಿಗನಾಗಿ ಇಲ್ಲಿಯೇ ಇರುತ್ತೇನೆ ಯಾವುದಕ್ಕೆ ಬಗ್ಗುವುದಿಲ್ಲ ಜಗ್ಗುವುದಿಲ್ಲ’ ಎಂದು ಹೇಳಿದರು.
ಮಂಗಳೂರು.19.ಏಪ್ರಿಲ್.25:- ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟ ನಗರ ಹೊರವಲಯದ ಅಡ್ಯಾರ್…
ಬೆಂಗಳೂರು.19.ಏಪ್ರಿಲ್.25:- ರಾಜ್ಯಾಧ್ಯಂತ 22.04.2025ರಂದು ವಿಶ್ವ ಭೂ ದಿನ ಆಚರಿಸುವ ಕುರಿತು. (World Earth day Celebration) ಶಾಲಾ ಶಿಕ್ಷಣ ಮತ್ತು…
ಹುಲಸೂರ.19.ಏಪ್ರಿಲ್.25:- ಹುಲಸೂರ: ಸಮೀಪದ ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದಲ್ಲಿರುವ ಭಾಲ್ಕಿಯ ಖಾಸಗಿ ಬ್ಯಾಂಕ್ ನ ಸಿಬ್ಬಂದಿಗಳು ಸಾಲದ ಕಂತಿನ ಹಣ…
ಬೀದರ.19.ಏಪ್ರಿಲ್.25:- ಬೀದರದ APMC ಯಾರ್ಡ್, ಎಲ್ಲರಿಗೂ ಗೊತ್ತಿರುವಂತೆ, ನಾವು “ಗಾಂಧಿ ಗಂಜ” ಎಂದು ಕರೆಯುತ್ತೇವೆ. ಇದು ಬೀದರದ ಪ್ರಮುಖ ಕೃಷಿ…
ನವದೆಹಲಿ.18.ಏಪ್ರಿಲ್.25;- ವಿವಾದಾತ್ಮಕ ಹೇಳಿಕೆಯೊಂದರಲ್ಲಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಚಂಪೈ ಸೊರೆನ್ ಅವರು ಬೇರೆ ಧರ್ಮಕ್ಕೆ…
ಬೆಂಗಳೂರು.18.ಏಪ್ರಿಲ್.25:- ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು 2024-25ನೇ ಸಾಲಿನ. ನಿರ್ವಹಿಸಬೇಕಾದ…