ಬೀದರ.28.ಫೆ.25:- ಯಾಕತಪೂರ ಬೀದರ ತಾಲೂಕಿನ ನಾಗೂರ ಗ್ರಾಮದಲ್ಲಿರುವ ಖಾಸಗಿ ಜ್ಞಾನೋದಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ಮಾಧ್ಯಮ ಶಾಲೆಯಲ್ಲಿ ಗಡಿ ಗ್ರಾಮಗಳಲ್ಲಿ ಕನ್ನಡ ಭಾಷಾ ಜಾಗೃತಿ ಮತ್ತು ಸಾಹಿತ್ಯ ಕಾರ್ಯಕ್ರಮ ಮಾಡಲಾಯಿತು. ಕನ್ನಡ ಮಾತೆ ಭವನೇಶ್ವರಿ ದೇವಿಗೆ ಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಎಲ್ಲಾ ಅತಿಥಿಗಳಿಗೆ ಭಾರತದ ಸOವಿಧಾನದ ನೀಡಿ ಸನ್ಮಾನ ಮಾಡಲಾಯಿತು. ಉದ್ಘಾಟನೆ ಮಾಡಿದ ಶಾಲೆಯ ಮುಖ್ಯ ಗುರುಗಳಾದ ಅನುಪಕುಮಾರ ವರ್ಮ
ಮಾತನಾಡಿ ಕನ್ನಡ ನಾಡು ನುಡಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಕನ್ನಡನಾಡು ನುಡಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಕನ್ನಡ ನಾಡು ಶ್ರೀಮಂತ ನಾಡು ಕಲೆ ಸಾಹಿತ್ಯ ಸಂಸ್ಕೃತಿಯ ತವರು ನೆಲೆ ಕರ್ನಾಟಕ ಎಂದು ಹೇಳಿದರು.
ಮುಖ್ಯ ಅತಿಥಿ ಗಳಾದ ಗೌಸುದ್ದಿನ ದಾನೇಶ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮಾತನಾಡಿ ಕನ್ನಡ ನಾಡು ಎಲ್ಲಾ ಜನರಿಗೆ ಆಶ್ರಯನು ನೀಡಿದ ನಾಡು ರಾಜ ರಾಜರ ಕಾಲದಲ್ಲಿ ಸಾಹಿತ್ಯ ಮತ್ತು ಕೃತಿಗಳು ರಚಿಸಿದ್ದಾರೆ
ಎಂತಹ ಶ್ರೇಷ್ಠ ನಾಡು ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಪೇಂದ್ರ. ಎಸ್.ಹೊಸಮನಿ ಮಾತನಾಡಿ ಗಡಿ ಗ್ರಾಮಗಳಲ್ಲಿ ಶಾಲೆಯಲ್ಲಿ ವಿಶೇಷವಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಜಾಗೃತಿ ಉಪನ್ಯಾಸಗಳು ಗಡಿ ಭಾಗಗಳಲ್ಲಿ ಸರಕಾರವು ಸಂಘ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮಾಡಬೇಕು ಅಲ್ಲದೆ ಗಡಿ ಭಾಗದಲ್ಲಿ ಗ್ರಾಮಗಳಲ್ಲಿ ಕನ್ನಡ ಕಲಿಕೆ ಕೇಂದ್ರಗಳನ್ನು ತೆರೆಯಬೇಕು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ 10ನೇ ತರಗತಿವರೆಗೂ ಮಕ್ಕಳಿಗೆ ಪ್ರಮಾಣ ಪತ್ರ ನೀಡಬೇಕು.
ಅವರಿಗೆ ಸರ್ಕಾರಿ ನೌಕರಿ ದೊರೆಯುವ ಸಮಯದಲ್ಲಿ ಆ ಪ್ರಮಾಣ ಪತ್ರಕ್ಕೆ ಮೀಸಲಾತಿಯನ್ನು ನೋಡಬೇಕು.
ಕರ್ನಾಟಕದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಈ ನಾಡಲ್ಲಿ ತನ್ನದೇ ಆದ ಸಾಹಿತ್ಯವನ್ನು ನೀಡಿ ಈ ನಾಡನ್ನು ಬೆಳೆಸಿದವರು.
ಗಡಿ ಭಾಗದಲ್ಲಿ ಕನ್ನಡವನ್ನು ಬೆಳೆಸಬೇಕು ಸಾಹಿತ್ಯವನ್ನು ರಚಿಸುವ ಶಕ್ತಿ ಗಡಿ ಭಾಗದ ಜನರಿಗೆ ನೀಡಲಿ . ಅಲ್ಲದೆ ಕನ್ನಡಪರ ಸಂಘಟನೆಗಳು ಸಂಘ ಸಂಸ್ಥೆಗಳು ಪ್ರಗತಿಪರ ಚಿಂತಕರು.
ಸಮಾಜಿಕ ಹೋರಾಟಗಾರರು.
ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಹೋರಾಟ ಮಾಡುತ್ತಾ ಬಂದಿದ್ದಾರೆ ನಾವು ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸಿ ಬೆಳೆಸುವ ಎಲ್ಲಾ ಜನರ ಮೇಲೆ ಜವಾಬ್ದಾರಿ ಇದೆ
ಹೇಳಿದರು ಶಾಲೆಯ ಸಂಯೋಜಕೀಯಾದ ಶ್ರೀಮತಿ ಅರುಣ ಸ್ವಾಮಿ ಶಿಕ್ಷಕಿಯಾದ ಕುಮಾರಿ ಮೀನಾಕ್ಷಿ ಶಂಕರ್ಶ್ರೀಮತಿ. ಪಾರ್ವತಿ ಶಿವಕಾಂತ ಅಲ್ಲದೆ ಮಕ್ಕಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…