ಗಡಿ ಕುಶ್ನೂರ್ ಗ್ರಾಮದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ

13 ಡಿಸೆಂಬರ್24 ಬೀದರ್:- ತೊಗರಿ ಬೆಳೆಯ ಕೃಷಿಯಲ್ಲಿ ಬರುವಂತಹ ತೊಂದರೆ, ಪರಿಣಾಮಗಳು, ಹವಾಮಾನ ಏರಿಳಿತದಿಂದಾಗುವ ತೊಂದರೆಗಳು ಜೊತೆಗೆ ಮಣ್ಣಿನ ಆರೋಗ್ಯ ಹಾಗೂ ಪೋಷಕಾಂಶಗಳ ನಿರ್ವಹಣೆ ಹಾಗೂ ಎಫ್ .ಪಿ .ಓ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುವಂತಹ “ಪಲ್ಸ್ ಮ್ಯಾಜಿಕ್” ಎಂಬ ಗೊಬ್ಬರವು ಹೆಸರು, ಸೋಯಾಬೀನ, ಉದ್ದು, ತೊಗರಿ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉಪಯೋಗಿಸಬಹುದಾಗಿದೆ ಎಂದು ಡಾ.ಆರ್.ಎಲ್.ಜಾಧವ್ ತಿಳಿಸಿದರು
ಅವರು ಗುರುವಾರ “ರಿವಾರ್ಡ್” ಯೋಜನೆಯ ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ರಸಗೊಬ್ಬರಗಳ ಯೋಜನೆಯಡಿಯಲ್ಲಿ ಗಡಿ ಕುಶ್ನುರ್ ಗ್ರಾಮದ ರೈತರಾದ ಉಮೇಶ್ ಪಾಟೀಲ್, ಶ್ರೀದೇವಿ ಅಪ್ಪರಾವ ಅವರ ತೊಗರಿ ಬೆಳೆ ಜಮೀನಿನಲ್ಲಿ ಹಮ್ಮಿಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಜನವಾಡ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರು, ಮುಖ್ಯಸ್ಥರಾದ ಡಾ. ಸುನಿಲ್ ಎನ್ .ಎಂ. ಅವರು ಮಾತನಾಡಿ, ತೊಗರಿಯಲ್ಲಿ ಬರುವಂತಹ ಮುಖ್ಯ ಕೀಟಗಳ ಬಗ್ಗೆ ರೈತರಿಗೆ ಮಾಹಿತಿ ತಿಳಿಸಿದರು ಮತ್ತು ಅವುಗಳ ಸಮಗ್ರ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿಸಿದರು ಮುಖ್ಯವಾಗಿ ತೊಗರಿಯಲ್ಲಿ ಗಮನಕ್ಕೆ ಬಾರದ “ಕಾಯಿ ನೊಣ” ಎಂಬ ಕೀಟದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದರು.


ಕ್ಷೇತ್ರೋತ್ಸವದಲ್ಲಿ, ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ,ರೈತರ ಜೊತೆ ಚರ್ಚೆ ಹಾಗೂ ತಜ್ಞರ ಜೊತೆ ರೈತರ ಸಂವಾದ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್, ತೊಗರಿ ಬೆಳೆ ತಜ್ಞರಾದ ಡಾ.ಆರ್.ಎಲ್.ಜಾಧವ್, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರವೀರ್ಣ ಜೋಳಗಿಕಾರ್, ಸಂತಪುರ ಕೃಷಿ ಅಧಿಕಾರಿ, ಚಂದ್ರಕಾAತ, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಅಶೋಕ್, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ವಿ.ಪಿ.ಸಿಂಗ್, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕಡ್ಲಿ ವಿರೇಶ್, ಮಾದಪ್ಪ, ಗ್ರಾಮ ಪಂಚಾಯತ ಸದಸ್ಯರು ಹಾಗೂ ಈ ಯೋಜನೆಯ ಫಲಾನುಭವಿ ರೈತರುಗಳು ಹಾಗೂ ಅವರ ಕುಟುಂಬಸ್ಥರು, ಲಾಧಾ ,ಗಡಿ ಕುಶ್ನುರ್ ಮತ್ತು , ಗ್ರಾಮದ ರೈತರು ಉಪಸ್ಥಿತರಿದ್ದರು.


ತಜ್ಞರೊಂದಿಗೆ ಸಂವಾದ ಕಾರ್ಯಕ್ರಮದ ನಂತರ ಪ್ರತ್ಯಕ್ಷಿಕೆ ತಾಕುಗಳಿಗೆ ಎಲ್ಲ ತಜ್ಞರು ಹಾಗೂ ರೈತರೊಂದಿಗೆಗೆ ಭೇಟಿ ನೀಡಲಾಯಿತು ಕಾರ್ಯಕ್ರಮವನ್ನು ವಿಠ್ಠಲ್ ನಿರೂಪಿಸಿದರು. ತೋಟಗಾರಿಕೆ ಮಹಾವಿದ್ಯಾಲಯ ಸಹಪ್ರಾಧ್ಯಪಕರಾದ ಡಾ. ಪ್ರಸನ್ನ ಯೋಜನೆಯ ಸವಿವರ ನೀಡುವ ಮೂಲಕ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.

prajaprabhat

Recent Posts

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…

4 hours ago

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

13 hours ago

ಮಕ್ಕಳ ಮಾಹಿತಿ ಗೌಪ್ಯವಾಗಿಡಲು ಸೂಚನೆ

ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…

18 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

18 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

23 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

1 day ago