ಬೀದರ.10.ಫೆಬ್ರುವರಿ.25: ಗಡಿ ಪ್ರಾಧಿಕಾರದ ಅನುದಾನದಿಂದ ಬೀದರ ಜಿಲ್ಲೆಗೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೆ ಪೂರ್ಣಗೊಳಿಸಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೂಚಿಸಿದರು.
ಅವರು 2010-11 ಸಾಲಿನ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದರು ಹಣ ಬಳಕೆ ಪ್ರಮಾಣ ಪತ್ರ ಬಂದಿರುವುದಿಲ್ಲ, ಇನ್ನು ಕೆಲವು ಕಡೆ ಇನ್ನು ಕಾಮಗಾರಿ ಪ್ರಾರಂಭಿಸಿರುವುದಿಲ್ಲ ಅನುದಾನ ನೀಡಿದರು ಸಹ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಕಾಮಗಾರಿ ಅವಶ್ಯಕತೆ ಇಲ್ಲದಿದ್ದರೆ ಅಗತ್ಯವಿರುವ ಕಡೆ ಈ ಅನುದಾನ ಬಳಸಿಕೊಳ್ಳಲಾಗುವುದು ಎಂದರು.
ರಾಜ್ಯದ 6 ಗಡಿಭಾಗಗಳು ಹೊರ ರಾಜ್ಯದ ಕನ್ನಡ ಪರ ಸಂಘ ಸಂಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಕಂಪೌಂಡ, ಶುದ್ದ ಕುಡಿಯುವ ನೀರಿನ ಘಟಕ, ಪಠ್ಯ ಪುಸ್ತಕಗಳು, ರಸ್ತೆಗಳು, ಸಾಂಸ್ಕøತಿಕ ಭವನ ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ. 2010-11ನೇ ಸಾಲಿನಿಂದ ಇದುವರೆಗೆ 24 ಕೋಟಿ 33 ಲಕ್ಷ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 15 ಕೋಟಿ 91 ಲಕ್ಷ ರೂ. ಹಣ ಬಳಕೆ ಪ್ರಮಾಣ ಪತ್ರ ಬಂದಿದೆ. ಉಳಿದ 8 ಕೋಟಿ 41 ಲಕ್ಷ ಬಾಕಿ ಉಳಿದ ಮೊತ್ತಕ್ಕೆ ಕೂಡಲೆ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೆ ವಿವಿಧ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡಿದರು ಅಂದಾಜು ಪಟ್ಟಿ ಬಂದಿರುವುದಿಲ್ಲ ಎಂದು ತಿಳಿಸಿದರು.
ಈ ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಮತ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಸಂಜೀವಕುಮಾರ ಅತಿವಾಳ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ, ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ, ಕೆಕೆಐಡಿಎಲ್, ಪಂಚಾಯತರಾಜ ಇಂಜಿನೀಯರಿಂಗ ವಿಭಾಗ ಮತ್ತು ನಿರ್ಮಿತಿ ಕೇಂದ್ರದ ಇಇಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…