ಗಡಿಭಾಗದಲ್ಲಿ ಎರಡೂ ದೇಶಗಳು ಯುದ್ಧ ವಿಮಾನಗಳು, ಕ್ಷಿಪಣಿ ಪ್ರಯೋಗ ಮತ್ತು ಸೈನಿಕರ ನಿಯೋಜನೆ.

* ಇಸ್ರೇಲ್ ಬಳಿಕ ಭಾರತಕ್ಕೆ ಬಂದಿಳಿದ ಅಮೆರಿಕಾದ ಯುದ್ಧ ವಿಮಾನ.

* ಪಾಕಿಸ್ತಾನಿ ಪ್ರಜೆಗಳು ಭಾರತ ತೊರೆಯುವಂತೆ ಕೇಂದ್ರ ಆದೇಶ… ವೀಸಾ ಸೇವೆಗಳು ರದ್ದು.

* ಪಹಲ್ಗಾಮ್‌ ಉಗ್ರರರ ದಾಳಿ: ಪಾಕ್‌ ಮೇಲೆ ಕ್ರಿಕೆಟ್‌ ಸ್ಟ್ರೈಕ್‌.

ನವದೆಹಲಿ.25.ಏಪ್ರಿಲ್.25:- ಪಹಲ್ಗಾಮ್ ನಲ್ಲಿ 22ಏಪ್ರಿಲ್ ಮಂಗಳವಾರ ದಿನ್ ಅಮಾಯಕರ ಪ್ರಾಣವನ್ನು ಉಗ್ರರು ತೆಗೆದ ಬೆನ್ನಲ್ಲೇ ಭಾರತ ಆಕ್ರೋಶಗೊಂಡಿದ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕಾ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.

ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಹೊಡೆತ ನೀಡಿದೆ. ವೀಸಾ ರದ್ದು, ಸಿಂಧೂ ನದಿ ಒಪ್ಪಂದ ಮುರಿದುಕೊಂಡಿದೆ. ಅತ್ತ ಪಾಕಿಸ್ತಾನವೂ ಶಿಮ್ಲಾ ಒಪ್ಪಂದವನ್ನು ಮುರಿದುಕೊಂಡಿದೆ.

ಇದೀಗ ಗಡಿಭಾಗದಲ್ಲಿ ಎರಡೂ ದೇಶಗಳು ಯುದ್ಧ ವಿಮಾನಗಳು, ಕ್ಷಿಪಣಿ ಪ್ರಯೋಗ ಮತ್ತು ಸೈನಿಕರ ನಿಯೋಜನೆ ಮಾಡುತ್ತಿದೆ. ನಿನ್ನೆ ರಾತ್ರಿಯಿಂದ ಪಾಕಿಸ್ತಾನ ಪಡೆಗಳು ತಾವಾಗಿಯೇ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ.

ಇದರ ನಡುವೆ ಸೂರತ್ ನ ವಾಯುನೆಲೆಯಲ್ಲಿ ಇಸ್ರೇಲ್ ನ ಅತ್ಯಾಧುನಿಕ ಯುದ್ಧ ವಿಮಾನ ಬಂದು ನಿಂತಿತ್ತು. ಇದರ ಬೆನ್ನಲ್ಲೇ ಈಗ ಅಮೆರಿಕಾ ಯುದ್ಧವಿಮಾನವೂ ಸೂರತ್ ಗೆ ಬಂದಿಳಿದಿದೆ. ನಿನ್ನೆಯೇ ಅರಬ್ಬೀ ಸಮುದ್ರ ಗಡಿಯಲ್ಲಿ ಭಾರತ ತನ್ನ ನೌಕಾ ಸೇನೆಯ ಐಎನ್‌ಎಸ್ ಯುದ್ಧನೌಕೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು.

ಈ ಬೆಳವಣಿಗೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಭಾರತ ಏಕಾಂಗಿಯಾಗಿ ಅಲ್ಲ, ತನ್ನ ಮಿತ್ರರಾಷ್ಟ್ರಗಳ ಸಹಾಯದೊಂದಿಗೇ ಪಾಕಿಸ್ತಾನಕ್ಕೆ ಪೆಟ್ಟು ನೀಡಲು ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.

ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯನ್ನು ಇಷ್ಟು ದಿನ ಲೈವ್ ಸ್ಟ್ರೀಮಿಂಗ್ ನಡೆಸುತ್ತಿದ್ದ ದೊಡ್ಡ ಫ್ಲಾಟ್ ಫಾರ್ಮ್‌ಗಳು ತಮ್ಮ ಕರ್ತವ್ಯದಿಂದ ಹಿಂದೆ ಸರಿದಿದ್ದು ಇದರ ನೇರ ಪರಿಣಾಮ, ಪಿಎಸ್‌ಎಲ್‌ ಮೇಲೆ ಬೀಳಲಿದೆ. ಫ್ಯಾನ್‌ಕೋಡ್‌ನಲ್ಲಿ ಪಿಎಸ್‌ಎಲ್‌ ಲೈವ್ ಸ್ಟ್ರೀಮಿಂಗ್ ನಡೆಯುತ್ತಿತ್ತು. ಈಗ ಫ್ಯಾನ್‌ಕೋಡ್ ಪಿಎಸ್‌ಎಲ್‌ನ ನೇರ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ.

ಜಮ್ಮು ಕಾಶ್ಮೀರ್‌ದಲ್ಲಿ ನಡೆದ ದಾಳಿಯನ್ನು ಖಂಡೀಸಿರುವ ಭಾರತೀಯ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ಪಾಠ ಕಲಿಸಿವೆ. ಭಾರತದಲ್ಲಿ ಐಪಿಎಲ್‌ನಂತೆ, ಪಾಕ್‌ನಲ್ಲಿ ಪಿಎಸ್‌ಎಲ್‌ ಪಂದ್ಯಗಳು ನಡೆದಿವೆ. ಈ ಟೂರ್ನಿಯ ನೇರ ಪ್ರಸಾರ ಫ್ಯಾನ್‌ ಕೋಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿತ್ತು. ಆದರೆ ಏಪ್ರಿಲ್‌ 24 ರಿಂದ ಇದರ ಪ್ರಸಾರಕ್ಕೆ ಬ್ರೇಕ್‌ ಬೀಳಲಿದೆ. ಇದೇ ಫ್ಲಾಟ್‌ ಫಾರ್ಮ್‌ನಲ್ಲಿ ಲಕ್ಷಾಂತರ ಅಭಿಮಾನಿಗಳು ಪಿಎಸ್‌ಎಲ್‌ ವೀಕ್ಷಿಸುತ್ತಿದ್ದರು. ಭಾರತ ಮೂಲದ ಫ್ಯಾನ್‌ ಕೋಡ್‌ ಕಂಪನಿಯ ನಿರ್ಧಾರದ ಬಳಿಕ ಪಾಕಿಸ್ತಾನ್ ಸೂಪರ್‌ ಲೀಗ್‌ನ ಡಿಜಿಟಲ್‌ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಲಿದೆ.

ಪಾಕ್‌ ಮೇಲೆ ಕ್ರಿಕೆಟ್‌ ಸ್ಟ್ರೈಕ್‌

ಪಾಕಿಸ್ತಾನದಲ್ಲಿ ಏಪ್ರಿಲ್‌ 11 ರಿಂದ ಪಿಎಸ್‌ಎಲ್‌ ಆರಂಭವಾಗಿದ್ದು, ಮೇ 18ರ ವರೆಗೆ ನಡೆಯಲಿದೆ. ಈ ಟೂರ್ನಿಯನ ಡಿಜಿಟಲ್ ಫ್ಲಾಟ್ ಫಾರ್ಮ್‌ ಹಕ್ಕು ಭಾರತೀಯ ಮೂಲದ ಫ್ಯಾನ್‌ ಕೋಡ್‌ ಕಂಪನಿಗೆ ಸಿಕ್ಕಿತ್ತು. ಆದರೆ ಕಂಪನಿ ದಾಳಿಯ ಬಳಿಕ ನೇರ ಪ್ರಸಾರವನ್ನು ನಿಲ್ಲಿಸುವುದಾಗಿ ಘೋಷಿಸಿವೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಇನ್ನು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಫ್ಯಾನ್‌ಕೋಡ್‌ ತೆಗೆದುಕೊಂಡಿರುವ ನಿರ್ಧಾರ ಭಾರೀ ಪ್ರಶಂಸೆಗೆ ವ್ಯಕ್ತವಾಗಿದೆ.

ಪಿಎಸ್‌ಎಲ್‌ ಮೇಲೆ ನೇರ ಬ್ಯಾನ್‌ ಮಾಡಿದ ಕಂಪನಿ ಫ್ಯಾನ್‌ ಕೋಡ್ ಒಂದೇ ಅಲ್ಲವೇ ಅಲ್ಲ. ಭಾರತೀಯ ಮೂಲದ ಡ್ರೀಮ್‌ ಇಲೆವೆನ್‌ ಸಹ ಇಂತಹದ್ದೇ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಂಸ್ಥೆ ಪಿಎಸ್‌ಎಲ್ ಪಂದ್ಯಗಳನ್ನು ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಿಂದ ತೆಗೆದುಹಾಕಿದೆ. ಫ್ಯಾನ್‌ಕೋಡ್ ಲೈವ್ ಸ್ಟ್ರೀಮಿಂಗ್ ನಿಲ್ಲಿಸಿದ್ದರಿಂದ ಪಿಎಸ್‌ಎಲ್‌ ಆದಾಯದ ಮೇಲೆ ಪೆಟ್ಟು ಬೀಳಲಿದೆ.

prajaprabhat

Recent Posts

ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ. ಸಿಎಂ,ಡಿಸಿಎಂ, ಹಾಗೂ ಉನ್ನತ ಶಿಕ್ಷಣ ಸಚಿವರು ವರದಿ ಸ್ವೀಕರಿಸಿದ್ದಾರೆ.

ಬೆಂಗಳೂರು.11.ಆಗಸ್ಟ್.25:- ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕೆ ವರದಿಯ (ಎಸ್‌ಇಪಿ) ಶಿಫಾರಸುಗಳ ಪರಿಶೀಲನೆಗೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ…

2 hours ago

ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ…

4 hours ago

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ಸಂದರ್ಶನ

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 16 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ…

5 hours ago

ನಾಳೆಯಿಂದ ಮುಂಗಾರು ಅಧಿವೇಶನ ಆರಂಭ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆ ಸಜ್ಜು

ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…

11 hours ago

KSRTC ಬಸ್, ಕಾರು ಡಿಕ್ಕಿ 2 ಮೃತೀವ್

ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾ‌ರ್ ನಲ್ಲಿದ್ದ ತಂದೆ ಮಗ…

12 hours ago

ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್‌.ಎನ್‌.ಅಶೋಕ್

ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…

14 hours ago