ಕ. ದ. ಸಂ. ಸ ಭೀಮವಾದ ಜಿಲ್ಲಾ ಮಟ್ಟದ ಬುದ್ಧ ಬಸವ ಅಂಬೇಡ್ಕರ್ ಜಯಂತಿಯ ಸಭೆ.!

ಯಾದಗಿರಿ.11.ಏಪ್ರಿಲ್.25:- ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಕ. ದ. ಸಂ. ಸ ಭೀಮವಾದ ಸಂಘಟನೆ ವತಿಯಿಂದ ಬುದ್ಧ ಬಸವ ಅಂಬೇಡ್ಕರ್ ಜಯಂತ್ಯೋತ್ಸದ ಪ್ರಯುಕ್ತ ಸಭೆಯ ಉದ್ದೇಶಿಸಿ ರಾಜ್ಯ ಸಂಘಟನಾ ಸಂಚಾಲಕರು ಮತ್ತು ಯಾದಗಿರಿ ಉಸ್ತುವಾರಿ ಶ್ಯಾಮ ಕಾಳೆ ಅವರು ಬುದ್ಧ ಬಸವ ಅಂಬೇಡ್ಕರ್ ಅವರು ಬೆಳಕು ಮತ್ತು ಜ್ಞಾನದ ಸಂಕೇತ, ಪ್ರತಿಯೊಬ್ಬರು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು, ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಅಂಬೇಡ್ಕರ್ ಅವರ ಹೃದಯವೈಶಾಲ್ಯತೆ ನಮಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ  ಶರಣು ಎಸ್ ನಾಟೇಕರ್ ಅವರ ನೇತೃತ್ವದಲ್ಲಿ ಹಲವಾರು ನೂತನ ಕಾರ್ಯಕರ್ತರು ಭೀಮವಾದ ಸಂಘಟನೆಗೆ ಸೇರಿದರು.
ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಸಂಘಟನೆ ಎಲ್ಲಾ ಪದಾಧಿಕಾರಿಗಳಿಗೆ ಸಂಘಟನೆ ಬಲಪಡಿಸಲು ಕೈ ಜೋಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ದು ಪೂಜಾರಿ ಬೆಳಗಾಂ, ಶಿವಶರಣಪ್ಪ  ವಾಡಿ, ಮಂಜುಳಾ ಸುರಪುರ, ದಲಿತ ಹಿರಿಯ ಮುಖಂಡರು ಮಲ್ಲಪ್ಪ ಈಟೆ, ಭೀಮರಾಯ ಕಾಗಿ,ಅಂಜು ಯಾದಗಿರಿ,ಖಂಡಪ್ಪ ಸಾಹುಕಾರ್,ಶರಣು ಹಾಲಳ್ಳಿ. ಶರಣು ಮಮ್ಮದರ್. ಗಿರೀಶ್ ಚಟ್ಟೇರಕರ್, ಮಲ್ಲು ನಾಟೇಕರ್, ಸೌಭಾಗ್ಯ, ಗಂಗಮ್ಮ ಸುಂಗಲಕರ್, ಸಾಬಣ್ಣ ಬೇಗರ್, ಭೀಮರಾಯ ಸಿಂದಿಗೇರಿ, ಮಹಾದೇವಪ್ಪ ಗುರುಸುಣಿಗಿ ಬಸವರಾಜ್ ಯಮ್ಮನೂರ್. ಇನ್ನಿತರರು ಭಾಗವಹಿಸಿದರು.

prajaprabhat

Recent Posts

ಕೆನಡಾದಲ್ಲಿ ಗುಂಡಿನ ಚಕಮಕಿ : 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವು.!

ಕೆನಡಾದಲ್ಲಿ.19.ಏಪ್ರಿಲ್.25:- ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.. ಹ್ಯಾಮಿಲ್ಟನ್…

1 minute ago

ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…

17 minutes ago

2030 ರ ವೇಳೆಗೆ ಭಾರತದ ರಕ್ಷಣಾ ರಫ್ತು 50,000 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…

3 hours ago

ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೆ ಗುಡುಗಿದ ಮಣಿಕಂಠ ರಾಠೋಡ್

ಕಲಬುರಗಿ .19.ಏಪ್ರಿಲ್.25:- ಕಲಬುರಗಿಯಲ್ಲಿ ಬಿಜೆಪಿ/ ಕಾಂಗ್ರೆಸ್ ಜಟಾಪಟಿ ಮುಂದು ವರೆದಿದ್ದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತೊಮ್ಮೆ ಪ್ರಿಯಾಂಕ್ ಖರ್ಗೆ…

5 hours ago

ಜೆಇಇ ಮುಖ್ಯ ಸೆಷನ್ II ಫಲಿತಾಂಶ ಪ್ರಕಟ

ಹೊಸ ದೆಹಲಿ.19.ಏಪ್ರಿಲ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಬೆಳಿಗ್ಗೆ 2025 ರ ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ…

5 hours ago

  World Liver Day  ವಿಶ್ವ ಯಕೃತ್ತು ದಿನ

ಹೊಸ ದೆಹಲಿ.19.ಏಪ್ರಿಲ್.25:- ಇಂದು ಆರೋಗ್ಯ ಯಕೃತ್ತಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ಎಣ್ಣೆಯುಕ್ತ ಮತ್ತು ಜಿಡ್ಡಿನ ಆಹಾರವನ್ನು…

5 hours ago