ಕೇರಳದ ಕಾಸರಗೋಡಿಗೇ ಈ ಜಿಲ್ಲೆಗಳಲ್ಲಿ ಅತೀ ಹೆಚ್ಚು  ಪಾಕ್ ಪ್ರಜೆಗಳು!

ಭಾರತದ ಕೆರಳ ರಾಜ್ಯದಲ್ಲಿ ಅತೀ ಹೆಚ್ಚು ಪಾಕಿಸ್ತಾನಿ ಪ್ರಜೆಗಳಿರುವ ಕಾಸರಗೋಡು ಜಿಲ್ಲೆ ಆಗಿದೆ. ದ್ವಿತೀಯ ಸ್ಥಾನ ಕಲ್ಲಿಕೋಟೆ ಜಿಲ್ಲೆಗಿದ್ದು, ವಯನಾಡು ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ರಾಜ್ಯದ ಪೊಲೀಸ್ ಇಲಾಖೆಯ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.

ಕೇರಳದಲ್ಲಿ ಒಟ್ಟು 106 ಮಂದಿ ಪಾಕ್ ಪ್ರಜೆಗಳಿದ್ದು, ಇದರಲ್ಲಿ 30 ಮಂದಿ ಈಗಾಗಲೇ ರಾಜ್ಯದಿಂದ ಪಾಕಿಸ್ತಾನಕ್ಕೆ ಮರಳಿದ್ದಾರೆ. ಉಳಿದವರು ಶೀಘ್ರದಲ್ಲೇ ಕೇರಳ ಬಿಡಬೇಕೆಂದು ಕೇಂದ್ರ ಗೃಹ ಇಲಾಖೆಯ ಸ್ಪಷ್ಟ ಸೂಚನೆಯಂತೆ ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಯು ಅಗತ್ಯದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಕೇರಳದಲ್ಲಿ ನೆಲೆಸಿರುವ ಪಾಕ್ ಪೌರರಿಗೆ ಈಗಾಗಲೇ ನೋಟೀಸ್‌ಗಳನ್ನು ನೀಡಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ 20 ಮಂದಿ ಪಾಕ್ ಪ್ರಜೆಗಳಿದ್ದರೆ, ಕಲ್ಲಿಕೋಟೆಯಲ್ಲಿ 16 ಹಾಗು ವಯನಾಡು ಜಿಲ್ಲೆಯಲ್ಲಿ 14 ಮಂದಿ ನೆಲೆಸಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ ಈಗ ನೆಲೆಸಿರುವ ಪಾಕಿಸ್ತಾನಿಗಳ ಪೈಕಿ 45 ಮಂದಿ ಕೇರಳದಲ್ಲೇ ವಿವಾಹವಾಗಿ ವಾಸಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಅವರೆಲ್ಲರೂ ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇನ್ನು55 ಮಂದಿ ಸಂದರ್ಶನ ವೀಸಾದಲ್ಲಿ ಕೇರಳಕ್ಕೆ ಆಗಮಿಸಿದವರು. ಇದರ ಹೊರತಾಗಿ ಮೆಡಿಕಲ್ ವೀಸಾದಲ್ಲಿ ಮೂರು ಮಂದಿ ಆಗಮಿಸಿದ್ದಾರೆ.

ಈ ನಡುವೆ ಸಂದರ್ಶನ ವೀಸಾದಲ್ಲಿ ಮತ್ತು ಮೆಡಿಕಲ್ ವೀಸಾದಲ್ಲಿ ಕೇರಳಕ್ಕೆ ಆಗಮಿಸಿದವರು ಏಪ್ರಿಲ್ 29 ರೊಳಗಾಗಿ ಭಾರತ ಬಿಟ್ಟು ತೆರಳಬೇಕೆಂದು ಆದೇಶಿಸಲಾಗಿದೆ.

ಇನ್ನೊಂದೆಡೆ ಮೆಡಿಕಲ್ ವೀಸಾದಲ್ಲಿ ಆಗಮಿಸಿ ಕೇರಳದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕ್ ಪ್ರಜೆಗಳು ತಮ್ಮ ಚಿಕಿತ್ಸೆ ಮುಗಿಯುವ ತನಕ ಇಲ್ಲೇ ಉಳಿಯಬೇಕಾಗಿದ್ದಲ್ಲಿ ಅದಕ್ಕೆ ಕೇಂದ್ರ ಗೃಹ ಖಾತೆಯ ಅನುಮತಿ ಕಡ್ಡಾಯವಾಗಿದೆ.

ವೀಸಾ ಇಲ್ಲದೆ ಅಕ್ರಮವಾಗಿ ಕೇರಳಕ್ಕೆ ಆಗಮಿಸಿದ ಓರ್ವ ಪಾಕಿಸ್ತಾನಿ ಪೌರನನ್ನು ಪೊಲೀಸರು ಈಗಾಗಲೇ ಬಂಽಸಿ ಸಮಗ್ರ ತನಿಖೆಗೊಳಪಡಿಸಿದ್ದಾರೆ.

ಆತ ಈಗ ತೃಶ್ಶೂರು ಜೈಲಿನಲ್ಲಿದ್ದಾನೆ. ವೀಸಾ ಸಮಯ ವ್ಯಾಪ್ತಿ ಮುಗಿದರೂ ಭಾರತ ಬಿಡದ ಪಾಕ್ ಪ್ರಜೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೂ ಮಾಹಿತಿ ಕಳುಹಿಸಲಾಗಿದೆ.

prajaprabhat

Recent Posts

ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…

39 minutes ago

ಡಾ.ಬಿ.ಆರ್.ಅಂಬೇಡ್ಕರ್ & ವಿವಿಧ ಅಭಿವೃದ್ಧಿ ನಿಗಮಗಳಿಂದ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…

1 hour ago

ಆಧಾರ್ ಸೀಡಿಂಗ್ ಮಾಡಿಸುವಂತೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸೂಚನೆ.

ರಾಯಚೂರು.11.ಆಗಸ್ಟ್.25: ಇಲ್ಲಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್…

2 hours ago

ಪರೀಕ್ಷೆಯ ಫಲಿತಾಂಶ ಕಡಿಮೆ ಬಂದಿದ್ರೆ ‘ಶಾಲೆ’ಗಳ ವಿರುದ್ಧ ಕ್ರಮ ರಾಜ್ಯ ಸರ್ಕಾರ ಆದೇಶ

ಬೆಂಗಳೂರು.11.ಆಗಸ್ಟ್.25:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ್ ಶಾಲೆಗಳ SSLC ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಾಜ್ಯ…

3 hours ago

ಯೂರಿಯಾ, ಡಿಎಪಿ ರಸಗೊಬ್ಬರ ಲಭ್ಯ: ಪ್ರಕಾಶ್ ಚೌಹಾಣ್

ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…

3 hours ago

ಅಗ್ನಿವೀರ್ ಸೇನಾ ಭರ್ತಿ: ನಾಲ್ಕನೇ ದಿನ 764 ಅಭ್ಯರ್ಥಿಗಳು ಭಾಗಿ

ರಾಯಚೂರು.11.ಆಗಸ್ಟ್.25:- ಅಗ್ನಿವೀರ್ ಸೇನಾ ಭರ್ತಿಗೆ ಆಗಸ್ಟ್ 11 ರಂದು ಒಟ್ಟು 764 ಅಭ್ಯರ್ಥಿಗಳು ವರದಿ ಮಾಡಿಕೊಂಡರು. ಆಗಸ್ಟ್ 11 ರಂದು…

3 hours ago