ಚಾಮರಾಜನಗರ.06.ಏಪ್ರಿಲ್.25:-ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಅದಿಜಾಂಬರವರ ಬಡಾವಣೆಯಲ್ಲಿ ಶನಿವಾರ ಕುರುಬನ ಕಟ್ಟೆ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಎರಡು ವರುಷಕ್ಕೊಮ್ಮೆ ಅದಿಜಾಂಬವರ ಬಡಾವಣೆಯಲ್ಲಿ ಕುರುಬನ ಕಟ್ಟೆಯ ಚೆನ್ನಯ್ಯ, ಲಿಂಗಯ್ಯರವರ ಕಂಡಾಯವನ್ನು ತರಿಸಿ ಹಬ್ಬವನ್ನು ಆಚರಿಸಲಾಗುತ್ತದೆ.
ಶನಿವಾರ ರಾತ್ರಿ ಗ್ರಾಮದ ಈಶ್ವರ ದೇವಾಲಯದಲ್ಲಿ ಕಂಡಾಯಗಳನ್ನು ಶುಚ್ಚಿಗೊಳಿಸಿ ಹೊಂಬಾಳೆ, ವಿವಿಧ ಬಗೆಯ ಹೂಗಳಿಂದ ಶೃಂಗಾರಗೊಳಿಸಿ ಧೂಪ ದೀಪಗಳಿಂದ ಪೂಜೆ ಸಲ್ಲಿಸಿದರು.
ನಂತರ ಮಾರಿಗುಡಿ, ಮಂಟೇಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯ ರಸ್ತೆಯ ಮೂಲಕ ಅದಿಜಾಂಬರವರ ಬಡಾವಣೆವರೆಗೆ ಮಂಟೇಸ್ವಾಮಿ ಕಂಡಾಯಗಳನ್ನು ಮಂಗಳವಾದ್ಯ ಮತ್ತು ತಮಟೆ ಸದ್ದಿನೊಂದಿಗೆ ಮೆರವಣಿಗೆ ಮಾಡಲಾಯಿತು.
ರಸ್ತೆ ಉದ್ದಕ್ಕೂ ಹೆಂಗಳಿಯರು ನೀರು ಹಾಕಿ ರಂಗೋಲಿಗಳನ್ನು ಬಿಡಿಸಿದರು. ಹೂ ಹಣ್ಣು ಕಾಯಿ ಪೂಜೆಗಳನ್ನು ಮಾಡಿ ದೇವರನ್ನು ಸ್ಮರಿಸಿದರು.
ಗ್ರಾಮವು ಸಂಪೂರ್ಣ ವಿವಿಧ ಬಗೆ ವಿದ್ಯುತ್ ದೀಪಗಳಿಂದ ಹಾಗೂ ಬಾಳೆ ಮಾವಿನ ತೋರಣಗಳಿಂದ ಸಿಂಗಾರಗೊಂಡಿತು.
ಮರಪ್ಪ ಮಾತನಾಡಿ ಮಂಟೇಸ್ವಾಮಿ ಸಿದ್ದಪ್ಪಾಜ್ಜಿ ರಾಚಪ್ಪಾಜ್ಜಿ, ಚೆನ್ನಾಜಮ್ಮ, ದೊಡ್ಡಮ್ಮತಾಯಿ ರವರ ಪರಂಪರೆಯು 16 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಹೋರಾಡಿದರು. ಇಂದಿಗೂ ಕೂಡ ನೀಲಗಾರರು ಈ ಸಿದ್ದಾಂತವನ್ನು ಜನಪದ ಮೂಲಕ ಜನಿರಿಗೆ ತಿಳಿಸಿದ್ದಾರೆ.
ಮಂಟೇಸ್ವಾಮಿ ಮತ್ತು ಮಹದೇಶ್ವರ ಮಹಾ ಕಾವ್ಯವು ಉತ್ತಮವಾದದ್ದು ಎಂದರು
ಈ ಸಂದರ್ಭದಲ್ಲಿ ಅದಿಜಾಂಬವರ ಸಮುದಾಯ ಯಜಮಾನರಾದ ಮರಪ್ಪ, ಚಾಮರಾಜು, ಮಹೇಶ್,ಚಾಮರಾಜ್, ನಿಂಗರಾಜು,ಸೋಮರಾಜ್, ನಿಂಗಣ್ಣ, ಗವಿನಿಂಗಯ್ಯ, ನೀಲಗಾರರು ಹಾಗೂ ಎಲ್ಲಾ ಜನಾಂಗದ ಯಜಮಾನರು ಮುಖಂಡರು ಹಾಜರಿದ್ದರು
ವರದಿಗಾರ: ಜಿ ಪ್ರಸನ್ನ ಕುಮಾರ್ ಕಿತ್ತೂರು
ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…
ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾರ್ ನಲ್ಲಿದ್ದ ತಂದೆ ಮಗ…
ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…
ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…
ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…
ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…