ಕೆಪಿಎಂಇ ಕಾಯ್ದೆ ಉಲ್ಲಂಘನೆ: ರಾಯಚೂರ ಜಿಲ್ಲೆಯ ಅನಧೀಕೃತ 19 ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ದಂಡ

ದೇವದುರ್ಗ ತಾಲೂಕಿನ 9, ಲಿಂಗಸೂರ ತಾಲೂಕಿನ 4, ಸಿರವಾರ
ತಾಲೂಕಿನ 3, ರಾಯಚೂರ ತಾಲೂಕಿನ 2, ಮಾನ್ವಿಯ 1 ಖಾಸಗಿ ಕ್ಲಿನಿಕ್‌ಗೆ ದಂಡ

ರಾಯಚೂರು.25.ಜುಲೈ 25: ರಾಯಚೂರ ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಿದ್ದು, ನಿಗದಿತ ಅವಧಿಯೊಳಗೆ ದಂಡ ಭರಿಸದೇ ಇದ್ದ ಪಕ್ಷದಲ್ಲಿ ನಿಯಮಾನುಸಾರ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರಬಾಬು ಅವರು ಎಚ್ಚರಿಕೆ ನೀಡಿದ್ದಾರೆ.

ದೇವದುರ್ಗ ತಾಲೂಕಿನ ನಿಷಾ ಕ್ಲಿನಿಕ್ 50 ಸಾವಿರ ರೂ ದಂಡ. ನ್ಯೂ ಇರ್ಫಾನ್ ಕ್ಲಿನಿಕ್‌ಗೆ 25 ಸಾವಿರ ರೂ. ದಂಡ, ಶ್ರೀ ಬಸವಾ ಇಮೇಜಿಂಗ್ ಸೆಂಟರ್‌ಗೆ 25 ಸಾವಿರ ರೂ ದಂಡ, ಶ್ರೀಬಸವ ಲ್ಯಾಬ್ ಎಕ್ಸರೆ & ಇಸಿಜಿ ಸೆಂಟರ್‌ಗೆ 25 ಸಾವಿರ ರೂ. ದಂಡ, ದೇಸಾಯಿ ಕ್ಲಿನಿಕ್‌ಗೆ 15 ಸಾವಿರ ರೂ ದಂಡ, ಶ್ರೀದೇವಿ ಕ್ಲಿನಿಕ್‌ಗೆ 15 ಸಾವಿರ ರೂ. ದಂಡ, ಎಸ್.ಬಿ.ಆಸ್ಪತ್ರೆಗೆ 15 ಸಾವಿರ ರೂ ದಂಡ, ಬಾಬಾ ಡೈಗ್ನೋಷ್ಟಿಕೆ ಸೆಂಟರ್‌ಗೆ 50 ಸಾವಿರ ರೂ ದಂಡ, ಶ್ರೀಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ.


ಅದೇ ರೀತಿ ಸಿರವಾರ ತಾಲೂಕಿನ ಅಮೃತ ಕ್ಲಿನಿಕ್‌ಗೆ 15 ಸಾವಿರ ರೂ ದಂಡ, ವಿಜಯ ಚಂದ್ರಶೇಖರ ಕ್ಲಿನಿಕ್‌ಗೆ 15 ಸಾವಿರ ರೂ ದಂಡ, ಶ್ರೀವೆಂಕಟೇಶ್ವರ ಕ್ಲಿನಿಕ್‌ಗೆ 40 ಸಾವಿರ ರೂ ದಂಡ ವಿದಿಸಲಾಗಿದೆ.

ಲಿಂಗಸುಗೂರು ತಾಲೂಕಿನ ಘನಶ್ರೀ ಲ್ಯಾಬ್‌ಗೆ 50 ಸಾವಿರ ರೂ ದಂಡ, ಅನ್ನಪೂರ್ಣ ಲ್ಯಾಬ್‌ಗೆ 50 ಸಾವಿರ ರೂ ದಂಡ, ಮೆಡಿಕೇರ್ ಲ್ಯಾಬ್‌ಗೆ 15 ಸಾವಿರ ರೂ ದಂಡ, ವಿಜಯ ಕ್ಲಿನಿಕ್‌ಗೆ 15 ಸಾವಿರ ರೂ ದಂಡ ವಿಧಿಸಲಾಗಿದೆ. ಅದೇ ರೀತಿ ರಾಯಚೂರು ತಾಲೂಕಿನ ಪೀಸ್ ಹೆಲ್ತ್ ಕೇರ್‌ಗೆ 25 ಸಾವಿರ ರೂ ದಂಡ, ಶ್ರೀಸೂಗೂರೇಶ್ವರ ಕ್ಲಿನಿಕ್‌ಗೆ 50 ಸಾವಿರ ರೂ ದಂಡ ಹಾಗೂ ಮಾನವಿ ತಾಲೂಕಿನ ಪವನ್ ಕ್ಲಿನಿಕ್‌ಗೆ 15 ಸಾವಿರ ರೂ ದಂಡ ವಿದಿಸಲಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜುಲೈ 10ರಂದು ನಡೆದ ಜಿಲ್ಲಾಮಟ್ಟದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ ರಾಯಚೂರ ಜಿಲ್ಲೆಯಲ್ಲಿನ ಕೆಲವು ಖಾಸಗಿ ಕ್ಲಿನಿಕ್‌ಗಳು ಸಂಸ್ಥೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿದ ಬಗ್ಗೆ ಚರ್ಚೆಯಾಗಿದ್ದು, ಈ ಸಭೆಯಲ್ಲಿ ಈ ಮೇಲಿನಂತೆ ಖಾಸಗಿ ಕ್ಲಿನಿಕ್‌ಗಳಿಗೆ ದಂಡ ವಿಧಿಸಲು ನಿರ್ಣಯಿಸಲಾಗಿದೆ. ಈ ಎಲ್ಲ ಕ್ಲಿನಿಕ್‌ಗಳು ಸಂಸ್ಥೆಗಳು ನಿಗದಿತ ಸಮಯದಲ್ಲಿ ದಂಡವನ್ನು ಪಾವತಿಸಬೇಕು. ವಿಳಂಬವಾದಲ್ಲಿ ಸೂಕ್ತ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

1 hour ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

6 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

12 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

12 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

12 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

12 hours ago