ಕೆಜಿಎಫ್‌ನಲ್ಲಿ ಆರ್‌ಪಿಐದಿಂದ ಒಳ ಮೀಸಲಾತಿ ಜಾತಿ ಗಣತಿ ಜಾಗ್ರತಿ.!

ಕೆಜಿಎಫ್‌: ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು ಪರಿಶಿಷ್ಟ ಜಾತಿಗೆ ಸೇರಿದ ಹೊಲೆಯರನ್ನು ಮಾದಿಗ ಜಾತಿಯಲ್ಲಿ ಸೇರಿಸಿ ಹೊಲೆಯ ಜನಾಂಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಪಬ್ಲಿಕನ್‌ ಪಕ್ಷವು ನಗರದಲ್ಲಿ ಮರುಸಮೀಕ್ಷೆ ನಡೆಸಲಿದೆ ಎಂದು ರಿಪಬ್ಲಿಕನ್‌ ಪಕ್ಷದ ಮುಖಂಡ ಎಸ್‌.ರಾಜೇಂದ್ರನ್‌ ಹೇಳಿದರು.

ಅಂಬೇಡ್ಕರ್‌ ಜಯಂತಿ ಅಂಗವಾಗಿ ಸೋಮವಾರ ರಾಬರ್ಟಸನ್‌ಪೇಟೆಯಲ್ಲಿ ಆರ್‌ಪಿಐ ಕಾರ್ಯಕರ್ತರ ಬೃಹತ್‌ ಮೆರವಣಿಗೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಜಿಎಫ್‌ ನಗರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪರಿಯನ್‌ ಅಥವಾ ಪರಿಯಾ ಗುಂಪಿಗೆ ಸೇರಿದ ಜನಸಂಖ್ಯೆ ಅಧಿಕವಾಗಿದೆ. ಆಂಧ್ರ ಮೂಲದ ಮಾದಿಗರ ಜನಸಂಖ್ಯೆ ಅತ್ಯಂತ ಕಡಿಮೆ ಇದೆ. ಮೈನಿಂಗ್‌ ಕಾಲೋನಿಗಳಲ್ಲಿ ಅವರದ್ದು ಕೆಲವೇ ಮನೆಗಳಿವೆ. ಆದರೆ ನಗರದಲ್ಲಿ ಪರಿಯಾ ಗುಂಪಿಗೆ ಸೇರಿದ ಜನ ಕಡಿಮೆ ಇದೆ, ಮಾದಿಗರ ಸಂಖ್ಯೆ ಜಾಸ್ತಿಯಾಗಿದೆ ಎಂಬ ತಪ್ಪು ಅಂಕಿ ಅಂಶಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಆರೋಪಿಸಿದರು.

ಪರಿಯಾ ಜನಾಂಗದವರನ್ನು ಕರ್ನಾಟಕದಲ್ಲಿ ಹೊಲೆಯ ಎಂದು ಕರೆಯಲಾಗುತ್ತದೆ. ಆಂ‍ಧ್ರದಲ್ಲಿ ಮಾಲಾ, ಕೇರಳದಲ್ಲಿ ಪುಲೆಯಾ, ಮಹಾರಾಷ್ಟ್ರದಲ್ಲಿ ಮಹರ್‌ ಎಂದು ಕರೆಯಲಾಗುತ್ತದೆ. ನಗರದ ಜನತೆಗೆ ಪರಿಶಿಷ್ಟ ಜಾತಿಯಲ್ಲಿಯೇ ಪಂಗಡ ಮತ್ತು ಉಪ ಪಂಗಡಗಳು ಇರುವುದು ಗೊತ್ತಿಲ್ಲ. ಸಾಮಾನ್ಯವಾಗಿ ತಮ್ಮನ್ನು ಪರಿಶಿಷ್ಟ ಜಾತಿ ಎಂದು ಕರೆದುಕೊಳ್ಳಲಾಗುತ್ತದೆ. ನಗರದಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ ಶೇ 52 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಜಾತಿ ಜನಗಣತಿಯಲ್ಲಿ ಅವರನ್ನು ಹಿಂದಕ್ಕೆ ಇರಿಸಿ, ಅಲ್ಪಸಂಖ್ಯಾತರಾಗಿರುವ ಮಾದಿಗ ಜನಾಂಗದವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಸಂಬಂಧವಾಗಿ ತಾವು ಮುಖ್ಯಮಂತ್ರಿಗೆ ದೂರು ನೀಡುವುದಾಗಿ ರಾಜೇಂದ್ರನ್‌ ತಿಳಿಸಿದರು.

ನಿಖರವಾದ ಜಾತಿ ಅಂಕಿ-ಸಂಖ್ಯೆಯನ್ನು ಕಂಡುಹಿಡಿಯಲು ಆರ್‌ಪಿಐ ಪಕ್ಷವೇ ಜನಗಣತಿ ನಡೆಸಲಿದೆ. ಪ್ರತಿ ಮನೆಗೂ ಜಾತಿ ಗಣತಿ ಫಾರಂ ನೀಡಲಾಗುತ್ತದೆ. ಒಟ್ಟು ಜನಸಂಖ್ಯೆಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಜಾತಿ ಹೆಸರಲ್ಲಿ ರಾಜಕಾರಣ ಮಾಡುವುದನ್ನು ಮಾದಿಗ ಜನಾಂಗಕ್ಕೆ ಸೇರಿದ ಪ್ರಮುಖ ರಾಜಕಾರಣಿಗಳು ಕೈಬಿಡಬೇಕು. ಸೂಕ್ತ ಪ್ರಾತಿನಿಧ್ಯ ಸಿಗದ ಜಾತಿಗೆ ನ್ಯಾಯ ಕೊಡಿಸಬೇಕು. ಸುಳ್ಳು ಅಂಕಿ ಅಂಶಗಳನ್ನು ಸೇರಿಸುವ ಕೆಲಸ ಒಳ್ಳೆಯದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

prajaprabhat

Recent Posts

ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ. ಸಿಎಂ,ಡಿಸಿಎಂ, ಹಾಗೂ ಉನ್ನತ ಶಿಕ್ಷಣ ಸಚಿವರು ವರದಿ ಸ್ವೀಕರಿಸಿದ್ದಾರೆ.

ಬೆಂಗಳೂರು.11.ಆಗಸ್ಟ್.25:- ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕೆ ವರದಿಯ (ಎಸ್‌ಇಪಿ) ಶಿಫಾರಸುಗಳ ಪರಿಶೀಲನೆಗೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ…

5 hours ago

ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ…

8 hours ago

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ಸಂದರ್ಶನ

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 16 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ…

8 hours ago

ನಾಳೆಯಿಂದ ಮುಂಗಾರು ಅಧಿವೇಶನ ಆರಂಭ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆ ಸಜ್ಜು

ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…

15 hours ago

KSRTC ಬಸ್, ಕಾರು ಡಿಕ್ಕಿ 2 ಮೃತೀವ್

ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾ‌ರ್ ನಲ್ಲಿದ್ದ ತಂದೆ ಮಗ…

15 hours ago

ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್‌.ಎನ್‌.ಅಶೋಕ್

ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…

17 hours ago