ರಾಯಚೂರು.01.ಆಗಸ್ಟ್.25:- ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕೋಶದಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದಡಿ ನಿವೃತ್ತ ಸರಕಾರಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಸಹಕಾರಿಯಾಗಲು ಆಡಳಿತ ಹಿತದೃಷ್ಟಿಯಿಂದ ಜಿಲ್ಲೆಗೆ ಒಂದರoತೆ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಚೇರಿ ಒಳಗೊಂಡoತೆ ಜಿಲ್ಲೆಯಲ್ಲಿ ಒಂದು ಕೋಶವನ್ನು ಸ್ಥಾಪಿಸಿ ನಿವೃತ್ತ ಸರಕಾರಿ ಅಧಿಕಾರಿಗಳ ಸೇವೆಯನ್ನು ಪಡೆದುಕೊಳ್ಳಲು ಮಂಡಳಿಯಿoದ ಅನುಮತಿ ನೀಡಿಲಾಗಿದ್ದು, ತಾಂತ್ರಿಕ ಸಲಹೆಗಾರರ 1 ಹುದ್ದೆಗೆ ನಿವೃತ್ತ ಅಧೀಕ್ಷಕ ಅಭಿಯಂತರರು ಅಥವಾ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ 40 ಸಾವಿರ ರೂ.ಗಳನ್ನು ಗೌರವಧನವನ್ನು ನೀಡಲಾಗುವುದು. ತಾಂತ್ರಿಕ ಅಧಿಕಾರಿ 1 ಹುದ್ದೆಗೆ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಅಥವಾ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅರ್ಜಿ ಸಲ್ಲಿಸಬಹುದಾಗಿದೆ.
ಮಾಸಿಕ 30 ಸಾವಿರ ರೂ.ಗಳನ್ನು ಗೌರವಧನ ನೀಡಲಾಗುವುದು.
ಅರ್ಹತೆ ಹಾಗೂ ಷರತ್ತುಗಳು: ನಿವೃತ್ತ ಅಧಿಕಾರಿಯ ವಯಸ್ಸು 65 ವರ್ಷ ಮೀರಿರಬಾರದು. ನಿವೃತ್ತ ಅಧಿಕಾರಿಗಳು ಸಿವಿಲ್ ಎಂಜಿನೀಯರ ಆಗಿರತಕ್ಕದ್ದು. ನಿವೃತ್ತ ಅಧಿಕಾರಿಗಳನ್ನು ಆಯ್ಕೆ ಸಮಿತಿಯಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ನಿವೃತ್ತ ಅಧಿಕಾರಿಯವರು ತಮ್ಮ ಪಿಂಚಣಿ ಪತ್ರದ ಪ್ರತಿಯನ್ನು ಕಡ್ಡಾಯ ಸಲ್ಲಿಸತಕ್ಕದ್ದು. ನಿವೃತ್ತ ಅಧಿಕಾರಿಗಳ ಮೇಲೆ ಯಾವುದೇ ಇಲಾಖಾ ವಿಚಾರಣೆ ಇರಕೂಡದು. ನಿವೃತ್ತ ಅಧಿಕಾರಿಯವರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಮಾತ್ರ ಪಡೆದುಕೊಳ್ಳಲಾಗುವುದು.
ನಿವೃತ್ತ ಅಧಿಕಾರಿಯವರು ನೀಡುವ ಸೇವೆಯ ಆಧಾರದ ಮೇಲೆ ಅವರ ಸೇವೆಯನ್ನು ಮುಂದುವರೆಸುವ ಹಾಗೂ ರದ್ದುಪಡಿಸುವ ಅಧಿಕಾರವು ಕಾರ್ಯದರ್ಶಿಗಳು ಕಕಪ್ರಅ ಮಂಡಳಿ ಕಲಬುರಗಿ ಮತ್ತು ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ಇರುತ್ತದೆ. ಕೋಶಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ವಾಹನದ ಸೌಕರ್ಯ ಒದಗಿಸಲು ಅವಕಾಶ ಇರುವುದಿಲ್ಲ. ಸಲಹೆಗಾರರು/ಅಧಿಕಾರಿಗಳು, ಜಿಲ್ಲಾಧಿಕಾರಿಯವರ ಕಚೇರಿ/ ಜಿಲ್ಲಾ ಪಂಚಾಯತ ಅನುಷ್ಠಾನಗೊಳಿಸುತ್ತಿರುವ ಕ.ಕ.ಪ್ರ.ಅ ಮಂಡಳಿಯ ಕಾಮಗಾರಿಗಳ ಅಂದಾಜು ಪತ್ರಿಕೆಗಳನ್ನು ಪರಿಶೀಲನೆ ಮಾಡುವುದು, ಬಿಲ್ಲುಗಳನ್ನು ಪರಿಶೀಲಿಸುವುದು, ದೂರುಗಳಿಗೆ ಕ್ರಮವಹಿಸುವುದು ಮತ್ತು ಆರ್ಥಿಕ ಮತ್ತು ಭೌತಿಕ ಗುರಿ ಸಾಧಿಸುವುದು ಮತ್ತು ಅನುಷ್ಠಾನ ಇಲಾಖೆಗೊಳಂದಿಗೆ ಸಮನ್ವಯ ಸಾಧಿಸುವುದು.
ತಾಂತ್ರಿಕ ಸಲಹೆಗಾರರು ಅಥವಾ ಅಧಿಕಾರಿಗಳು ಜಿಲ್ಲಾಧಿಕಾರಿಯವರ ಕಚೇರಿ ಅಥವಾ ಜಿಲ್ಲಾ ಪಂಚಾಯತ ವತಿಯಿಂದ ತೆಗೆದುಕೊಳ್ಳುವ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವುದು ಮತ್ತು ಮಂಡಳಿ ಕಾಮಗಾರಿಗಳ ಕುರಿತು ಪ್ರಗತಿ ವರದಿಯನ್ನು ಸಲ್ಲಿಸುವುದು. ಆಯ್ಕೆಯಾದ ಅಧಿಕಾರಿಗಳಿಗೆ ಗೌರವಧನವನ್ನು ಕಕಪ್ರಅ ಮಂಡಳಿಯ ಆಡಳಿತ ವೆಚ್ಚದಡಿಯಲ್ಲಿ ಭರಿಸಲಾಗುವುದು. ಅರ್ಜಿ ಸಲ್ಲಿಸುವ ಅಧಿಕಾರಿಗಳು ಜಿಲ್ಲೆಯ ಕೇಂದ್ರ ಸ್ಥಳದಲ್ಲಿ ವಾಸಿಸುವುದು ಕಡ್ಡಾಯವಾಗಿರುತ್ತದೆ. ಕೋಶದಲ್ಲಿ ಇನ್ನಿತರೆ ಕೆಲಸಗಳನ್ನು ನಿರ್ವಹಿಸುವುದು.
ಆಸಕ್ತಿಯುಳ್ಳ ನಿವೃತ್ತ ಸರಕಾರಿ ಅಧಿಕಾರಿಗಳು, ಅರ್ಜಿ ಹಾಗೂ ಅವಶ್ಯಕ ದಾಖಲಾತಿಗಳೊಂದಿಗೆ ಈ ಕಾರ್ಯಲಯದಲ್ಲಿ ಪಡೆದು ಆಗಸ್ಟ್ 08ರ ಸಂಜೆ ಸ.30ಗಂಟೆಯೊಳಗಾಗಿ ಈ ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…
ಬೀದರ.02.ಆಗಸ್ಟ್.25:- ಬೀದರ್ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…
ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…
ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…
ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…
ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…