ಕಾಲೇಜು ಶಿಕ್ಷಣ ಇಲಾಖೆ: ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಆಚರಿಸಿ.ಮಹತ್ವದ ಆದೇಶ.!

ಬೆಂಗಳೂರು.14.ಫೆ.25:- ಕರ್ಣಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಆಚರಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ.

ಇಂದಿನ ಪಾಶ್ಚಾತ್ಯ ಶೈಲಿಯ ಆಧುನಿಕ ಜೀವನದಲ್ಲಿ ದೇಸೀ ಸಂಸ್ಕೃತಿಯು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ.

2 page

ಜನಪದ ಸಾಹಿತ್ಯ ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ, ಜನಾಂಗೀಯ ಪಾಕಪದ್ಧತಿ (ದೇಸೀ ಆಹಾರ), ದೇಸೀ ಉಡುಗೆ-ತೊಡುಗೆ, ದೇಸೀ ನೃತ್ಯ-ಸಂಗೀತ, ಆಟ, ಈ ಎಲ್ಲವನ್ನು ಒಳಗೊಂಡಿರುವುದೇ ಜಾನಪದವೆಂದು ಹೇಳಬಹುದು.

ಈ ದೇಸೀ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಬಂದಿರುವ ಆಯಾ ಪ್ರಾದೇಶಿಕ/ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿ / ಸೊಗಡುಗಳ ಬಗ್ಗೆ.

ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಹಾಗೂ ತನ್ನ ಸುತ್ತಲಿನ ಪರಿಸರ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು, ಸೃಜನಶೀಲತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಲಾಖಾ ವತಿಯಿಂದ ” ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ”- ಶೀರ್ಷಿಕೆಯಡಿಯಲ್ಲಿ “ಜಾನಪದ ಉತ್ಸವ-2025″ ನ್ನು ಆಚರಿಸಲು ಉದ್ದೇಶಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅಡಗಿರುವ ಆಯಾ ಪ್ರಾದೇಶಿಕ ಸಾಂಪ್ರದಾಯಿಕ ಕಲೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಸ್ಪರ್ಧೆ/ಆಚರಣೆಗಳು ಇತ್ಯಾದಿಗಳನ್ನು ಮುಂಬರುವ ಫೆಬ್ರವರಿ/ ಮಾರ್ಚ್ ತಿಂಗಳುಗಳಲ್ಲಿ ಆಯೋಜಿಸಿ, ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸೂಚಿಸಲಾಗಿದೆ.

ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಕೆಳಗೆ ನೀಡಿರುವ ಕಾರ್ಯಕ್ರಮಗಳಲ್ಲಿ ತಮಗೆ ಸೂಕ್ತವಾದ ಕಾರ್ಯಕ್ರಮ/ಕಾರ್ಯಕ್ರಮಗಳನ್ನು “ಜಾನಪದ ಉತ್ಸವ-2025” ದಡಿಯಲ್ಲಿ ಹಮ್ಮಿಕೊಳ್ಳಬಹುದಾಗಿರುತ್ತದೆ.

👉 ಜನಪ್ರದ. ಸಾಹಿತ್ಯ ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಇವುಗಳ ಕುರಿತ ಕಾರ್ಯಗಾರಗಳು.


👉ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ/ವಸ್ತು ಪ್ರದರ್ಶನ.


👉 ಜನಾಂಗೀಯ ಪಾಕಪದ್ಧತಿ (ದೇಸೀ ಆಹಾರ) – ಇವುಗಳ ಪ್ರದರ್ಶನ ಹಾಗೂ ಸ್ಪರ್ಧೆ.


👉ಸ್ಥಳೀಯ ಕಲಾವಿದರುಗಳಿಂದ ದೇಸೀ ಉಡುಗೆ-ತೊಡುಗೆಗಳು – ಇವುಗಳ ಪ್ರದರ್ಶನ ಹಾಗೂ ಸ್ಪರ್ಧೆ.


👉 ಸ್ಥಳೀಯ ಕಲಾವಿದರುಗಳಿಂದ ದೇಸೀ ನೃತ್ಯ-ಸಂಗೀತ, ಆಟ – ಇವುಗಳ ಪ್ರದರ್ಶನ.

                                             

👉ಮೇಲೆ ತಿಳಿಸಿರುವ ವಿಷಯಗಳಲ್ಲಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ವಿಶೇಷವಾದ ಸೃಜನಾತ್ಮಕ/ಕಲಾತ್ಮಕ ಕೌಶಲ್ಯತೆಗಳೇನಾದರೂ ಇದ್ದಲ್ಲಿ ಅಂತಹ ಕೌಶಲ್ಯತೆಗಳನ್ನು ಗುರುತಿಸಿ, ಅವುಗಳನ್ನು ಪ್ರದರ್ಶಿಸಲು ತಮ್ಮ ಹಂತದಲ್ಲೇ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ.

ಈ ಮೇಲ್ಕಂಡ “ಜಾನಪದ ಉತ್ಸವ-2025” ನ್ನು ಫೆಬ್ರವರಿ ಹಾಗೂ ಮಾರ್ಚ್- 2025 ರ ತಿಂಗಳಿನಲ್ಲಿ ತಮ್ಮ ತಮ್ಮ ಕಾಲೇಜಿನ ಹಂತದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಕ್ರಮಕೈಗೊಳ್ಳುವುದು ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಸಚಿತ್ರ ಸಮೇತ ವರದಿಗಳನ್ನು ಕೇಂದ್ರ ಕಛೇರಿಯ

ಇ-ಮೇಲ್ ವಿಳಾಸ: dceacademics@gmail.com.        ಕ್ಕೆ ಏಪ್ರಿಲ್-5 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಹರ್ಷ ಬಿ. ನೋಡಲ್ ಅಧಿಕಾರಿಗಳು, ಶೈಕ್ಷಣಿಕ ವಿಭಾಗ ಇವರ ದೂರವಾಣಿ ಸಂಖ್ಯೆ.

9741252035 ಕ್ಕೆ ಸಂಪರ್ಕಿಸುವುದು ಎಂದು ತಿಳಿಸಿದೆ.

prajaprabhat

Recent Posts

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

5 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

8 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

8 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

8 hours ago

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

15 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

15 hours ago