ಬೆಂಗಳೂರು.19.ಜೂನ್.25:- ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜೂನ್ 21, 2025 ರಂದು ‘ಅಂತರರಾಷ್ಟ್ರೀಯ ಯೋಗ ದಿವಸ’ವನ್ನು ಆಚರಿಸುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಿಶ್ವಸಂಸ್ಥೆಯು ಜೂನ್ 21 ನ್ನು ‘ಅಂತರರಾಷ್ಟ್ರೀಯ ಯೋಗ ದಿನ’ ವನ್ನಾಗಿ ಘೋಷಿಸಿದೆ. ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಐಕ್ಯತೆಯನ್ನು ಸಾಕಾರಗೊಳಿಸಿದೆ. ಯೋಗವು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಉತ್ತಮ ಜೀವನ ನಿರ್ವಹಣೆಯ ಒಂದು ವಿಜ್ಞಾನವಾಗಿದೆ.
ಇದು ಒಬ್ಬ ಮನುಷ್ಯನ ಶಾರೀರಿಕರವಾದ, ಚೇತನಾತ್ಮಕವಾದ ಭೌದ್ಧಿಕವಾದ. ಭಾವನಾತ್ಮಕವಾದ, ಮಾನಸಿಕ ಮತ್ತು ಆಧ್ಯಾತ್ಮಿಕವಾದ ಎಲ್ಲಾ ಸ್ತರಗಳಲ್ಲಿಯೂ ಕೆಲಸ ಮಾಡುತ್ತದ. ಇದು ಇಂದಿನ ಮತ್ತು ಭವಿಷ್ಯದ ಅಗತ್ಯವೂ ಆಗಿದೆ.
ಯೋಗಾಭ್ಯಾಸ ಮಾಡುವುದರಿಂದ ಭಾವನಾತ್ಮಕ, ಮಾನಸಿಕ ಮತ್ತು ಶಾರೀರಿಕ ಹಂತಗಳ ಆಂತರಿಕ ಸಂಬಂಧಗಳ ಬಗ್ಗೆ ಮತ್ತು ಇವುಗಳಲ್ಲಿ ಯಾವುದಾದರೊಂದು ಅವ್ಯವಸ್ಥಿತವಾದರೆ, ಇನ್ನಿತರ ಹಂತಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ತಿಳುವಳಿಕೆಯು ಮೂಡುತ್ತದೆ.
ಭಾರತ ಸರ್ಕಾರದ ಆಯುಷ್ ಸಚಿವಾಲಯವು ಜೂನ್ 21, 2025 ರಂದು ಬೆಳಿಗ್ಗೆ 7:00 ರಿಂದ 7:45 ‘ ‘-2025 “Yoga for One Earth, One Health” ರಡಿಯಲ್ಲಿ ಪ್ರಮುಖ ಕಾರ್ಯಕ್ರಮವಾದ ‘ಯೋಗ ಸಂಗಮ’ವನ್ನು ಆಯೋಜಿಸುತ್ತಿದ್ದು, ಈ ಸಾಮೂಹಿಕ ಯೋಗ ಪ್ರದರ್ಶನವು ಸಾಮಾನ್ಯ ಯೋಗ ಪ್ರೋಟೋಕಾಲ್ (CYP) ಅನ್ನು ಆಧರಿಸಿದೆ ಮತ್ತು ಭಾರತದ 1,00,000+ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಸದರಿ ಯೋಗ ಸಂಗಮ ಕಾರ್ಯಕ್ರಮಕ್ಕೆ ಯೋಗ https://yoga.ayush.gov.in/yoga-sangam ಸೂಚಿಸಿದೆ.
ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜೂನ್ 21, 2025 ರಂದು ‘ಅಂತರರಾಷ್ಟ್ರೀಯ ಯೋಗ ದಿವಸ’ವನ್ನು ಆಚರಿಸಿ. ಈ ಮೂಲಕ ವಿದ್ಯಾರ್ಥಿಗಳಲ್ಲಿ ‘ಯೋಗ’ ಮತ್ತು ಇದರ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…
ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…
ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…
2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…
ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…
ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…