ಬೀದರ.22. ಜೂನ್.25:- ಕಾರಂಜ ಮಹಿಳಾ ರೈತ ಉತ್ಪಾದಕರ ಕಂಪನಿ 10000 ಎಫ್‌ಪಿಓ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಕಂಪನಿ ಇನ್ನು ಯಶಸ್ವಿಯಾಗಲಿ ಎಂದು ಹಾರೈಸಿದರು ಹಾಗೂ ಏನೇ ಸಹಾಯ ಸರ್ಕಾರ ವತಿಯಿಂದ ಅಥವಾ ತಮ್ಮ ಕಡೆಯಿಂದ ಮಾಡಲಾಗುವುದೆಂದು ಹುಮನಾಬಾದ ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್ ಹೇಳಿದರು.
ಅವರು ಶನಿವಾರದಂದು ಹುಮನಾಬಾದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯತ ಬೀದರ, ತಾಲ್ಲೂಕಾ ಪಂಚಾಯತ ಹುಮನಾಬಾ ಸಹಯೋಗದಲ್ಲಿ ಹುಮನಾಬಾದಲ್ಲಿ ಹಮ್ಮಿಕೊಂಡಿದ್ದ ಕಾರಂಜಾ ಮಹೀಳಾ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಮಾತನಾಡಿದರು.
ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯು ಮಹಿಳೆಯರ ಸ್ವಸಹಾಯ ಸಂಘಗಳ ಮುಖಾಂತರ ಗ್ರಾಮೀಣ ಬಡತನ ನಿರ್ವಹಣಾ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಪ್ರತಿಯೊಂದೂ ರಾಜ್ಯದಲ್ಲಿ ತನ್ನದೇಯಾದ ಹೆಸರಿನಲ್ಲಿ ಈ ಯೋಜನೇಯನ್ನು ಅನುಷ್ಠಾನಗೊಳಿಸುತ್ತಿವೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ದಿನಾಂಕ : 11-2-2024 ರಂದು ನೊಂದಣಿಯಾಗಿದ್ದು, ಇದರಲ್ಲಿ ಒಂದು ಸಾವಿರ ಷೇರುದಾರರು ಇದ್ದು ಪ್ರತಿ ಸದಸ್ಯರಿಗೆ 1500 ರು ಸದಸ್ಯತ್ವ ಶುಲ್ಕವನ್ನು ಹೊಂದಿದೆ. ಕರ್ನಾಟಕದಲ್ಲಿ ಸಂಜೀವಿನಿ ಕೆ.ಎಸ.ಆರ್ . ಎಲ್.ಪಿ.ಎಸ್ ಹೆಸರಿನಿಂದ ಅನುಷ್ಠಾನಗೊಂಡಿದ್ದು, ಈ ಯೋಜನೆಯೂ ಕೇಂದ್ರದಿAದ 60%. ರಷ್ಟು ಹಾಗೂ ರಾಜ್ಯದಿಂದ 40% ರಷ್ಟು ಅನುದಾನದಿಂದ ಕಾರ್ಯಕ್ರಮವನ್ನು ಅನುಷ್ಠಾನಗೊಳ್ಳುತ್ತಿದೆ. ಮಹಿಳೆಯರು ಕೈಗೊಳ್ಳವ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವದು ಹಾಗೂ ಕಿರು ಉದ್ಯಮಗಳಿಗೆ ಆರ್ಥಿಕ ಹಾಗೂ ಸಾಮರ್ಥ್ಯ ಬಲವರ್ಧನ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಗ್ರಾಮ ಪಂಚಾಯತ್ ಒಕ್ಕೂಟದ (ಜಿಪಿಎಲ್‌ಎಫ್) ಮುಖಾಂತರ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆಂದರು.
ಈ ಸಂದರ್ಭದಲ್ಲಿ ಕಾರಂಜ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯವರಾದ ಮಧುಮತಿ, ಅನಿಲ್, ಬೀ.ಒ.ಡಿ.ಗಳು, ಜಗನ್ನಾಥ ಮೂರ್ತಿ (ಯೋಜನಾ ನಿರ್ದೇಶಕರು ಡಿ ಆರ್, ಡಿ,ಎ ಜಿಲ್ಲಾ ಪಂಚಾಯತ್ ಬೀದರ್), ದೀಪಿಕಾ ನಾಯ್ಕರ (ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಹುಮನಾಬಾದ್), ತಬಸಮ್ ತಹಶೀಲ್ದಾರ (ಹುಮನಾಬಾದ್ ತಾಲೂಕ), ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿಯವರು ಆಕಾಶ್ ಸ್ವಾಮಿ ಜಿಲ್ಲಾ ವ್ಯವಸ್ಥಾಪಕರು (ಕೃಷಿ), ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು ದಯಾನಂದ.ಎಸ್, ಎಂ.ಕೆ.ಪಿ.ಸಿ. ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳು, ಭುವನೇಶ್ವರಿ ಎಂ.ಕೆ.ಪಿ.ಸಿ. ಲೆಕ್ಕಪರಿಶೋಧಕರು ಪೂಜಾ ಬಿರಾದಾರ, ಎಂ.ಕೆ.ಪಿ.ಸಿ. ನಿರ್ದೇಶಕರು ಹಾಗೂ ಕಂಪನಿಯ ಸೇರುದಾರರು ಮತ್ತು ಗ್ರಾಮ ಪಂಚಾಯತ್ ಮಟ್ಟದ ಎನ್.ಆರ್.ಎಲ್.ಎಂ. ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…
ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…
ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ…
ರಾಯಚೂರು.13.ಆಗಸ್ಟ್.25: ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ರಾಯಚೂರ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ವಿವಿಧೆಡೆ ನಡೆದವು. ಜಿಲ್ಲಾಡಳಿತ,…
ರಾಯಚೂರು.13.ಆಗಸ್ಟ.25: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶವನ್ನು ಪರಿಚಯಿಸುವ ಉದ್ದೇಶದಿಂದ ಸ್ಟಡಿ ಅಬ್ರಾಡ್…
ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…