ಬೀದರ.20.ಜೂನ್.25:- ಬೀದರ ಜಿಲ್ಲೆಯಲ್ಲಿ ಜಿಲ್ಲಾ ಕಲಾ ಗ್ರಾಮವನ್ನು ಸ್ಥಾಪಿಸಲು ಬೀದರ ವಿಶ್ವವಿದ್ಯಾಲಯ ಅಥವಾ ಹಳ್ಳಿಕೇರಿ ಹತ್ತಿರ ಸ್ಥಳವನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕರಿಗಳಾದ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಲಾ ಗ್ರಾಮ ಸ್ಥಾಪಿಸಲು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸ್ಥಾಪಿಸಲು ಇಚ್ಛಿಸಿರುವ ಕಲಾ ಗ್ರಾಮದಲ್ಲಿ ಕಲಾ ಗ್ರಾಮವು ಸಂಸ್ಕøತಿಕ ಪ್ರವಾಸಿ ತಾಣ, ಜಾನಪದ ಕರ ಕುಶಲ, ಮಾರಾಟ ಮಳಿಗೆ, ಬಯಲು ರಂಗಮಂದಿರ, ಆರ್ಟ್ ಗ್ಯಾಲರಿ, ಅಡಟೋರಿಯಮ್, ವಚನಕಾರರ ಮೂರ್ತಿಗಳು, ವಚನ ಸಿಂಚನ, ವಚನ ಸಾಹಿತ್ಯ ಕುರಿತು ನಾಮಫಲಕ ಮತ್ತು ಸಾರಾಂಶ ಕೋಶ, ಶಿಲ್ಪಾವನ, ಡಿಜಿಟಲ್ ಗ್ರಂಥಾಲಯ, ಬೀದರ ಜಿಲ್ಲೆಯ ವಿಶಿಷ್ಟ ಸಂಗೀತ ವಾದ್ಯ ಪರಿಕರಗಳು, ಮೂರ್ತಿ ಪ್ರದರ್ಶನಗಳು, ಜಾನಪದ ಶೈಲಿಯ ವಸ್ತು ಪ್ರದರ್ಶನ, ಸಂಗೀತ ಕಾರಂಜಿ, ಪ್ರಾಚೀನ ಕಾಲದ ನಾಣ್ಯಗಳು, ಕೃಷಿ ಉಪಕರಣಗಳು, ನಾಟಿವೈದ್ಯ ಮುಂತಾದ ವೈಶಿಷ್ಟತೆಗಳನ್ನು ಒಳಗೊಂಡಿರುತ್ತವೆ. ಇದರ ಮುಖ್ಯ ಉದ್ದೇಶ ಜಿಲ್ಲೆಯಲ್ಲಿರುವ ಕಲೆ, ಸಾಹಿತ್ಯ, ನಾಟಕ, ರಂಗಭೂಮಿ ಮತ್ತು ಜಿಲ್ಲೆಯ ವೈಶಿಷ್ಟತೆಯನ್ನು ತಿಳಿಸುವುದಾಗಿದೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಕಲಾ ಗ್ರಾಮಗಳ ಸಮಿತಿಗೆ ಮೂರು ಜನ ಸಂಪನ್ಮೂಲ ವ್ಯಕ್ತಿಗಳ ನೇಮಕ ಮಾಡಿಕೊಳ್ಳಲಾಗುವುದು. ಆದ್ದರಿಂದ ಆಸಕ್ತರು ಸ್ವವಿವರವನ್ನು (Resume) ದಿನಾಂಕ: 23-06-2025 ರ ಸಂಜೆ 5.30 ಗಂಟೆಯೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೀದರಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ವಿಜಯಕುಮಾರ ಸೋನಾರೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜುಕುಮಾರ ಅತಿವಾಳೆ, ಜಗನ್ನಾಥ ಹೆಬ್ಬಾಳೆ, ಮಾರುತಿ ಬೌದ್ದೆ, ಪಾರ್ವತಿ ಸೋನಾರೆ, ಮಹೇಶ ಪಾಟೀಲ, ಭಾರತಿ ವಸ್ತ್ರದ, ಮಹೇಶ ಗೋರನಾಳಕರ, ಅಂಬ್ರೀಶ ಮಲ್ಲೇಶಿ ಸೇರಿದಂತೆ ಜಿಲ್ಲೆಯ ಕಲಾವಿದರು, ಸಾಹಿತಿಗಳು, ಸಂಘ-ಸಂಸ್ಥೆಯ ಮುಖಂಡರುಗಳು ಉಪಸ್ಥಿತರಿದ್ದರು.
ಬೆಂಗಳೂರು.07.ಆಗಸ್ಟ್.25:- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್…
ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ ಸಮಾಜಕ್ಕೆ ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ…
ಬೀದರ.07.ಆಗಸ್ಟ್.25:- ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಮತ್ತು…
ರಾಯಚೂರು.07.ಆಗಸ್ಟ್.25:- ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿಗಳ ಪ್ರವಾಸವು ಮಳೆಯಿಂದಾಗಿ ದಿಢೀರ್ ರದ್ದಾಗಿದ್ದರಿಂದ, ಬೆಂಗಳೂರಿನಲ್ಲಿ ಆಗಸ್ಟ್ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ…
ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್…
ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ…