Categories: ಬೀದರ

ಕಲಾವಿದರನ್ನು ಪ್ರೋತ್ಸಾಹಿಸುವ ಸಂಸ್ಥೆಗಳು ವಿರಳ, ‘ಬಿದರಿ’ ಕಾರ್ಯ ಶ್ಲಾಘನೀಯ

ಕಲಾವಿದರನ್ನು ಪ್ರೋತ್ಸಾಹಿಸುವ ಸಂಸ್ಥೆಗಳು ವಿರಳ, ‘ಬಿದರಿ’ ಕಾರ್ಯ ಶ್ಲಾಘನೀಯ



ಖ್ಯಾತ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರಿಗೆ ಬಿದರಿ ದತ್ತಿ ಪ್ರಶಸ್ತಿ

‘ಬಿದರಿ’ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಬಿದರಿ ಉತ್ಸವ 2024

ಪಂಜಾಬ್ನ ಜಸ್ಕರಣ್ ಸಿಂಗ್, ಬೀದರ್ ನ ರೇಖಾ ಸೌದಿ ತಂಡದ ಹಾಡಿಗೆ ಪ್ರೇಕ್ಷಕ ಫಿದಾ



ಬೀದರ್

ಕಲಾವಿದರನ್ನು ಪ್ರೋತ್ಸಾಹಿಸುವ, ಪೋಷಿಸುವಂಥ ಸಂಸ್ಥೆಗಳು ಅತ್ಯಂತ ವಿರಳವಾಗಿದ್ದು ಅಂಥದರಲ್ಲಿ ಇಲ್ಲಿನ ಬಿದರಿ ಸಾಂಸ್ಕೃತಿಕ ವೇದಿಕೆಯು ಹಿರಿಯ ಕಲಾವಿದರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿರುವದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹಿರಿಯ ಜನಪದ ಕಲಾವಿದ, ನಟ ಗುರುರಾಜ ಹೊಸಕೋಟೆ ಅಭಿಪ್ರಾಯ ವ್ಯಕ್ತಪಡಿಸಿದರು.



ಅವರು ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಿದರಿ ಉತ್ಸವ 2024ರ ನಿಮಿತ್ತದ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ಕಲಾವಿದ ಕಲಾವಿದರನ್ನು ಪೋಷಣೆ ಮಾಡುತ್ತಿರುವುದು ಬಹಳ ಕಮ್ಮಿ, ನೋಡಿಯೇ ಇಲ್ಲ. ವಿಶಾಲ ಹೃದಯ, ಶಕ್ತಿ, ಮನಸ್ಸು ಬೇಕು. ಈ ಎಲ್ಲವನ್ನೂ ಪಡೆದಿರುವ ರೇಖಾ ಅಪ್ಪಾರಾವ್‌ ಸೌದಿ ಇವತ್ತು ನನಗೆ ಪ್ರಶಸ್ತಿ ನೀಡಿರುವುದು ಬಹಳ ಸಂತಸ ಮೂಡಿಸಿದೆ.



ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮಿಗಳು ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿ, ಈ ಉತ್ಸವ ಅಭೂತಪೂರ್ವವಾಗಿದೆ. ಬಿದರಿ ಸಂಸ್ಥೆಯ ರೇಖಾ ಸೌದಿ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸ್ಥಳೀಯ ಕಲಾವಿದರನ್ನು ತಮ್ಮ ಜೊತೆ ಬೆರೆಸಿಕೊಂಡು ಬೆಳೆಸಿಕೊಂಡು ಹೋಗುತ್ತಿರುವದು ನಿಜಕ್ಕೂ ಉತ್ತಮ ಕಾರ್ಯ ಎಂದರು.



ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಆನಂದ ದೇವಪ್ಪ, ರೇಖಾ ಅಪ್ಪಾರಾವ್ ಸೌದಿ, ಫಿರೋಜ್ ಖಾನ್, ಮಾರುತಿ ಬೌದ್ಧೆ ಇದ್ದರು. ಶಿವಲಿಂಗ ಹೇಡೆ ಸ್ವಾಗತಿಸಿ, ಶಿವಶಂಕರ ಟೋಕರೆ ನಿರೂಪಿಸಿ ಬಿಎಂ ಅಮರವಾಡಿ ವಂದಿಸಿದರು.



ಪಂಜಾಬ್ನ ಜಸ್ಕರಣ್ ಸಿಂಗ್, ಬೀದರ್ ನ ರೇಖಾ ಸೌದಿ ತಂಡದ ಹಾಡಿಗೆ ಪ್ರೇಕ್ಷಕ ಫಿದಾ :

ಇತ್ತೀಚೆಗೆ ನಾಯಕ ನಟ ಗಣೇಶ ಅವರ ಕೃಷ್ಣಂ ಪ್ರಣಯ ಸಖಿ ಚಲನಚಿತ್ರದ ದ್ವಾಪರ ಹಾಡಿನ ಖ್ಯಾತಿಯ ಪಂಜಾಬ್ ಚಂಡೀಗಢ್ ಕಲಾವಿದ ಜಸ್ಕರಣ್ ಸಿಂಗ್ ಅವರ ದ್ವಾಪರಾ ಜೇನು ದನಿಯೋಳೆ ಹಾಡು ಕೇಳುತ್ತಿದ್ದಂತೆ ತುಂಬಿ ತುಳುಕುತ್ತಿದ್ದ ರಂಗಮಂದಿರದಲ್ಲಿ ಚಪ್ಪಾಳೆ, ಕೇಕೆಯ ಸುರಿಮಳೆಯೇ ಆಯಿತು. ತದನಂತರ ಜಗವೇ ನೀನು ಗೆಳತಿಯಾ. ಕೇಸರಿಯಾ ರಂಗು ಹಾಡುಗಳನ್ನು ಹಾಡಿದ್ದಲ್ಲದೆ ಗಾಯಕಿ ರೇಖಾ ಸೌದಿ ಜೊತೆಯಲ್ಲಿ ನೀ ನಾದೆನಾ, ಚುರಾ ಕೆ ದಿಲ್ ಮೇರಾ, ಕಜರಾ ಮೊಹಬ್ಬತ್ ವಾಲಾ, ಇದು ನನ್ನ ನಿನ್ನ ಪ್ರೇಮ ಗೀತೆ ಚೆನ್ನ ಬೋಲೋ ತರಾರರ ಹಾಡುಗಳನ್ನು ಪ್ರೇಕ್ಷಕರನ್ನು ಕುಣಿಸಿದವು. ರೇಖಾ ಸೌದಿ ಹಾಡಿದ ದಮ್ ಮಾರೋ ದಮ್, ಮೇಡ್ ಇನ್ ಇಂಡಿಯಾ, ಜಟಕಾ ಕುದರೆ, ಚುಡಿ ಜೋ ಘನಕಿ ಹಾಡುಗಳು ರಂಗಮಂದಿರವನ್ನು ಸಂಗೀತ ಲೋಕದಲ್ಲಿ ತೇಲಿಸಿದವು.



ಇನ್ನು ಗಾಯಕ ಅಮಿತ್ ಜನವಾಡಕರ್ ಹಾಡಿದ ಮಾರಿ ಕಣ್ಣು ಹೋರಿ ಮ್ಯಾಗೆ, ವಾದಾ ಕರ್ ಲೇ ಸಾಜನಾ, ಛಯ್ಯಾ ಛಯ್ಯಾ ಹಾಡುಗಳು, ರಾಜೇಶ ಕುಲಕರ್ಣಿ ಅವರ ಕ್ಯಾ ಹುವಾ ತೇರಾ ವಾದಾ, ಹೊಸ ಬೆಳಕು ಹಾಗೂ ಶ್ರೀನಾಥ ಕಮಲಾಪೂರಕರ್ ಪ್ರಸ್ತುತಪಡಿಸಿದ ಥೈ ಥೈ ಬಂಗಾರಿ, ಮೇರೆ ಸಂಪನೋಂಕಿ ರಾಣಿ ಹಾಡುಗಳು ಎಲ್ಲರ ಮನರಂಜಿಸಿದವು. ಸುಗಮ ಸಂಗೀತ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದ ಸಾಕ್ಷಿ, ಪ್ರತೀಕ್ಷೆ ಹಾಗೂ ಯುಕ್ತಿ ಅವರುಗಳೂ ಅತ್ಯುತ್ತಮಮವಾಗಿ ಹಾಡಿದರು.

 

ವಾದ್ಯ ವೃಂದದಲ್ಲಿ ಶಿವಾನಂದ ಭಜಂತ್ರಿ ಹಾಗೂ ತಂಡದವರಿದ್ದರು. ಭಕ್ತ ಕುಂಬಾರ ಹಾಗೂ ಮುಕ್ರಂ ಖಾನ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.



ಸ್ವಾಮಿ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಗಳು ಸಂಗೀತ ಸಂಭ್ರಮದ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ರಾಜಶೇಖರ ಪಾಟೀಲ್, ಸುಭಾಷ ಕಲ್ಲೂರ್, ರಾಜೇಂದ್ರಕುಮಾರ ಗಂದಗೆ, ಮಾರುತಿ ಬೌದ್ಧೆ, ಅನೀಲಕುಮಾರ ಬೆಲ್ದಾರ್ ಇದ್ದರು, ಡಾ. ಬಸವರಾಜ ಬಲ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿ ಬಿದರಿ ಸಂಸ್ಥೆಯ ಪರಿಚಯ ನೀಡಿದರು, ಶಿವಕುಮಾರ ಕಟ್ಟೆ ಸ್ವಾಗತಿಸಿ ಪೃಥ್ವಿರಾಜ್ ಎಸ್ ವಂದಿಸಿದರು. ಸುನೀಲಕುಮಾರ ಹಾಗೂ ನಾಗಶೆಟ್ಟಿ ಧರಂಪೂರ್ ಇದ್ದರು.




ಗಮನ ಸೆಳೆದ ಶಹನಾಯಿ ವಾದನ

ಬಿದರಿ ಉತ್ಸವ 2024ರ ಪ್ರಯುಕ್ತ ಆಯೋಜಿಸಲಾಗಿದ್ದ ಶಹನಾಯಿ ವಾದನ ಪ್ರೇಕ್ಷಕರ ಗಮನ ಸೆಳೆಯಿತು, ಯೇಶಪ್ಪ ಹಲಗೆ ಅವರು ನುಡಿಸಿದ ಶಹನಾಯಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಫರ್ನಾಂಡಿಸ್ ಹಿಪ್ಪಳಗಾಂವ್ ಅಧ್ಯಕ್ಷತೆ ವಹಿಸಿದ್ದರು. ಸಂಜೀವಕುಮಾರ ಅತಿವಾಳೆ, ಆನಂದ ದೇವಪ್ಪ, ಪವನ ಸೌದಿ, ದೇವಿದಾಸ ಜೋಶಿ, ಶಿವಕುಮಾರ ಕೋತ್ಮೀರ್, ರಾಜೇಶ ಕುಲಕರ್ಣಿ ಇದ್ದರು.

prajaprabhat

Share
Published by
prajaprabhat

Recent Posts

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

9 hours ago

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

12 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

12 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

12 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

12 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

12 hours ago