ಕಲಬುರಗಿ ! ನಕಲಿ M.A,M.Phil & Ph.D ತಯಾರಿಸುತ್ತಿದ್ದ ಜಾಲ ಪತ್ತೆ ಆರೋಪಿಯ ಪೊಲೀಸ ಕೃಗೆ.!

ಕಲಬುರಗಿ.27.ಫೆ.25:- ಇಂದು ನಕಲಿ ಪ್ರಮಾಣಪತ್ರ ಫೆಕ್ಟರಿ ಆಪರೇಟರ್ ಪೊಲೀಸರ  ಕೃಗೆ.ದೇಶಾದ್ಯ ವಿವಿಧ ರಾಜ್ಯಗಳ 28 ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ಹೆಸರಿನಲ್ಲಿ ನಕಲು ಅಂಕ ಪಟ್ಟಿ ತಯಾರಿಸಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕಲಬುರಗಿ ಸಿಇಎನ್ ಪೊಲೀಸರು, ದಿಲ್ಲಿ ಮೂಲದ ಅಂತರ್ ರಾಜ್ಯದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ದಿಲ್ಲಿ ಮೂಲದ ದ್ವಾರಕ ಮೋಡ್ ರಾಮಾ ಪಾರ್ಕ ಅಪಾರ್ಟಮೆಂಟ್ ನಿವಾಸಿ ರಾಜೀವ ಸಿಂಗ್ ಅರೋರಾ ಪ್ರೇಮಸಿಂಗ್ ಬಂಧಿತ ಆರೋಪಿ.

ಬೆಂಗಳೂರು, ವಿಶ್ವವಿದ್ಯಾಲಯ.

ಮೈಸೂರು, ವಿಶ್ವವಿದ್ಯಾಲಯ.

ಆಗ್ರಾ, ವಿಶ್ವವಿದ್ಯಾಲಯ.

ರಾಜಸ್ಥಾನ, ವಿಶ್ವವಿದ್ಯಾಲಯ.

ಉತ್ತರ ಪ್ರದೇಶ,ವಿಶ್ವವಿದ್ಯಾಲಯ.

ಹಿಮಾಚಲ ಪ್ರದೇಶ, ವಿಶ್ವವಿದ್ಯಾಲಯ.

ಕುರಕ್ಷೇತ್ರ, ವಿಶ್ವವಿದ್ಯಾಲಯ.

ಛತ್ತಿಸ್ ಘಡ, ವಿಶ್ವವಿದ್ಯಾಲಯ.

ಫಿರೋಝಾಬಾದ್, ವಿಶ್ವವಿದ್ಯಾಲಯ.

ಬಿಲಾಸಪುರ, ವಿಶ್ವವಿದ್ಯಾಲಯ.

ಭೂಪಾಲ್, ವಿಶ್ವವಿದ್ಯಾಲಯ.

ಕನಪೂರ, ವಿಶ್ವವಿದ್ಯಾಲಯ.

ಝಾನ್ಸಿ, ವಿಶ್ವವಿದ್ಯಾಲಯ.

ನೈನಿತಾಲ್,ವಿಶ್ವವಿದ್ಯಾಲಯ.

ತಮಿಳನಾಡು, ವಿಶ್ವವಿದ್ಯಾಲಯ.

ಉತ್ತರಾಖಂಡ, ವಿಶ್ವವಿದ್ಯಾಲಯ.

ಅರುಣಾಚಲ್ ಪ್ರದೇಶ ವಿಶ್ವವಿದ್ಯಾಲಯ.

ಮತ್ತು ಮಹಾರಾಷ್ಟ ವಿಶ್ವವಿದ್ಯಾಲಯಗಳ.ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾನಿಲಯಗಳು ಸೇರಿದಂತೆ ನಕಲಿ ವಿಶ್ವವಿದ್ಯಾನಿಲಯಗಳ ನಕಲಿ ಪ್ರಮಾಣಪತ್ರ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ತಯಾರಿಸಿ ಮಾರಾಟ ಮಾಡ್ತಿದು.

ಇನು ದೇಶದ ವಿವಿಧ SSLC ಮತ್ತು PUC CBSE Board ಹೆಸರಲ್ಲಿ ಪಿಯುಸಿ ಡಿಪ್ಲೊಮಾ ಇನ್‌ಎಜುಕೇಶನ್, ಡಿಪ್ಲೊಮಾ ಆಫ್ ಮೆಡಿಕಲ್ ಲ್ಯಾಬರೋಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಫಾರ್ಮಸಿ, ಡಿಪ್ಲೊಮಾ ಆಫ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೋಸ್ಟ್ ಗ್ರ್ಯಾಜುವೇಟ್ ಡಿಪ್ಲೊಮಾ ಇನ್ ಕಂಪ್ಯೂಟರ್, ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್, ಪಿ.ಎಚ್.ಡಿ ಎಂಟ್ರೇನ್ಸ್ ಟೆಸ್ಟ್, ಪಿ.ಎಚ್.ಡಿ ಸೆಲೆಕ್ಷನ್ ಸರ್ಟಿಫಿಕೇಟ್, ಆರ್.ಡಿ.ಸಿ, ಬ್ಯಾಚುಲರ್ ಆಫ್ ಎಜುಕೇಶನ್,ಬಿ.ಎಡ್ ಇತ್ಯಾದಿ 26 ಕೋರ್ಸಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯಿಂದ ನಕಲಿ ಅಂಕಪಟ್ಟಿ ತಯಾರಿಸಲು ಬಳಕೆ ಮಾಡುತ್ತಿದ್ದ 2 ಲ್ಯಾಪ್ ಟಾಪ್ ಗಳು, 1 ಪ್ರಿಂಟರ್, 36 ಮೊಬೈಲ್ ಫೋನ್ ಗಳು ಮತ್ತು 28 ವಿವಿಧ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿರುವ ಅಂದಾಜು ಒಟ್ಟು 522 ನಕಲಿ ಅಂಕಪಟ್ಟಿಗಳು ಹಾಗೂ 28 ವಿವಿಧ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿರುವ ಅಂದಾಜು ಒಟ್ಟು 122 ನಕಲಿ ಸೀಲ್ ಗಳು, ನಕಲಿ ಅಂಕಪಟ್ಟಿ ತಯಾರಿಸಲು ವಿವಿಧ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ಮುದ್ರಿಸಿಟ್ಟುಕೊಂಡ ಒಟ್ಟು 1,626 ಖಾಲಿ ಪೇಪರ್ ಗಳು, ವಿವಿಧ ಹೆಸರಿನಲ್ಲಿ ಆರೋಪಿತನು ಬಳಕೆ ಮಾಡುತ್ತಿದ್ದ ಸುಮಾರು 87 ಬ್ಯಾಂಕ್ ಖಾತೆಗಳ ಪಾಸ್ ಬುಕ್, ಚೆಕ್ ಬುಕ್, ಎಟಿಎಂ ಕಾರ್ಡಗಳು, ಬೇರೆ ಬೇರೆಯವರ ಹೆಸರಿನಲ್ಲಿ ತಯಾರಿಸಿಟ್ಟುಕೊಂಡ ನಕಲಿ ಐ.ಡಿ. ಕಾರ್ಡಗಳು ಹಾಗೂ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿ ಸಂಗ್ರಹಿಸಿಟ್ಟುಕೊಂಡ 1,20,000 ರೂ. ನಗದು ಜಪ್ತಿ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದವರು ಮಾಹಿತಿ ನೀಡಿದ್ದಾರೆ.

ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಅಪರಾಧ ಕೃತ್ಯದಲ್ಲಿ ಭಾಗಿಯಾದ ಇನ್ನಿತರ ಆರೋಪಿತರ ಪತ್ತೆ ಕಾರ್ಯಚರಣೆ ಮುಂದುವರೆದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

prajaprabhat

Recent Posts

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…

4 hours ago

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

13 hours ago

ಮಕ್ಕಳ ಮಾಹಿತಿ ಗೌಪ್ಯವಾಗಿಡಲು ಸೂಚನೆ

ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…

18 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

18 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

23 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

1 day ago