ಕರ್ನಾಟಕ ಹೊಲೆಯ-ಮಹರ್ ಒಳಮೀಸಲಾತಿ ತಾಲೂಕಾ ಸಮಿತಿ ಔರಾದ (ಬಾ) ಬೆಂಗಳೂರು ಚಲೋ!!

໖: 23-03-2025 ಈ ಮೂಲಕ ಆದರಣೀಯ ಡಾ. ಅಂಬೇಡ್ಕರ್ ಅಭಿಮಾನಿ ಹಾಗೂ ಪರಿಶಿಷ್ಟ ಜಾತಿಯ ಹೊಲೆಯ(ಬಲಗೈ) ಬಾಂಧವರಲ್ಲಿ ಅರಿಕೆ ಮಾಡಿಕೊಳ್ಳುವುದೇನಂದರೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕೊಡಲು ರಚಿಸಿದ ಸದಾಶಿವ ಆಯೋಗ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಸರಿಪಡಿಸಲು, ಪ್ರಸ್ತುತ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ರವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ.ಸದರಿ ಆಯೋಗ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕಾಗಿದೆ. ಈ ವರದಿಯಂತೆ ಪರಿಶಿಷ್ಟ ಜಾತಿಗಾಗಿ ನೀಡಿರುವ 15% ಮೀಸಲಾತಿಯನ್ನು 4 ವರ್ಗಗಳಲ್ಲಿ ವಿಂಗಡಿಸಿದೆ.

1) ಪರಿಶಿಷ್ಟ ಜಾತಿ ಎಡಗೈ ಗುಂಪಿಗೆ. 6%,

2) ಪರಿಶಿಷ್ಟ ಜಾತಿ ಬಲಗೈ ಗುಂಪಿಗೆ : 5%.

3) ಪರಿಶಿಷ್ಟ ಜಾತಿ ಸ್ಪರ್ಷ ಜಾತಿ ಗುಂಪಿಗೆ 3%.

4) ಪರಿಶಿಷ್ಟ ಜಾತಿ ಮುಂದುವರೆದ ಗುಂಪಿಗೆ 1% ಹೀಗೆ ಹಂಚಿಕೆ ಮಾಡಿ ಸರ್ಕಾರದ ಅನುಮೋದನೆಗಾಗಿ ರವಾನಿಸಲಿದೆ.

ಆದರೆ ಆತ್ಮೀಯರೇ, ಬೀದರ್, ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚಾಗಿ ಕರೆಯಲ್ಪಡುವ ಹೊಲೆಯ, ಹೊಲೇರ, ಹಾಗೂ ಹೊಲ್ಯಾ….. ಪರಿಶಿಷ್ಟ ಜಾತಿಯ ಬಲಗೈ ಗುಂಪನ್ನು ಪರಿಶಿಷ್ಟ ಜಾತಿ ಮುಂದುವರೆದ ಗುಂಪು ಎಂದು ಪರಿಗಣಿಸಿ IN ರಲ್ಲಿ ಸೇರಿಸಿದೆ.

ಆತ್ಮೀಯರೇ ಇದು ಈ ಭಾಗದ ಬಲಗೈ ಪ್ರಮುಖ ಜಾತಿಯ ಹೊಲೆಯ ಸಮುದಾಯಕ್ಕೆ ಚೇತರಿಸಿಕೊಂಡು ಮೇಲೆಳದಂತಹ ಬರೆ ಹಾಕಿದೆ. ಇದನ್ನು ಪ್ರಶ್ನಿಸದೆ ಸುಮ್ಮನೆ ಕುಳಿತರೆ, “ಮೌನಂ ಸಮ್ಮತಿ ಲಕ್ಷಣಂ” ಎಂದು ಭಾವಿಸಿ ಸದರಿ ವರದಿ ಅಂಗೀಕಾರಗೊಳಿಸಿದ್ದರೆ ನಮ್ಮ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುವುದು.

ಸದರಿ ವರದಿಯ ಬಗ್ಗೆ ಆಕ್ಷೇಪಣೆಗಳೇನಾದೂರು ಇದ್ದರೆ ಲಿಖಿತ ರೂಪದಲ್ಲಿ ದೂರುಗಳನ್ನು ಸಲ್ಲಿಸಲು 30ನೇ ಜನವರಿ 2025 ಕೊನೆಯ ದಿನವಾಗಿತ್ತು. ಆದರೆ ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಬಹಳಷ್ಟು ಆಕ್ಷೇಪಣೆಗಳು ಸಲ್ಲಿಸಲು ಆಗಲಿಲ್ಲ.

ಕಲಬುರ್ಗಿಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಿ.ಜಿ.ಸಾಗರ ರವರು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿರುತ್ತಾರೆ. ಜೊತೆಗೆ ಬೀದರ್‌ನಿಂದಲೂ ನಮ್ಮ ಸಮಾಜದ ಮುಖಂಡರಾದ ಮಾರುತಿ ಬೌದ್ಧ ಹಾಗೂ ವಿಠಲ ದಾಸ ಪ್ಯಾಗೆ ರವರು ಹಾಗೂ ಔರಾದನಿಂದ ಶಿವಕುಮಾರ ಕಾಂಬಳೆ, ಪ್ರಕಾಶ ಭಂಗಾರೆ, ದಿನೇಶ ಶಿಂದೆ. ಆನಂದ ಕಾಂಬಳೆ, ವಿನೋದ ಡೋಳೆ, ರವಿ ಯರನಳೆ, ದೀಪಕ ಯರನಳೆ, ನೇತೃತ್ವದಲ್ಲಿ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿರುತ್ತಾರೆ. ಆದಾಗ್ಯೂ ಈ ಚಳುವಳಿ ಇಷ್ಟಕ್ಕೆ ಬಿಟ್ಟರೆ ಬಾಬಾಸಾಹೇಬರು ಕೊಡಮಾಡಿ ಕೊಟ್ಟಿರುವ ಈ ಮೀಸಲಾತಿ ಸೌಲಭ್ಯ ನಮ್ಮ ಹಂತದ ವರೆಗೆ ಮಾತ್ರ ಸೀಮಿತವಾಗಿ ಮುಂಬರುವ ನಮ್ಮ ಮಕ್ಕಳು ಹಾಗೂ ಮುಂದಿನ ಪೀಳಿಗೆಗೆ ಇಲ್ಲದಂತ್ತಾಗುತ್ತದೆ.

ಸಹೋದರರ “ಕರ್ನಾಟಕ ಹೊಲೆಯ-ಮಹರ್ ಒಳಮೀಸಲಾತಿ ಸಮಿತಿ” ರಚಿಸಿಕೊಂಡು ಏಕಸದಸ್ಯ ಸಮಿತಿಯ ಅಧ್ಯಕ್ಷರಾದ ಎಚ್.ಎನ್. ನಾಗಮೋಹನದಾಸ ರವರಿಗೆ ಪರಿಶಿಷ್ಟ ಜಾತಿ ಹೊಲೆಯ ಜಾತಿಯು ಮುಂದುವರದ ಜಾತಿ ಅಲ್ಲ ಇದು ಪರಿಶಿಷ್ಟ ಜಾತಿ ಬಲಗೈ ಗುಂಪಿನ ಒಂದು ಭಾಗವೇ ಹೊರತು ಮುಂದುವರೆದ ಗುಂಪು ಅಲ್ಲ ಎಂದು ಮನವರಿಕೆ ಮಾಡಿಕೊಡಲು ದಿ.23-103-25 ರಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ ಭವನದಲ್ಲಿ ಬೃಹತ ಸಮಾವೇಶ ಏರ್ಪಡಿಸಲಾಗುತ್ತದೆ ಹೀಗಾಗಿ ಈ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಔರಾದ ತಾಲೂಕ್ಕಿನಿಂದ 300 ಜನರು ಹೋಗಲು ನಿರ್ಧರಿಸಿದವೆ.

ಹೀಗಾಗಿ ತಾವುಗಳು ಈ ಸ್ವಾಭಿಮಾನಿ ಚಳವಳಿಗೆ ಸಹಕರಿಸಬೇಕೆಂದು ವಿನಂತಿಸುತ್ತೆವೆ. ಜೈ ಭೀಮ.

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

5 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

10 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

11 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

11 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

11 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

12 hours ago