ಬೀದರ.07.ಜೂನ್.25:- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಸವಿತಾ ಮತ್ತು ಅದರ ಉಪಜಾತಿಗಳಿಗೆ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಾತಂತ್ರö್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಿಗೆ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹರು ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ದಲ್ಲಿ ಹಾಗೂ ಸ್ವಾತಂತ್ರö್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗೆ ವೆಬ್‌ಸೈಟ್ https://www.kaushalkar.com/ ಮೂಲಕ ಅರ್ಜಿಗಳನ್ನು ದಿನಾಂಕ: 30-06-2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ www.kssd.karnataka.gov.in ದಲ್ಲಿ
ಅಥವಾ ನಿಗಮದ ಸಹಾಯವಾಣಿ ಸಂಖ್ಯೆ:080-22374832 ಮತ್ತು 8050770004 ಅಥವಾ 8050770005 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ನಂ. 9-8-15/5ಬಿ, ಬಿವ್ಹಿಬಿ ಕಾಲೇಜ ರಸ್ತೆ, ಮೈಲೂರ ಕ್ರಾಸ್, ಬಸವನಗರ-585403 ದೂರವಾಣಿ ಸಂ:08482-223515 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ…
ರಾಯಚೂರು.03.ಆಗಸ್ಟ್.25:- ಯೂರಿಯಾ ಗೊಬ್ಬರ ವಿತರಿಸಿದ ವಿವರ (ಮೆಟ್ರೀಕ್ ಟನ್ ಗಳಲ್ಲಿ) ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್ -9, ಬಂದೇನವಾಜ್…
ಕೊಪ್ಪಳ.03.ಆಗಸ್ಟ್.25: ಆಗಸ್ಟ್ 5 ರಿಂದ ಕೆ.ಎಸ್.ಆರ್.ಟಿ ನೌಕರರು ಮುಷ್ಕರವನ್ನು ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಾಯಾಣಕ್ಕೆ ಯವುದೇ…
ರಾಯಚೂರು.03.ಆಗಸ್ಟ್.25: ಪ್ರಸ್ತುತ ಶೈಕ್ಷಣಿಕ ವರ್ಷ 2025-26 ನೇ ಸಾಲಿಗೆ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಷಯದ ತರಗತಿಗೆ ಪ್ರವೇಶ ಪ್ರಕ್ರಿಯೆ…
ರಾಯಚೂರು.03.ಆಗಸ್ಟ್.25: ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಧೀನದ ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯಲ್ಲಿ ಬೋಧಕೇತರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ…
ರಾಯಚೂರು.03.ಆಗಸ್ಟ.25: ಆಗಸ್ಟ್ 27ರಂದು ಆಚರಿಸುವ ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಪೂರ್ವಭಾವಿ ಸಭೆಯು ಆಗಸ್ಟ್ 7ರ…