====================================
ಪ್ರಜಾ ಪ್ರಭಾತ ಸುದ್ಧಿ:
https://prajaprabhat.com
====================================
ಬೀದರ.06.ಮಾರ್ಚ.25:- ಕರ್ನಾಟಕ ಸರ್ಕಾರಿ ನೌಕರರ ಸಂಘ, ಬೀದರ ಜಿಲ್ಲಾ ಘಟಕದ ನಿರ್ದೇಶಕರನ್ನಾಗಿ ಡಾ. ಶ್ರೀಮಂತ ಸಪಾಟೆ ಹೆಡಗಾಪುರ ರವರನ್ನು ನೇಮಕ ಮಾಡಲಾಗಿದೆ ಎಂದು ಬೀದರ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕಾತಿ ಆದೇಶ ಪತ್ರ ನೀಡುವ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸೂರ್ಯಕಾಂತ ಬಿರಾದಾರ, ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರ, ಹಿರಿಯ ಉಪಾಧ್ಯಕ್ಷ ಗೌತಮ, ರಾಜ್ಯ ಪರಿಷತ್ ಸದಸ್ಯರಾದ ರಾಜಕುಮಾರ ಮಾಳಗೆ, ಕೋಶಾಧ್ಯಕ್ಷ ದೇವಪ್ಪ, ಉಪಸ್ಥಿತರಿದ್ದು, ಸಪಾಟೆರವರಿಗೆ ಸ್ವಾಗತಿಸಿದರು.
ತಕ್ಷಣವೇ ನಿರ್ದೇಶಕರ ಹುದ್ದೆ ಸ್ವೀಕರಿಸಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಘದ ಹಿತ ಕಾಪಾಡಲು ಸಂಘಟನೆಗಾಗಿ ಮತ್ತು ಸಂಘದ ಸದಸ್ಯರ ಒಳತಿಗಾಗಿ ಶ್ರಮಿಸಬೇಕೆಂದು ಬಿರಾದಾರ ಅವರು ನಿರ್ದೇಶನ ನೀಡಿದ್ದಾರೆ.
ಡಾ. ಶ್ರೀಮಂತ ಸಪಾಟೆ ಅವರು ಅಧ್ಯಕ್ಷ ಬಿರಾದಾರ ಅವರ ಮತ್ತು ರಾಜಶೇಖರ ಬಿರಾದಾರ ಅವರ ಕಟ್ಟಾ ಬೆಂಬಲಿಗರಾಗಿದ್ದು, ನೌಕರರ ಬಗ್ಗೆ ತುಂಬ ಕಾಳಜಿಯುಳ್ಳ ವ್ಯಕ್ತಿಯುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಬೀದರಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ನಿಲಯ ಪಾಲಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ವಸತಿ ಶಾಲೆಯ ಮಕ್ಕಳಿಗೆ ವಿಶೇಷ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟದ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಶಾಲೆಯ ಮಕ್ಕಳ ತಂಡಕ್ಕೆ ಎರಡು ಲಕ್ಷ ನಗದು ಬಹುಮಾನ ಸಹ ಲಭಿಸಿರುತ್ತದೆ. ಹೀಗೆ ತಮ್ಮ ವೃತ್ತಿಯೊಂದಿಗೆ ಮಕ್ಕಳಿಗೆ ವಿಶೇಷ ಜ್ಞಾನಾರ್ಜನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ನೇಮಕಕ್ಕೆ ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಮಪುರ, ಪ್ರಧಾನ ಕಾರ್ಯದರ್ಶಿ ಡಾ. ರಘುಶಂಖ ಭಾತಂಬ್ರಾ, ಜನಪ್ರಿಯ ಪ್ರಕಾಶನದ ನಾಗಶೆಟ್ಟಿ ಪಾಟೀಲ ನಾಗಶೆಟ್ಟಿ ಪಾಟೀಲ ಗಾದಗಿ, ಎಂ. ಪಿ. ಮುದಾಳೆ, ಸುನೀಲ ಭಾವಕಟ್ಟಿ, ವಿಜಯಕುಮಾರ ಸೊನಾರೆ ಸೇರಿದಂತೆ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.
Source: ಪ್ರಜಾ ಪ್ರಭಾತ ಸುದ್ಧಿ
====================================
ವೀಕ್ಷಕರೇ ನಮ್ಮ ಚಾನೆಲ್ ಜಾಹಿರಾತು ಹಾಗೂ ಸುದ್ದಿಗಾಗಿ
ಕರೆ ಮಾಡಿ ಅಥವಾ ವಾಟ್ಸಪ್ಪ್ ಮಾಡಿ: 9481611151
E_Mail ID: prajaprabhat24@gmail.com
====================================
ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ …
ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…
ಚಾಮರಾಜನಗರ.06.ಆಗಸ್ಟ್ .25:- ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ 2022 -2025 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ…
ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…