ಬೀದರ.24ಜನವರಿ.25:- ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮವು ತಾಂಡಾಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಬಂಜಾರ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಬಂಜಾರರ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ-ಬೆಳಸಿ, ಪುನಶ್ಚೇತನಗೊಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿದರ ಪ್ರತಿಭೆಯನ್ನು ಹೊರಹೊಮ್ಮಿಸಲು ಬಂಜಾರರ ಬಹುಮುಖಿ ಕಲಾಪ್ರತಿಭಾನ್ವೇಷಣೆ – ಕಲಾಮಳಾವ್ ಕಾರ್ಯಕ್ರಮ ಹಮ್ಮಿಕೊಂಡಿರುವುದರಿAದ ಬಂಜಾರ ಸಮುದಾಯದ ಕಲಾವಿದರು ಭಾಗವಹಿಸಿ ತಮ್ಮಲ್ಲಿ ಹುಡುಕಿರುವ ಕಲಾಪ್ರತಿಭೆಯನ್ನು ಪೂರೈಸಿ ಪ್ರಶಸ್ತಿಪಡೆಯಲು 2024-25ನೇ ಸಾಲಿನಲ್ಲಿ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಅರ್ಹ ಮತ್ತು ಆಸಕ್ತ ಬಂಜಾರ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿರುತ್ತಾರೆ.
ಬಂಜಾರ ಸಮುದಾಯದ ಬಹುಮುಖಿ ಕಲಾಪ್ರಕಾರಗಳ ವಿವರ: ವಾಜಾವಾದ್ಯ ಕಲೆ, ಕಥನಗಾಯನ (ಸಣ್ಣವಾಜಾ), ಲೇಂಗಿನ್ಲತ್ಯ, ನಂಗಾರಠೋಳಿಬಿಡಿಸುವ ನ್ಲತ್ಯ, ಮಹಿಳೆಯರ ಸಾಂಪ್ರದಾಯಕ ನ್ಲತ್ಯ, ಘೂಮರ್ ನ್ಲತ್ಯ, ಮಹಿಳೆಯರ ಜನಪದ ನ್ಲತ್ಯ, ಮಹಿಳೆಯರ ಸಾಂಪ್ರದಾಯಕ ಗಾಯನ ಮತ್ತು ನ್ಲತ್ಯ, ಬಂಜಾರರ ಸುಗಮ ಸಂಗೀತ, ಬಾಲಕಿಯರ ನ್ಲತ್ಯ, ಬಾಲಕರಲೇಂಗಿ ನ್ಲತ್ಯ, ಬಾಲಕರ ಮತ್ತು ಬಾಲಕೀಯರ ಆಧುನಿಕ ನೃತ,್ಯ, ಮಹಿಳೆಯರ ಹಾವೇಲಿ ಮತ್ತು ಢಾವಲೋ.
ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯಿಚಿದ ಪಡೆದು ಭರ್ತಿ ಮಾಡಿ ದಿನಾಂಕ: 30-01-2025 ರೊಳಗಾಗಿ ಆಯಾ ವಲಯ ಕಛೇರಿ ವಿಳಾಸಕ್ಕೆ ಕಳುಹಿಸಬೇಕು.
ಈ ಹಿಂದೆ ನಿಗಮದಿಂದ ನಡೆದ ಎಲ್ಲಾ ಕಲಾಮಳಾವ್ ಕಾರ್ಯಕ್ರಮದಲ್ಲಿ ಪ್ರಥಮಸ್ಥಾನ, ದ್ವೀತಿಯಸ್ಥಾನ, ತೃತೀಯಾ ಸ್ಥಾನ ಪಡೆದ ಕಲಾ ತಂಡಗಳ ಕಲಾವಿದರು ಅರ್ಜಿಸಲ್ಲಿಸಲು ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಜಿಲ್ಲಾ ಬಂಜಾರಾ ಭವನ ಮಡಿವಾಳ ಸರ್ಕಲ ಕೆ.ಎಚ.ಬಿ. ಕಾಲೋನಿ ಶಿವಮಂದಿರ ಹತ್ತಿರ ಬೀದರ 585401, ದೂರವಾಣಿ ಸಂಖ್ಯೆ 9591625251 ಗೆ ಸಂರ್ಪಕಿಸÀಬಹುದಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…