ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಮಹಿಳಾ ಜಿಲ್ಲಾಧ್ಯಕ್ಷೆ ಮೇಲೆ ಮಾರಣಾಂತಿಕ ಕಲ್ಲೆ ಮಾಡಿರುವ ಬಿಜೆಪಿ ವಕ್ತಾರ ಮತ್ತು ಅವರ ಬೆಂಬಲಿಗರನ್ನು ಬಂಧಿಸಬೇಕೆoದು ಆಗ್ರಹ.

ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಮಹಿಳಾ ಜಿಲ್ಲಾಧ್ಯಕ್ಷೆ ಮೇಲೆ ಮಾರಣಾಂತಿಕ ಕಲ್ಲೆ ಮಾಡಿರುವ ಬಿಜೆಪಿ ವಕ್ತಾರ ಮತ್ತು ಅವರ ಬೆಂಬಲಿಗರನ್ನು ಬಂಧಿಸಬೇಕೆoದು ಆಗ್ರಹ.

   ೨೦೧೬ರಲ್ಲಿ ಮಾನ್ಯ ಸಿದ್ದರಾಮಯ್ಯ ಸರ್ಕಾರವು ಕರ್ನಾಟಕ ರಾಜ್ಯದಲ್ಲಿರುವ ೧೦೧ ಪ.ಜಾತಿಗಳಲ್ಲಿ ೫೧ ಅಲೆಮಾರಿ ಜಾತಿಗಳನ್ನು ಗುರುತಿಸಿದ್ದಾಗಲೂ ಅಂದಿನ ಅಲೆಮಾರಿ ಹೊರಾಟಗಾರ ಡಾ. ಬಾಲಗುರುಮೂರ್ತಿ ಕುಮ್ಮಕ್ಕಿನಿಂದ ಅಂದಿನ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಕೊರಮ ಮತ್ತು ಕೊರಚ ಸಮುದಾಯವನ್ನು ಅಲೆಮಾರಿ ಪಟ್ಟಿಯಿಂದ ಕೈಬಿಟ್ಟು ಕೇವಲ ೪೯ ಎಂದು ಘೋಷಿಸಿದ್ದರು. ನಂತರ ೨೦೧೮ರಲ್ಲಿ ಯಾವುದೇ ಸ್ವಾರ್ಥವಿಲ್ಲದ ಅಂದಿನ ಸಮಾಜ ಕಲ್ಯಾಣ ಸಚಿವರು ಶ್ರೀ ಪ್ರಿಯಾಂಕ್ ಖರ್ಗೆರವರು ಈ ಲೋಪವನ್ನ ಸರಿಪಡಿಸಿ ಸಾಮಾಜಿಕ ಕಳಂಕ, ಅಪಮಾನಕ್ಕೊಳಗಾಗಿ ನೋವುಂಡು ಹಸಿವಿನಿಂದ ಕಂಗೆಟ್ಟ ಜನವರ್ಗ, ಬದುಕಿನ ಅನಿವಾರ್ಯತೆಗೆ ಸಿಲುಕಿ ಅಪರಾಧಿ ಸಂಕೋಲೆಗೆ ಒಳಗಾದ ಮೂಲ ಅಲೆಮಾರಿ, ಅಪರಾಧಿತ ವಿಮುಕ್ತ ಬುಡಕಟ್ಟಿನ ಕೊರಮ ಕೊರಚ ಜನಾಂಗವನ್ನು  ಸೇರ್ಪಡೆ ಆದೇಶ ಮಾಡಿ ೫೧ ಅಲೆಮಾರಿ ಜಾತಿಗಳನ್ನು ಗುರುತಿಸಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಣರಾದರು. ೨೦೨೨ರಲ್ಲಿ ಇದೇ ಅಭಿವೃದ್ದಿ ಕೋಶವು ನಿಗಮವಾಗಿ ಪರಿವರ್ತನೆಯಾಯಿತು.


ಎಡಗೈ ಸಮುದಾಯ ದಶಕಗಳಿಂದಲೂ ಒಳಮೀಸಲಾತಿಗೆ ಹೋರಾಟ ಮಾಡುತ್ತಲೇ ಬಂದಿರುತ್ತದೆ. ಆದರೆ ಕೊರಮ ಕೊರಚÀ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟಿಯಿಂದಲೇ ಕೈಬಿಡಬೇಕೆಂದು ಅಧಿಕಾರ ಬುಬಘಳೆ ಮಾಡಿ ಸದಾಶಿವ ಆಯೋಗದ ಮೂಲಕ ಹುನ್ನಾರ ನಡೆಸಿದ್ದರಿಂದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭಸಿದ್ದರು. ಕೊರಮ ಕೊರಚ ಹೆಚ್ಚಿರುವ ಇವರ ಮತ ಕ್ಷೇತ್ರದಲ್ಲಿ ಕಾರಣರಾದ ಈ ಸಮುದಾಯವನ್ನು ಅಂದಿನಿoಲೂ ಗುರಿ ಮಾಡಿ ೨೦೧೮ ಮತ್ತು ೨೦೨೩ ವಿಧಾನಸಭಾ ಚುನಾವಣೆ ಪ್ರಭಲ ಆಕಾಂಕ್ಷಿ, ಶಿವಮೊಗ್ಗ ಗ್ರ‍್ರಾಮಂತರ ಚುನಾವಣೆಯಲ್ಲಿಯೂ ಸಹ ಈ ಸಮುದಾಯದ ಏಕೈಕ ಪ್ರಭಲ ಆಕಾಂಕ್ಷಿಗೆ ಟಿಕೆಟ್ ತಪ್ಪಿಸಿ ಸ್ವಯಜಾತಿಯ ಅಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಹೆಚ್. ಆಂಜನೇಯ ಯಶಸ್ವಿಯಾದರು.


ಟಿಕೆಟ್ ವಂಚಿತ ಕೊರಮ ಜನಾಂಗದ ಹೋರಾಟಗಾರ್ತಿಯೊಬ್ಬರ ಪ್ರಾಮಾಣಿಕ ಪರಿಶ್ರಮ, ಪಕ್ಷ ಕಟ್ಟಲು ಬಿಲಿಷ್ಟ ನಾಯಕತ್ವ ಗುರುತಿಸಿ ೨೦೨೪ರಲ್ಲಿ ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇದರ ಪ್ರಥಮ ಅಧ್ಯಕ್ಷರಾಗಿ ನೇಮಕ ಮಾಡಿ ಅಲೆಮಾರಿ ಸಮುದಾಯಕ್ಕೆ ರಾಜಕೀಯ ಅವಕಾಶವನ್ನು ನೀಡಲಾಗಿದೆ. ಅಂದಿನಿoದಲೂ ಕಾಲಿಗೆ ಚಕ್ರಟ್ಟಿಕೊಂಡು ರಾಜ್ಯಾದ್ಯಾಂತ ಎಲ್ಲಾ ತಾಲ್ಲೂಕು ಜಿಲ್ಲೆಗಳಿಗೆ ಸಮಸ್ತ ೫೧ ಪರಿಶಿಷ್ಟ ಜಾತಿಗಳಲ್ಲಿ ಯಾವುದೇ ಬೇದಭಾವ ಇಲ್ಲದೆ ೫೧ ಅಲೆಮಾರಿ ಜಾತಿಗಳನ್ನು ಒಗ್ಗಟ್ಟಾಗಿ ಕರೆದೊಯ್ಯತ್ತಿರುವ ನಿಗಮದ ಅದ್ಯಕ್ಷೆಯ ದಕ್ಷ ಆಡಳಿತ, ಅವಿರತ ಪರಿಶ್ರಮ ಸೇವೆ ಇವರ ಏಳಿಗೆ ಮತ್ತು ವ್ಯಾಪಕ ಜನಪ್ರತಿಯತೆಯನ್ನು ಸಹಿಸದ  ಮತ್ತು ಮುಂದಿನ ತಿಂಗಳು ನಿಗಮದಿಂದಲೇ ರಾಜ್ಯಮಟ್ಟದ ಸಮಾವೇಶ ನಡೆಸಲು ಮುಂದಾಗಿರುವುದನ್ನು ಅರಿತು, ಇನ್ನಷ್ಟು ಜನಪ್ರಿಯತೆ ಹೋಂದಬಹುದೆoದು, ಕೆಲವು ಅಲೆಮಾರಿ ಏಜಂಟರು ಒಳ ಮಿಸಲಾತಿಯ ಹೋರಾಟದ ರೂವಾರಿ, ತನ್ನ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿರುವ ಇದೇ ಹೆಚ್ ಆಂಜನೇಯರವರ ರಾಜಕೀಯ ದುರುದ್ದೇಶ ಅರಿತ ಕೆಲವು ಬಿಜೆಪಿ ಪಕ್ಷದಲ್ಲಿ ಗುರೊತಿಸಿಕೊಂಡಿರುವ ಅಲೆಮಾರಿ ಜನಾಂಗದ ಏಜಂಟರು ಕಿಡಿಗೇಡಿಗಳ ಗುಂಪನ್ನು ಎತ್ತಿಕಟ್ಟಿ ಅಲೆಮಾರಿಗಳ ಗುಂಪಿನ ಒಗ್ಗಟ್ಟು ಹೊಡೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ದಿನಾಂಕ:೦೫.೦೭.೨೦೨೫ರoದು ಕೇವಲ ೪೯ ಜಾತಿಗಳನ್ನು ಮಾತ್ರ ಕರೆದು ರಾಜ್ಯಮಟ್ಟ ಸಮಾವೇಶ ನಡೆಸಲು ಪೂರ್ವವಿ ಸಭೆ ನಡೆಸುತ್ತಿದ್ದರು. ಈ ಬಗ್ಗೆ ಇದೇ ಆಂಜನೇಯ ರಾಜ್ಯದ ಎಲ್ಲಾ ಅಲೆಮಾರಿ ಮುಖಂಡರನ್ನು ಸಭೆಗೆ ಬರಬೇಕೆಂದು ವೀಡಿಯೋ ಮೂಲಕ ಕರೆ ನೀಡಿದ್ದು, ಇದರÀ ಬಗ್ಗೆ ದಿನಾಂಕ: ೦೪.೦೭.೨೦೨೫ರಂದು ನಿಗಮದ ಅಧ್ಯಕ್ಷೆ ಮಾನ್ಯ ಶ್ರೀಮತಿ ಪಲ್ಲವಿ ಜಿ. ರವರು ಪ್ರಶ್ನೆ ಮಾಡಿದಾಗ ಇವರನ್ನು ಸಹ ಸಭೆಗೆ ಆಹ್ವನಿದರು.


ಆದರೇ ದಿನಾಂಕ: ೦೫.೦೭.೨೦೨೫ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಮಾನ್ಯ ಅಧ್ಯಕ್ಷರು ಆಗಮಿಸಿದ್ದಾಗ ಬಿಜೆಪಿ ಪಕ್ಷದ ಅಲೆಮಾರಿ ಜನಾಂಗದ ಕೆಲವು ಪುಡಾರಿಗಳ ಇದು ಕೇವಲ ೪೯ ಜಾತಿಗಳಿಗಾಗಿ ನಡೆಯುವ ಸಭೆ ನೀವು ಇಲ್ಲಿಗೆ ಯಾಕೆ ಬಂದಿರುತ್ತಿರ ಎಂದು ಒಮ್ಮೆಲೆ ಮುಗುಬಿದ್ದರು.  ಸಾಮಾಜಿಕ ಕಳಂಕ, ಅಪಮಾನಕ್ಕೊಳಗಾಗಿ ನೋವುಂಡು ಹಸಿವಿನಿಂದ ಕಂಗೆಟ್ಟ ಜನವರ್ಗ ಬದುಕಿನ ಅನಿವಾರ್ಯತೆಗೆ ಸಿಲುಕಿ ಅಪರಾಧಿ ಸಂಕೋಲೆಗೆ ಒಳಗಾದ ಅಲೆಮಾರಿ, ಅರೆ ಅಲೆಮಾರಿ ಸೂಕ್ಷö್ಮ ಸಮುದಾಯಗಳನ್ನು ಒಗ್ಗಟ್ಟಾಗಿ ಕರೆದೋಯ್ಯಲು ಸರ್ಕಾರ ನಿಗಮ ಸ್ಥಾಪಿಸಿದ್ದು, ಆದರೆ ಇಲ್ಲಿ ಹೊಡೆದಾಡುವ ನೀತಿ ಅನುಸರಿಸಲು ಮುಂದಾಗಿ, ಒಳಮೀಸಲಾತಿಯ ಮತ್ತನ್ನು ನೆತ್ತಿಗೇರಿಸಿಕೊಂಡಿರುವ ಸಭೆಗೆ ಕರೆದಿರುವ ಆಂಜನೇಯ ರವರೆ ಸ್ವತಃ ಸಭೆಯಿಂದ ಹೊರ ನಡೆಯಲು ಸೂಚಿಸಿ ಅಪಮಾನ ಮಾಡಿದ್ದಾರೆ.


   ಇದರಿಂದ ಇನ್ನಷ್ಟು ಪುಷ್ಟಿಗೊಂಡ ಬಿಜೆಪಿ ಪಕ್ಷದ ಅಲೆಮಾರಿ ಜನಾಂಗದ ಕೆಲವು ಪುಡಾರಿಗಳು ನಿಗಮದ ಅದ್ಯಕ್ಷೆಯನ್ನು ಏಕಾಏಕಿ ಇಲ್ಲಿಗೆೆ ಏಕೆ ಬಂದೆ ಎಂದು ಏಕವಚನದಲ್ಲಿ ಅಶ್ಲೀಲ ಪದಬಳಕೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದAತೆ ಎಳಿದಾಡಿ, ಹಲ್ಲೆ ಮಾಡಿ ಒಬ್ಬ ಸರ್ಕಾರದ ಪ್ರತಿನಿಧಿಯ ರಕ್ಷಣೆ ದಾವಿಸಿದ ಹೆಣ್ಣು ಮಗಳೆಂದೂ ನೋಡದೆ ಅಲೆಮಾರಿ ಕೊರಮ ಜನಾಂಗದ ಜಿಲ್ಲಾದ್ಯಕ್ಷೆಗೂ ರಕ್ತ ಬರುವಂತೆ ಮೈಕೈ ಪರಚಿ ಗೂಂಡಾ ವರ್ತನೆ ಮಾಡಿರುವ  ಬಿಜೆಪಿ ಪಕ್ಷದ ವಕ್ತಾರ ಸೇರಿ ೭ ಜನರ ವಿರುದ್ದ ಹೈಗ್ರೊಂಡ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಮತ್ತು ಇಷ್ಟೆಲ್ಲಾ ಅವಾಂತoರಕ್ಕೆ ಕಾರಣರಾದ ಅವಿವೇಕದ ನಡೆ ಅನುಸರಿಸಿದ ಹೆಚ್. ಆಂಜನೇಯ ವಿರುದ್ದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ  ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿ ಮತ್ತು ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇಲ್ಲವಾದರೆ ರಾಜ್ಯಾದ್ಯಾಂತ ಉಗ್ರ ಹೋರಾಟ ನಡೆಸಲಾಗುತ್ತದೆ

prajaprabhat

Recent Posts

ಭಾರಿ ಗಾತ್ರದ ಹೆಬ್ಬಾವು ರಕ್ಷಿಸಿದ ಸ್ನೇಕ್ ಮಹೇಶ್.

ಚಾಮರಾಜನಗರ.06.ಜುಲೈ.25:- ಯಳಂದೂರು ತಾಲೂಕು  ಕೊಮಾರನಪುರ ಗ್ರಾಮದ ಜೆಎಸ್ಎಸ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವಿ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬಿನ ಕಟಾವು…

5 hours ago

ಅತಿಥಿ ಉಪನ್ಯಾಸಕರ ಪ್ರಮುಖ ಸಮಸ್ಯೆಗಳನ್ನು ಸರ್ಕಾರ ಗಮನಹರಿಸಲೀ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರಣ ವಜಾಗೊಳಿಸುವಿಕೆಯನ್ನು ಎದುರಿಸುತ್ತಿರುವ ಗ್ರೀ ಕಾಲೇಜುಗಳು. ಕರ್ನಾಟಕ ಸರ್ಕಾರವು…

10 hours ago

ಬೀದರ ವಾರ್ತಾ ಇಲಾಖೆ: ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳಿoದ ಅರ್ಜಿ ಆಹ್ವಾನ

ಬೀದರ.06.ಜುಲೈ.25:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ…

14 hours ago

ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಒದಗಿಸಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.06.ಜುಲೈ.25:- ಜಿಲ್ಲೆಯಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಹಾಗೂ ಆ ಜನಾಂಗದವರಿಗೆ ವಸತಿ ಸೌಲಭ್ಯದಡಿಯಲ್ಲಿ ಮನೆಗಳನ್ನು…

14 hours ago

ಗುರುದ್ವಾರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

ಬೀದರ.06.ಜುಲೈ.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಐತಿಹಾಸಿಕ ಗುರುನಾನಕ್ ಝೀರಾ ಸಾಹೇಬ್…

14 hours ago

ಮಹಿಳಾ ಪೊಲೀಸರ ಅಕ್ಕ ಪಡೆಯನ್ನು ರಾಜ್ಯಾದ್ಯಂತ<br>ವಿಸ್ತರಿಸಲು ಕ್ರಮ-ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೀದರ.06.ಜುಲೈ.25:- ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆಯು ರಚಿಸಿದ ಮಹಿಳಾ ಪೊಲೀಸ್ ಅಕ್ಕ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು…

14 hours ago