ಬೆಂಗಳೂರು.03.ಜೂನ್.25:- ಹೊಸ ಕೈಗಾರಿಕಾ ನೀತಿಯಲ್ಲಿ ಕರ್ನಾಟಕದಲ್ಲಿ ಘಟಕ ಗಳನ್ನು ಸ್ಥಾಪಿಸುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಗ್ರೂಪ್ ಎ ಮತ್ತು ಬಿ ವರ್ಗಗಳಲ್ಲಿ ಕನ್ನಡಿಗರಿಗೆ ಶೇ.55ರಷ್ಟು ಉದ್ಯೋಗ ಗಳನ್ನು ಕಾಯ್ದಿರಿಸಬೇಕು. ಗ್ರೂಪ್ ಸಿ ಮತ್ತು ಡಿ ವರ್ಗಗಳು ಶೇ.75 ರಷ್ಟು ಮೀಸ ಲಾತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಈ ಕುರಿತು ಮಾತನಾಡಿದ ಸಚಿವರು, ಪರಿಷ್ಕೃತ ನೀತಿಯಡಿ ಕೈಗಾ ರಿಕೆಗಳು ಗ್ರೂಪ್ ಎ ಮತ್ತು ಬಿ ವರ್ಗಗಳಲ್ಲಿ ಕನ್ನಡಿಗರಿಗೆ ಶೇ.55ರಷ್ಟು ಉದ್ಯೋಗ ಗಳನ್ನು ಕಾಯ್ದಿರಿಸಬೇಕು. ಗ್ರೂಪ್ ಸಿ ಮತ್ತು ಡಿ ವರ್ಗಗಳು ಶೇ.75 ರಷ್ಟು ಮೀಸ ಲಾತಿಯನ್ನು ಹೊಂದಿವೆ. ಕೈಗಾರಿಕೆಗಳು ಈ ಷರತ್ತು ಗಳನ್ನು ಒಪ್ಪಿ ಕೊಂಡು ಸ್ಥಳೀ ಯರಿಗೆ ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸಿದೆ ಎಂದರು.
ನಮ್ಮ ಸರಕಾರವು ಉತ್ತರ ಕರ್ನಾಟಕದ ಭಾಗಗಳಲ್ಲೂ ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡಿದೆ. ಇದಕ್ಕಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಹಲವು ರಿಯಾಯಿತಿ ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನೈಡೆಕ್ ಕಂಪನಿಯ ಈ ಯೋಜನೆಗೆ ಕೇವಲ ಎರಡು ವರ್ಷಗಳಲ್ಲಿ ಭೂಮಿ ಮಂಜೂರು ಮಾಡಿ, ತ್ವರಿತವಾಗಿ ಅನುಷ್ಠಾನಕ್ಕೆ ಬರುವಂತೆ ಮಾಡಿದೆ ಎಂದು ಅವರು ವಿವರಿಸಿದ್ದಾರೆ.
ಕೃಷ್ಣಾ ನ್ಯಾಯಾಧಿಕರಣವು ಕೈಗಾರಿಕಾ ಅಗತ್ಯಗಳ ಬಳಕೆಗೆ 4 ಟಿಎಂಸಿ ನೀರನ್ನು ಮೀಸಲಿಟ್ಟಿದೆ. ಇದರಲ್ಲಿ ನಾವು ಇದುವರೆಗೆ ಕೇವಲ ಅರ್ಧ ಟಿಎಂಸಿ ನೀರನ್ನು ಮಾತ್ರ ಬಳಸಿಕೊಂಡಿದ್ದೇವೆ. ಇದರಲ್ಲಿ ಇನ್ನೂ 3.5 ಟಿಎಂಸಿ ನೀರು ಹಾಗೆಯೇ ಇದೆ. ಇದರಲ್ಲಿ ನಾವು ರೈತರ ಪಾಲಿನ ನೀರನ್ನೇನೂ ಮುಟ್ಟಿಲ್ಲ. ಹಿಡಕಲ್ ಜಲಾಶಯದ ಕೆಳಭಾಗದ ನೀರನ್ನಷ್ಟೇ ಬಳಸಿಕೊಂಡಿದ್ದೇವೆ. ಕೈಗಾರಿಕೆಗಳು ಬೆಳೆಯಬೇಕು ಎಂದರೆ ನೀರು ಅತ್ಯಗತ್ಯ ಎಂದು ಅವರು ನುಡಿದಿದ್ದಾರೆ.
ಅತ್ಯಂತ ಮಹತ್ವಾಕಾಂಕ್ಷಿ ಮತ್ತು ಶ್ರೇಷ್ಠ ಕಾರ್ಖಾನೆಯು ಶೀಘ್ರವಾಗಿ ಪೂರ್ಣಗೊಂಡಿದೆ. ಫ್ರಾನ್ಸ್ ಜಪಾನ್ ಅವರ ಎಲ್ಲರ ಸಮಕ್ಷಮದಿಂದ ಇಂದು ಉದ್ಘಾಟನೆ ಮಾಡುತ್ತಿದ್ದೇವೆ.
ಉತ್ತರ ಕರ್ನಾಟಕಕ್ಕೆ ಬಿಹ್ಯಾಂಡ್ ಬೆಂಗಳೂರು ತರ ಕೈಗಾರಿಕೆ ಬರಬೇಕು ಎಂದು ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರು ಸುತ್ತಮುತ್ತಲಿ ಸೇರಿ ಶೇಕಡ 75 ಬಂದಿದೆ. ಉತ್ತರ ಕರ್ನಾಟಕಕ್ಕೆ ಶೇಕಡಾ 45 ಪ್ರಪೋಸಲ್ ಬಂದಿದೆ. ಎಲ್ಲವನ್ನು ಸಹ ನಾವು ಹಿಂಬಾಲಿಸುತ್ತಿದ್ದೇವೆ. 6 ಲಕ್ಷ ಜನರಿಗೆ ಉದ್ಯೋಗ ಸಿಗಬೇಕು ಎಂದು ಅತ್ಯಂತ ಗಂಭೀರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…
ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…
ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…
2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…
ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…
ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…