ಔರಾದ (ಬಾ). 21.ಮಾರ್ಚ.25:- ಬೀದರ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾವ್ ಗ್ರಾಮ ಪಂಚಾಯತಿನಲ್ಲಿ ಸ್ವಚ್ಛ ಭಾರತ್ ಮಿಷನ್ ಗೆ ಸಂಬಂಧಿಸಿದ ವಾಹನವನ್ನು ಚಲಾಯಿಸದೆ ಸರಿ ಸುಮಾರು 4-5 ವರ್ಷಗಳಿಂದ ಕಚೇರಿ ಎದುರುಗಡೆ ವಾಹನ ನಿಲ್ಲಿಸಿ ಕಚೇರಿಗೆ ಹಾಜರಾಗದೆ ಮನೆಯಲ್ಲಿ ಕುಳಿತು ಪ್ರತಿ ತಿಂಗಳ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ವೇತನ ಪಡೆಯುತ್ತಿರುವುದರ ವುದರ ಬಗ್ಗೆ ದೂರು ಹಾಗೂ ಕರ್ತವ್ಯ ನಿಷ್ಕಾಳಜಿತನ ವಹಿಸಿರುವ ಬಗ್ಗೆ ನೋಟಿಸ್ ಜಾರಿ ಮಾಡಿ ಕರ್ತವ್ಯದಿಂದ ವಜಾ ಗೊಳಿಸುವಂತೆ ದೂರು ಪತ್ರ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಶ್ರೀ ಪ್ರಕಾಶ್ ಕಾಂಬಳೆ ಅಲ್ಲಾಪುರ್ ತಾಲೂಕ ಔರಾದ (ಬಿ) ಜಿಲ್ಲಾ ಬೀದರ್ ಖಾಯಂ ನಿವಾಸಿಯಾಗಿದ್ದು ಕರ್ನಾಟಕ ಗಡಿ ಪ್ರದೇಶದ ಔರಾದ (ಬಿ) ತಾಲೂಕಿನ ಬರುವ ಬಾದಲಗಾವ್ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿರುವ ಹಾಗೂ ಸ್ವಚ್ಛ ಭಾರತ್ ಅಭಿಯಾನ್ ಮಿಷನ್ ಸಂಬಂಧಿಸಿದ ಕಾರ್ಮಿಕರಾಗಿರುವ ಸಿಬ್ಬಂದಿಗಳು ಕಚೇರಿಗೆ ಹಾಜರಾಗದೆ.
ಮನಬಂದ ರೀತಿಯಲ್ಲಿ ಕಚೇರಿಗೆ ಬಂದು ಇಡೀ 3-4 ತಿಂಗಳ ಹಾಜರಾತಿಯ ಪುಸ್ತಕದಲ್ಲಿ ಒಂದೇ ದಿವಸ ಬಂದು, ಹಾಜರಾತಿ ಪುಸ್ತಕದಲ್ಲಿ ರುಜು ಮಾಡಿ ತಮ್ಮ ವೇತನ ಬಟವಾಡಿಯನ್ನು ಮಾಡಿಕೊಳ್ಳುತ್ತಿದ್ದಾರೆ. Enter ಈ ಕುರಿತು ನಾವು ಸಂಬಂಧಪಟ್ಟ ಪಿಡಿಒ ಅಧಿಕಾರಿ ಅವರಿಗೆ ಮೌಖಿಕವಾಗಿ ವಿಚಾರಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಸರಿಸುಮಾರು ಐದಾರು ವರ್ಷ ಕಳೆಯುತ್ತಾ ಹೋದರು ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಯಾವುದೇ ಗ್ರಾಮಕ್ಕೆ ಬಂದು ನಾಲೆ ಸ್ವಚ್ಛತೆ ಮಾಡುವುದಾಗಲಿ ಅಥವಾ ಬೆಳಗ್ಗೆ ಸ್ವಚ್ಛ ಭಾರತ್ ಮಿಷನ್ ವಾಹನವನ್ನು ಸಹ ಗ್ರಾಮದಲ್ಲಿ ಓಡಿಸದೇ ತಮ್ಮ ಮನಬಂದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ನಿಷ್ಕಾಳಚಿತನವನ್ನು ಕರ್ತವ್ಯದಲ್ಲಿ ತೋರಿಸಿರುವ ಕಾರಣ, ಇವರ ವಿರುದ್ಧ ನೋಟಿಸ್ ಜಾರಿ ಮಾಡಿ, ಕರ್ತವ್ಯದಿಂದ ವಜಾ ಗೊಳಿಸುವಂತೆ ಈ ದೂರು ಪತ್ರದ ಮೂಲಕ ತಮಗೆ ತಿಳಿಪಡಿಸಲಾಗಿದೆ.
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…