ಔರಾದ|ಇಂದಿನಿಂದ ವಷಾ೯ವಾಸ ಪ್ರಾರಂಭ

ಇಂದಿನಿಂದ ವಷಾ೯ವಾಸ ಪ್ರಾರಂಭ

ಪಾಲಿ ಭಾಷೆಯಲ್ಲಿ ‘ವಸ್ಸಾ’ ಎಂದೂ ಕರೆಯಲ್ಪಡುವ ವಷಾ೯ವಾಸವು ಬೌದ್ಧಧರ್ಮದ ಪ್ರಮುಖ ಆಚರಣೆಯಲ್ಲಿ ಒಂದು. ಇದು ಬೌದ್ಧ ಭಿಕ್ಖೂಗಳಿಗಾಗಿ ಮಹತ್ವಪೂಣ೯ವಾದ ಮೂರು ತಿಂಗಳುಗಳ ಅವಧಿಯಾಗಿದ್ದು, ಮಳೆಗಾಲದ ಋತುವಿನಲ್ಲಿ ಭಿಕ್ಖೂಗಳು ಒಂದೇ ಸ್ಥಳದಲ್ಲಿ ಒಂದು ವಿಹಾರದಲ್ಲಿ ಇದ್ದುಕೊಂಡು ಧ್ಯಾನ, ಅಧ್ಯಯನ ಹಾಗೂ ಜ್ಞಾನಾಜ೯ನೆಗಾಗಿ ತಮ್ಮ ಸಮಯವನ್ನು ನಿಡುತ್ತಾರೆ. ಬೌದ್ಧ ಭಿಕ್ಖೂಗಳ ಆಧ್ಯಾತ್ಮಿಕ ಅಭ್ಯಾಸದ ಅಭಿವೃದ್ಧಿ ಹಾಗೂ ಜನಸಮುದಾಯದ ಜೋತೆ ಒಂದು ಉತ್ತಮ ಸಂಬಂಧ ಹಾಗೂ ಒಡನಾಟ ಬೆಳೆಸುವುದೆ ಇದರ ಪ್ರಮುಖ ಉದ್ದೆಶವಾಗಿದೆ. ಈ ಅವಧಿಯು ಬೌದ್ಧ ಧಮ್ಮದಲ್ಲಿ ಒಂದು ಮಹತ್ವಪೂಣ೯ವಾದ ಸಮಯ ಎಂದು ಪರಿಗಣಿಸಲಾಗಿದೆ. ಈ ಅವಧಿಯನ್ನು ಭಿಕ್ಖೂಗಳು ಧ್ಯಾನ ಮತ್ತು ಬೌದ್ಧಿಕ ವಿಕಾಸಕ್ಕಾಗಿ ಬಳಸಿಕೊಳ್ಳುತ್ತಾರೆ.

ವಷಾ೯ವಾಸವು ಸಾಮಾನ್ಯವಾಗಿ ಆಷಾಢ  ಪೂರ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಪೂರ್ಣಿಮೆಯ ವರೆಗೆ ಮೂರು ತಿಂಗಳುಗಳ ತನಕ ನಡೆಯುವ ನಿಯಮಬದ್ಧ ಆಚರಣೆಯಾಗಿದೆ.


ವಷಾ೯ವಾಸದ ಮಹತ್ವ:

1. ಆಧ್ಯಾತ್ಮದ ಬೆಳವಣಿಗೆ:

ವಷಾ೯ವಾಸದ ಸಮಯದಲ್ಲಿ ಬೌದ್ಧ ಭಿಕ್ಖೂಗಳು ಒಂದೇ ಸ್ಥಳದಲ್ಲಿ ಉಳಿದು ಧ್ಯಾನ, ಅಧ್ಯಯನ ಹಾಗೂ ಬುದ್ಧರ ಉಪದೇಶಗಳ ಕಡೆ ತಮ್ಮ ತಮ್ಮ ಗಮನವನ್ನು ಕೆಂದ್ರಿಕರಿಸುತ್ತಾರೆ. ಇದರಿಂದ ಬೌದ್ಧ ಭಿಕ್ಖೂಗಳಲ್ಲಿ ಜ್ಞಾನ ಹಾಗೂ ಅಧ್ಯಾತ್ಮದ ಪ್ರಗತಿಯಾಗುತ್ತದೆ.

2. ಜನಸಮುದಾಯಗಳೊಂದಿಗೆ ಸಂಪರ್ಕ ಸಾಧಿಸುವುದು:

ಭಿಕ್ಖೂಗಳು ಹಾಗೂ ಸಾಮಾನ್ಯ ಜನರ ನಡುವೆ ಬಲವಾದ ಸಂಬಂಧವನ್ನು ಸ್ಥಾಪಿಸಲು ಈ ವಷಾ೯ವಾಸವು ಉತ್ತಮ ಅವಕಾಶವನ್ನು ಒದಗಿಸಿಕೊಡುತ್ತದೆ. ಈ ಅವಧಿಯಲ್ಲಿ ಭಿಕ್ಖೂಗಳು ಸ್ಥಾನಿಯ ಜನರ ಜೋತೆ ಬೆರೆತು ಅವರಿಗೆ ಧಮ್ಮ ಉಪದೇಶವನ್ನು ನಿಡುತ್ತಾರೆ. ಹಾಗೂ ಧ್ಯಾನದ ಮಹತ್ವವನ್ನು ತಿಳಿಸಿ ಕೊಡುತ್ತಾರೆ.

3. ಶಿಸ್ತು, ನಿಯಮಗಳ ಪಾಲನೆ:

ಈ ಸಮಯದಲ್ಲಿ ಭಿಕ್ಖೂಗಳು ಕಠಿಣ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಈ ಅನುಕರಣೆಯು ಅವರಿಗೆ ಸ್ವಯಂ-ಶಿಸ್ತು ಮತ್ತು ಸಂಯಮವನ್ನು ಕಲಿಸುತ್ತದೆ.

4. ಪ್ರಕೃತಿ ಬಗ್ಗೆ ಗೌರವ:

ವಷಾ೯ವಾಸದ ಸಂದಭ೯ದಲ್ಲಿ ಬೌದ್ಧ ಭಿಕ್ಖೂಗಳು ಒಂದೇ ಸ್ಥಳದಲ್ಲಿ ಪ್ರಕೃತಿಯ ಮಡಿಲಿನಲ್ಲಿ ವಾಸಿಸುತ್ತಾರೆ. ಹಾಗಾಗಿ ಸ್ವಭಾವತ ಅವರು ಪ್ರಕೃತಿಯ ಬಗ್ಗೆ ಗೌರವದ ಭಾವ ಹೊಂದಿರುತ್ತಾರೆ. ಈ ಸಂದಭ೯ದಲ್ಲಿ ಜನರಲ್ಲಿ ಪ್ರಕೃತಿ ಬಗ್ಗೆ ಗೌರವ, ಪ್ರೀತಿ ಮತ್ತು ರಕ್ಷಣೆಯ ಕುರಿತು ಜಾಗೃತಿಯನ್ನು ಮೂಡಿಸುತ್ತಾರೆ.

5. ದಾನ ಮತ್ತು ಸೇವೆ:

ಈ ವಷಾ೯ವಾಸದ ಸಮಯದಲ್ಲಿ ಉಪಾಸಕರು (ಶೃದ್ಧಾಲುಗಳು) ಭಿಕ್ಖೂ ಸಂಘಕ್ಕೆ ಭೋಜನ, ವಸ್ತ್ರಗಳು ಹಾಗೂ ಇನ್ನಿತರ ವಸ್ತುಗಳ ದಾನವನ್ನು ನಿಡಿ ವಷಾ೯ವಾಸಕ್ಕೆ ಸಹಯೋಗವನ್ನು ನಿಡುತ್ತಾರೆ

6. ಉಪೋಸಥ್ (ವೃತ):

ಈ ವಷಾ೯ವಾಸದ ಅವಧಿಯಲ್ಲಿ ಉಪಾಸಕರುಗಳು ಅಷ್ಟಶೀಲ (ಎಂಟು ಉಪದೇಶ) ಹಾಗೂ ಪಂಚ ಶೀಲಗಳ (ಐದು ಉಪದೇಶ) ಪಾಲನೆ ಮಾಡುತ್ತಾರೆ. ಕೆಲವು ಉಪಾಸಕರುಗಳು ಪೂತಿ೯ ಮೂರು ತಿಂಗಳುಗಳ ಉಪೋಸಥವನ್ನು ಇಡುತ್ತಾರೆ.

7. ಸಂಘದ ಸಧೃಡಿಕರಣ:

ವಷಾ೯ವಾಸವು ಭಿಕ್ಖೂಸಂಘದಲ್ಲಿ ಒಗ್ಗಟ್ಟು ಬೆಳೆಸುತ್ತದೆ. ಹಾಗೂ ಸಂಘದ ಸದಸ್ಯರ ಮಧ್ಯ ಸಹಯೋಗ ಹಾಗೂ ಆತ್ಮೀಯತೆ ಮೂಡಿಸುತ್ತದೆ.

8. ಪಾವರಣ್:

ವಷಾ೯ವಾಸದ ಸಮಾರೋಪವು ಪಾವರಣಾ ಎಂಬ ಉತ್ಸವದೊಂದಿಗೆ ಕೊನೆಗೊಳ್ಳುತ್ತದೆ. ಈ ಕೊನೆ ಘಳಿಗೆಯಲ್ಲಿ ಭಿಕ್ಖೂ ಸಂಘ ಒಬ್ಬರನೊಬ್ಬರ ತಪ್ಪಿಗೆ ಕ್ಷಮೆಯಾಚರಿಸುತ್ತಾರೆ. ಹಾಗೂ ಮುಂದೆ ಸಾಗೂವ ಧೃಢ ಸಂಕಲ್ಪವನ್ನು ಮಾಡುತ್ತಾರೆ.

✍️ನಂದಾದೀಪ ಬೋರಳೆ

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

59 minutes ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

1 hour ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

1 hour ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

1 hour ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

1 hour ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

2 hours ago