ಒಂದೇ ವರ್ಷದಲ್ಲಿ ಪಿಎಚ್‌ಡಿ!

ಕಲಬುರಗಿ.19.ಮೇ.25:- ಉನ್ನತ ಶಿಕ್ಷಣ ಎಲಾಖೆಯೆಲ್ಲಿ ವಿವಿಧ ಪ್ರಕರಣಗಳು ಬೆಳಕಿಗೆ ಬಂದಿದೆ.

ಒಂದೇ ವರ್ಷದಲ್ಲಿ ಪಿಎಚ್‌ಡಿ! 3 ಯುಜಿಸಿ ನಿಯಮಾವಳಿ ಪ್ರಕಾರ ಸ್ನಾತಕೋತ್ತರ ಪದವಿ ಪೂರ್ಣಗೊಂಡ ಬಳಿಕ ಯಾವುದೇ ವಿದ್ಯಾರ್ಥಿ ಪಿಎಚ್‌ ಡಿ ಪದವಿ ಪಡೆಯಬೇಕೆಂದು ಇಚ್ಚಿಸಿದರೆ ಆತ ಯುಜಿಸಿ ಅನುಮೋದಿತ ವಿಶ್ವವಿದ್ಯಾಲಯದಿಂದಲೇ ಪಿಎಚ್‌ಡಿ ಪದವಿ ಮಾಡಬೇಕೆಂಬ ಮೂಲನಿಯಮವಿದೆ, ಜೊತೆಗೆ, ಮಾಸ್ಟರ್ ಡಿಗ್ರಿ ಪಡೆದ ಬಳಿಕ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರವೇಶಾತಿಗೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಬಳಿಕ ಮುಂದಿನ ಮೂರು ವರ್ಷಗಳವರೆಗೆ ಸಂಶೋಧನಾ ಅಧ್ಯಯನ ಕೈಗೊಳ್ಳಬೇಕಾಗುತ್ತದೆ.

ಈ ಮೂರು ವರ್ಷದೊಳಗೆ ಎಂಥದ್ದೇ ಪರಿಸ್ಥಿತಿ ಎದುರಾದರೂ ಆ ವಿದ್ಯಾರ್ಥಿ ಪಿಎಚ್‌ಡಿ ಪದವಿ ಅರ್ಹತೆ ಪಡೆಯುವುದಿಲ್ಲ. ವಾಸ್ತವಾಂಶದ ಜೊತೆಗೆ ಇಂಥದ್ದೊಂದು ನಿಯಮಾವಳಿ ಇದ್ದಾಗ್ಯೂ, ಆಶಿಶ್ ದಯಾನಂದ 2018ರಲ್ಲಿ ಸಿಯುಕೆಯಿಂದ ಸ್ನಾತಕೋತ್ತರ ಪಡೆದ ತಕ್ಷಣ 2019ರಲ್ಲಿ ಅದ್ದೇಗೆ ಪಿಎಚ್‌ಡಿ ಪಡೆಯಲು ಸಾಧ್ಯವಿದೆ ಹೇಳಿ!

ಈ ಕುರಿತಾದ ಕಾನೂನು ಅಥವಾ ನಿರ್ಬಂಧನೆಗಳನ್ನು ಸಿಯುಕೆ ಆಯ್ಕೆ ಸಮಿತಿಯಲ್ಲಿದ್ದ ಪುಣ್ಯಾತ್ಮರು ಯಾರಾದರೂ ಅರ್ಥ ಮಾಡಿಸಬೇಕಾದಷ್ಟು ಮೂರ್ಖರಾಗಿದ್ದರಾ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಹಾಗಾಗಿ, ತಕ್ಷಣ ಆಶಿಶ್ ದಯಾನಂದ ಅವರನ್ನು ಸಿಯುಕೆ ಹುದ್ದೆಯಿಂದ ಬಿಡುಗಡೆಗೊಳಿಸಿ ಕಾನೂನಾತ್ಮಕ ಶಿಕ್ಷೆಗೆ ಶಿಫಾರಸು ಮಾಡಿದರೆ ತನ್ನ ಘನತೆ ಮತ್ತು ಗೌರವ ಉಳಿಸಿಕೊಳ್ಳಲು ಸಾಧ್ಯವಿದೆ.

ಎಲ್ಲಕ್ಕಿಂತಲೂ ಮುಖ್ಯವಾದ ಒಂದು ಪಾಯಿಂಟ್ ಏನೆಂದರೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಶಿಶ್ ದಯಾನಂದ ಅಗಸ‌ರ್ ನೇಮಕಾತಿ ಆದ ಆರೇಳು ತಿಂಗಳಲ್ಲಿ ಆತನಿಗೆ ಪಿಎಚ್‌ ಡಿ ಪದವಿ ನೀಡಿದ್ದ ಒಪಿಜೆಎಸ್ ವಿಶ್ವವಿದ್ಯಾಲಯ ಯುಜಿಸಿ ಅನುಮತಿಯೇ ಇಲ್ಲದೆ ಬೇಕಾಬಿಟ್ಟಿಯಾಗಿ ಪಿಎಚ್ಡಿಗಳನ್ನು ನೀಡುತ್ತಿದೆ ಎಂದು ಸ್ವತಃ ಮತ್ತೊಮ್ಮೆ ಯುಜಿಸಿ ಈ ವಿಶ್ವವಿದ್ಯಾಲಯವನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ಪ್ರಕಟಣೆಯೊಂದನ್ನು ಹೊರಡಿಸಿದೆ.

ಪರಮಾಶ್ಚರ್ಯವೆಂದರೆ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಕೇಂದ್ರ ಶಿಕ್ಷಣ ಇಲಾಖೆಯೊಂದಿಗೆ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸುವ ಸಿಯುಕೆ ವೈಸ್ ಚಾನ್ಸ ಲರ್ ಬಟ್ಟು ಸತ್ಯನಾರಾಯಣ ಅವರಿಗಾಗಲಿ, ಮಗನ ನೇಮಕಾತಿಯಲ್ಲಿ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿರುವ ಪ್ರೊ.ದಯಾನಂದ ಅಗಸರ್ ಅವರಿಗಾಗಲಿ ಈ ಕುರಿತು ಒಂದಿಷ್ಟೂ ಆತ್ಮ ಸಾಕ್ಷಿ ಕಾಡಿದಂತೆ ಕಾಣುತ್ತಿಲ್ಲ. ಹೀಗಾಗಿ, ಇಂದಿಗೂ ನಕಲಿ ಪಿಎಚ್‌ಡಿ ಸರ್ಟಿಫಿಕೆಟ್ ಮೇಲೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸ‌ರ್ ಹುದ್ದೆ ಗಳಿಸಿರುವ ಆಶಿಶ್ ದಯಾನಂದ ಅಗಸರ್ ಮಾತ್ರ ಇನ್ನೂ ಅದೇ ಹುದ್ದೆಯಲ್ಲಿ ಮುಂದುವರೆದಿರುವುದು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪಿಎಚ್‌ ಡಿ ಪದವಿ ಪಡೆದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಳಿಸಲಾಗದ ಗಾಯ ಉಂಟು ಮಾಡಿದೆ.

ದುರಂತವೆಂದರೆ, ಇದ್ಯಾವುದೂ ತಮಗ್ಯಾರಿಗೂ ಗೊತ್ತೇ ಇಲ್ಲ ಎನ್ನುವಂತೆ ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕು ಸಾಗಿಸುತ್ತಿದ್ದಾರೆ.

prajaprabhat

View Comments

Recent Posts

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…

60 minutes ago

ಆಗಸ್ಟ್ 11ರಂದು ಕೊಪ್ಪಳದಲ್ಲಿ ಯೂರಿಯ ರಸಗೊಬ್ಬರದ ವಿತರಣೆ

ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…

1 hour ago

ಅತಿಥಿ ಉಪನ್ಯಾಸಕರ ನೇಮಕ ಅರ್ಜಿ ಆಹ್ವಾನ

ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…

4 hours ago

ಆಧುನಿಕ ಕುರಿ ಮೇಕೆ ಸಾಕಾಣಿಕೆ ತರಬೇತಿ: ಹೆಸರು ನೋಂದಣಿಗೆ ಸೂಚನೆ

ಬೀದರ.09.ಆಗಸ್ಟ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡಾ ರಸ್ತೆ, ಬೀದರಿನಲ್ಲಿ ಆಗಸ್ಟ್.12 ರಿಂದ…

8 hours ago

ರಾಷ್ಟ್ರೀಯ ಲೋಕ ಆದಾಲತ್‌ನ ಪೂರ್ವಭಾವಿ ಸಭೆ ಅಗಸ್ಟ್.7ರಿಂದ

ಬೀದರ.09.ಆಗಸ್ಟ್.25:- ಗೌರವಾನ್ವಿತ ಕರ್ನಾಟ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ನಿರ್ದೇಶನದಂತೆ ದಿನಾಂಕ: 13-09-2025 ರಂದು ರಾಷ್ಟ್ರೀಯ ಲೋಕ…

8 hours ago

ತೋಟಗಾರಿಕೆ ದಿನಾಚರಣೆಗೆ ಸಿಇಓ ಡಾ.ಗಿರೀಶ ಬದೋಲೆ ಚಾಲನೆ

ಬೀದರ.09.ಆಗಸ್ಟ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಬೀದರ ಇವರುಗಳ…

8 hours ago