ಆಲಿಗಢ,21. ಏಪ್ರಿಲ್.25:- ಇಂದು ಅಲಿಗಢ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮೋಹನ್ ಭಾಗವತ್ ಅವರು, ಹಿಂದೂಗಳಲ್ಲಿ ಜಾತಿಭೇದವನ್ನು ಅಂತ್ಯಗೊಳಿಸಲು ಮತ್ತು ಏಕತೆಯನ್ನು ಉತ್ತೇಜಿಸಲು ‘ಒಂದು ಬಾವಿ,ಒಂದು ಮಂದಿರ ಮತ್ತು ಒಂದು ರುದ್ರಭೂಮಿ’ ತತ್ವಕ್ಕಾಗಿ ಪ್ರತಿಪಾದಿಸಿದ್ದಾರೆ.
ಅಲಿಗಡಕ್ಕೆ ತನ್ನ ಐದು ದಿನಗಳ ಭೇಟಿ ಸಂದರ್ಭದಲ್ಲಿ ಎಚ್‌ಬಿ ಇಂಟರ್ ಕಾಲೇಜ್ ಆವರಣದ ಸನಾತನ ಶಾಖೆಯಲ್ಲಿ ಸಂಘದ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಭಾಗವತ್, “ನಾವು ‘ಒಂದು ಬಾವಿ, ಒಂದು ಮಂದಿರ ಮತ್ತು ಒಂದು ರುದ್ರಭೂಮಿ’ಯ ತತ್ವವನ್ನು ಅನುಸರಿಸಿದಾಗ ಮಾತ್ರ ಸಾಮಾಜಿಕ ಸಾಮರಸ್ಯವು ಸಾಕಾರಗೊಳ್ಳುತ್ತದೆ, ಅದು ಸಮಾಜದ ಎಲ್ಲ ವರ್ಗಗಳ ನಡುವೆ ಭಿನ್ನತೆಗಳನ್ನು,ತಾರತಮ್ಯವನ್ನು ನಿವಾರಿಸಲು ಮತ್ತು ಏಕತೆಯನ್ನು ಬೆಳೆಸಲು ನೆರವಾಗುತ್ತದೆ” ಎಂದು ಹೇಳಿದರು.
ಸಮಾನತೆಗೆ ಕರೆ ನೀಡುವ ಜೊತೆಗೆ ಅವರು ‘ಪಂಚ ಪರಿವರ್ತನ’ದ ಮಹತ್ವವನ್ನೂ ಒತ್ತಿ ಹೇಳಿದರು.
ಈ ಪಂಚ ಪರಿವರ್ತನವು ಭಾರತೀಯ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಅಡಿಪಾಯವಾಗಿದೆ ಎಂದು ಬಣ್ಣಿಸಿದ ಅವರು, ಕುಟುಂಬ ಜಾಗ್ರತಿ, ಸಾಮಾಜಿಕ ಸಾಮರಸ್ಯ, ಸ್ವಾವಲಂಬನ, ಪರಿಸರ ಮತ್ತು ನಾಗರಿಕ ಶಿಸ್ತು ಇವು ಪಂಚಪರಿವರ್ತನದ ಐದು ಸ್ತಂಭಗಳಾಗಿವೆ ಎಂದರು.
‘ಶಾಂತಿ ಮತ್ತು ಸಮೃದ್ಧಿಯನ್ನು ಮುನ್ನಡೆಸಲು ಜಗತ್ತು ಭಾರತದತ್ತ ನೋಡುತ್ತಿದೆ. ಸಮಾಜವು ತನ್ನಿಂತಾನೇ ಬದಲಾಗುವುದಿಲ್ಲ,ನಾವು ಪ್ರತಿಯೊಂದೂ ಮನೆಯನ್ನು ತಲುಪುವ ಮೂಲಕ ಅದನ್ನು ಜಾಗ್ರತಗೊಳಿಸಬೇಕು’ ಎಂದರು.
ಸಾಮಾಜಿಕ ಏಕೀಕರಣಕ್ಕೆ ಒತ್ತು ನೀಡಿದ ಭಾಗವತ,ತೀಜ್‌ನಂತಹ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವಂತೆ ಮತ್ತು ತಮ್ಮ ಮನೆಗಳಿಗೆ ಎಲ್ಲ ಸಮುದಾಯಗಳ ಜನರನ್ನು ಆಹ್ವಾನಿಸುವ ಮೂಲಕ ಒಳಗೊಳ್ಳುವಿಕೆಯನ್ನು ಬೆಳೆಸುವಂತೆ ಆರೆಸ್ಸೆಸ್ ಕಾರ್ಯಕರ್ತರನ್ನು ಆಗ್ರಹಿಸಿದರು.
ಇದು ಸಹಜವಾಗಿಯೇ ಒಳಗೊಳ್ಳುವಿಕೆ ಮತ್ತು ಸಾಮರಸ್ಯದ ಮನೋಭಾವವನ್ನು ಬೆಳೆಸುತ್ತದೆ ಎಂದರು.
ಹಿಂದು ಸಮಾಜವನ್ನು ಒಗ್ಗೂಡಿಸುವಲ್ಲಿ ಮತ್ತು ಪ್ರತಿ ಕುಟುಂಬದಲ್ಲಿಯೂ ಭ್ರಾತೃತ್ವದ ಭಾವನೆಯನ್ನು ಮೂಡಿಸುವಲ್ಲಿ ಪೂರ್ವಭಾವಿ ಪಾತ್ರವನ್ನು ವಹಿಸುವಂತೆಯೂ ಕಾರ್ಯಕರ್ತರಿಗೆ ಕರೆ ನೀಡಿದ ಭಾಗವತ್, ಮನೆಯಲ್ಲಿ ನಿತ್ಯ ಪೂಜೆ, ಹವನ ಮತ್ತು ಸಾಮೂಹಿಕ ಭೋಜನದಂತಹ ಸರಳ ಆದರೆ ಅರ್ಥಪೂರ್ಣ ಆಚರಣೆಗಳ ಮೂಲಕ ಭಾರತಿಯ ಸಂಸ್ಕೃತಿಯನ್ನು ಸಂರಕ್ಷಿಸುವಂತೆ ಕುಟುಂಬಗಳಿಗೆ ಸೂಚಿಸಿದರು.
‘ಸಂಸ್ಕೃತಿ ಭಾರತದ ಅತಿ ದೊಡ್ಡ ಸಂಪತ್ತು ಮತ್ತು ಏಕತೆ ಹಾಗೂ ತಿಳುವಳಿಕೆಯ ಮೂಲಕ ಅದನ್ನು ಸಂರಕ್ಷಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ‘ಎಂದು ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…