ಬೆಂಗಳೂರು.19.ಏಪ್ರಿಲ್.25:- ರಾಜ್ಯಾಧ್ಯಂತ 22.04.2025ರಂದು ವಿಶ್ವ ಭೂ ದಿನ ಆಚರಿಸುವ ಕುರಿತು. (World Earth day Celebration) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಪ್ರತಿ ವರ್ಷವು ವಿಶ್ವದಾದ್ಯಂತ ಏಪ್ರಿಲ್ -22 ರಂದು ಪರಿಸರ ಸಂರಕ್ಷಣೆಗಾಗಿ ” ವಿಶ್ವ ಭೂ ದಿನ’ವನ್ನು ಆಚರಿಸಲಾಗುತ್ತಿದೆ.
ಭೂಮಿ ಮನುಷ್ಯ ಮಾತ್ರವಲ್ಲದೆ, ಎಷ್ಟೋ ಜೀವ ಸಂಕುಲೆಗಳು, ಸೂಕ್ಷಾಣುಗಳು, ಸಸ್ಯಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಸಲಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಮನುಷ್ಯನಿಂದ ಭೂಮಿಗೆ ಕಂಟಕವಾಗಿದೆ.
ಭೂಮಿಯ ಮೇಲೆ ಇಂದು ಪ್ಲಾಸ್ಟಿಕ್ ಬಳಕೆ, ತಾಪಮಾನ ಏರಿಕೆ, ಮರಳುಗಾಡು ನಿರ್ಮಾಣವಾಗುತ್ತಿರುವುದು. ಜನಸಂಖ್ಯೆ ಹೆಚ್ಚಳ, ಕಾಡುನಾಶ ಹೀಗೆ ಅನೇಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದರೆ ನಾವು ಭೂಮಿಯನ್ನು ಉಳಿಸುವ ಕೆಡೆಗೆ ಯೋಚಿಸುತ್ತಿಲ್ಲ. ಈ ಕುರಿತು. ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.
2025 ರ ಭೂ ದಿನದ ಥೀಮ್ “ನಮ್ಮ ಶಕ್ತಿ, ನಮ್ಮ ಗ್ರಹ”, ಈ ಥೀಮ್ ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮತ್ತು ಸುಸ್ಥಿರ ಭವಿಷ್ಯವನ್ನು ಸಾಧಿಸುವಲ್ಲಿ ನವೀಕರಿಸಬಹುದಾದ ಶಕ್ತಿಯ ಮಹತ್ವವನ್ನು ಒತ್ತಿಹೇಳುತ್ತದೆ.
ಭಾರತ ಸರ್ಕಾರವು ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅಡಿಯಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಈ ನಿಟ್ಟಿನಲ್ಲೆ, .ಈ ನಿಟ್ಟಿನಲ್ಲಿ, ಶಾಲಾ ಶಿಕ್ಷಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ 2 – – 22, 2025 ರಂದು ໐ ಭೂ ದಿನವನ್ನು ಆಚರಿಸಲು ಸಮಗ್ರ ಶಿಕ್ಷಾ ಅಡಿಯ ఇల ಕ್ಲಬ್‌ಗಳ ಮೂಲಕ “ಸಸ್ಯಕ್ಕಾಗಿ QR ಸಂಕೇತಗಳು” ಎಂಬ ಶೈಕ್ಷಣಿಕ ಉಪಕ್ರಮವನ್ನು ಪ್ರಾರಂಭಿಸಿದೆ.
ಉದ್ದೇಶಗಳು:
ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಪ್ರಾವೀಣತೆಯನ್ನು ಬೆಳೆಸಿ, QR ಕೋಡ್ ಉತ್ಪಾದನೆ ಮತ್ತು ಮಾಹಿತಿ ಪ್ರಸರಣದಲ್ಲಿ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವುದು.
ವಿದ್ಯಾರ್ಥಿಗಳಲ್ಲಿ ಮಿಷನ್ ಲೈಫ್ ಉದ್ದೇಶಗಳನ್ನು ಉತ್ತೇಜಿಸಿ, ಸುಸ್ಥಿರ ಜೀವನಕ್ಕೆ ಕೊಡುಗೆ ನೀಡುವ ಪರಿಸರ-ಪರ ನಡವಳಿಕೆಗಳು ಮತ್ತು ಮನೋಭಾವಗಳನ್ನು ಬೆಳೆಸುವುದು.
ಶಾಲೆಗಳು ತಮ್ಮ ಪರಿಸರ ಶಿಕ್ಷಣ ಕಾರ್ಯಕ್ರಮಗಳಲ್ಲಿ ಮರಗಳನ್ನು ಸಂಯೋಜಿಸಲು ಪ್ರೋತ್ಸಾಹಿಸುವುದು.
ಶಾಲಾ ಆವರಣದೊಳಗಿನ ಮರಗಳಿಗೆ QR ಕೋಡ್‌ಗಳನ್ನು ರಚಿಸುವ ಮೂಲಕ ಪರಿಸರ ಕಲಿಕೆಯನ್ನು ಡಿಜಿಟಲ್ ಕೌಶಲ್ಯಗಳೊಂದಿಗೆ ಸಂಯೋಜಿಸುವುದು.
ಶಾಲಾ ಹಂತದಲ್ಲಿ ಶಿಕ್ಷಕರು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:
1. ಶಿಕ್ಷಕರು ತಮ್ಮ ಶಾಲೆಯ ಯು-ಡೈಸ್ಕೋಡ್ ಬಳಸುವುದರ ಮೂಲಕ https://ecoclubs.education.gov.in/ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
2 . ಇಕೋಕ್ಲಬ್ ಫಾರ್ ಮಿಷನ್ * ಫಾರ್ ಮಿಷನ್ ಲೈಫ್ ಥೀಮ್ ಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನಗಳಿಸಿದ https://ecoclubs.education.gov.in/ಅಫ್ ಲೋಡ್ ಮಾಡುವುದು.
3. ಶಿಕ್ಷಕರು ತಮ್ಮ ಶಾಲೆಯ “ಸಸ್ಯಕ್ಕಾಗಿ QR ಸಂಕೇತಗಳು” ಚಟುವಟಿಕೆಯಡಿ ಶಾಲಾ ಆವರಣದೊಳಗಿನ ಸಸ್ಯವರ್ಗವನ್ನು ಗುರುತಿಸುವುದು ಮತ್ತು ಪ್ರತಿಯೊಂದು ಮರದ ಜಾತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಹೊಂದಿರುವ QR ಸಂಕೇತಗಳ ಉತ್ಪಾದನೆಯ ಮೂಲಕ ಅವುಗಳ ವಿವರಗಳ ದಾಖಲೀಕರಣವನ್ನು ಮಾಡುವುದು.
4. ಸಸ್ಯವರ್ಗಕ್ಕಾಗಿ QR ಕೋಡ್‌ಗಳನ್ನು ಳನ್ನು (ಸ್ಥಿರ/ಕ್ರಿಯಾತ್ಮಕ) ರಚಿಸಲು ಪರಿಸರ ಕ್ಲಬ್ ಉಸ್ತುವಾರಿ ಶಿಕ್ಷಕರು ವಿದ್ಯಾರ್ಥಿಗಳ ಗುಂಪನ್ನು ರಚಿಸಿ, ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಇರುವ ಸಸ್ಯಗಳ ಸಮೀಕ್ಷೆ ಕೈಗೊಂಡು ಅವುಗಳ ಪಟ್ಟಿ ಮಾಡುವಂತೆ ಮಾರ್ಗದರ್ಶನ ನೀಡುವುದು.
5. ಶಾಲಾ ಆವರಣದಲ್ಲಿ ಸಸ್ಯಗಳ ಕೊರತೆಯಿದ್ದರೆ, ವಿದ್ಯಾರ್ಥಿಗಳು ಹತ್ತಿರದ ಉದ್ಯಾನವನಗಳಿಗೆ ಭೇಟಿ ನೀಡಬಹುದು.
6. ಪಟ್ಟಿ ಮಾಡಿದ ಮರಗಳಿಗೆ ಸಂಖ್ಯೆಯನ್ನು ನೀಡಿ, ಆ ಮರದ ಹೆಸರು, ಗುಣಲಕ್ಷಣಗಳು ಹಾಗೂ 3 : https://ecoclubs.education.gov.in/
ಲೋಡ್ ಮಾಡುವುದು.
7. ಸ್ಥಿರ QR ಕೋಡ್ ಅನ್ನು ರಚಿಸಲು grcodemonkey ಇತ್ಯಾದಿ ಉಚಿತ ಆನ್‌ಲೈನ್ QR ಕೋಡ್ ಜನರೇಟರ್‌ಗಳನ್ನು ಬಳಸುವುದು.
ಉಪ ನಿರ್ದೇಶಕರು (ಆಡಳಿತ) ರವರು ತಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮವಹಿಸುವುದು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ ರವರ ಪತ್ರದಲ್ಲಿ ನೀಡಿರುವ ಸೂಚನೆಯಂತೆ ಶಾಲೆಗಳಲ್ಲಿ ಶಿಕ್ಷಕರು ಕ್ರಮವಹಿಸಲು ಮಾರ್ಗದರ್ಶನ ನೀಡುವಂತೆ ಸೂಚಿಸಿದೆ.
ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…
ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…
ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…
ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…
ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…
ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…